ಪಿಎಂಓಗೆ 5,000 ರೂ. ದಂಡ ಹೇರಿದ ಅಲಹಾಬಾದ್ ಹೈಕೋರ್ಟ್
Team Udayavani, Jan 18, 2018, 11:26 AM IST
ಹೊಸದಿಲ್ಲಿ : ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿ ಅಫಿದಾವಿತ್ ಸಲ್ಲಿಸಲು ವಿಫಲವಾದ ಪ್ರಧಾನ ಮಂತ್ರಿ ಕಾರ್ಯಾಲಯಕ್ಕೆ (ಪಿಎಂಓ) ಅಲಹಾಬಾದ್ ಹೈಕೋರ್ಟಿನ ಲಕ್ನೋ ಪೀಠ 5,000 ರೂ. ದಂಡ ಹೇರಿದೆ.
ಕಂಟ್ರೋಲರ್ ಆಫ್ ಆಡಿಟರ್ ಜನರಲ್ (ಸಿಎಜಿ) ಅವರ ವರದಿಯ ಆಧಾರದಲ್ಲಿ ಕ್ರಮಕ್ಕೆ ಆಗ್ರಹಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುನೀಲ್ ಕಂಡು ಎಂಬವರು ಸಲ್ಲಿಸಿದ್ದರು.
ಕೇಂದ್ರ ಸರಕಾರ ಸಿಎಜಿ ಅವರ ಕೇವಲ 10 ವರದಿಗಳನ್ನು ಮಾತ್ರವೇ ಪರಿಗಣಿಸಿ ಉಳಿದವುಗಳನ್ನು ಕಡೆಗಣಿಸಿದೆ ಎಂದು ಪಿಐಎಲ್ನಲ್ಲಿ ದೂರಲಾಗಿತ್ತು.
ಪಿಎಂಓ ಈ ಬಗ್ಗೆ ನಿಗದಿತ ಗಡುವಿನೊಳಗೆ ಅಫಿದಾವಿತ್ ಸಲ್ಲಿಸದ ಕಾರಣಕ್ಕೆ ನ್ಯಾ. ಸುಧೀರ್ ಅಗ್ರವಾಲ್ ಮತ್ತು ನ್ಯಾ. ಅಬ್ದುಲ್ ಮೊಯಿನ್ ಅವರನ್ನು ಒಳಗೊಂಡ ಪೀಠ ಪಿಎಂಓಗೆ 5,000 ರೂ. ದಂಡ ಹೇರಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ