ತೆಲಂಗಾಣ: 8900ಕೆಜಿ ಸ್ಪೋಟಕ ವಶ; ಇಬ್ಬರ ಬಂಧನ
Team Udayavani, Oct 14, 2019, 11:46 AM IST
ಹೈದರಾಬಾದ್: ಇಲ್ಲಿನ ರಾಚಕೊಂಡ ಪೊಲೀಸರು ಸುಮಾರು 8,900 ಕೆಜಿಯಷ್ಟು ಸ್ಪೋಟಕ ಸಾಮಾಗ್ರಿಗಳನ್ನು ವಶಕ್ಕೆ ಪಡೆದಿದ್ದು, ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ.
ಶನಿವಾರ ತಡರಾತ್ರಿ ಕೀಸರ ಪೊಲೀಸರು ಮತ್ತು ವಿಶೇಷ ತನಿಖಾ ದಳ ಅಧಿಕಾರಿಗಳು ಎರಡು ವಾಹನಗಳಲ್ಲಿದ್ದ ಸ್ಪೋಟಕ ಸಾಮಾಗ್ರಿಗಳನ್ನು ವಶಕ್ಕೆ ಪಡೆದಿದ್ದಾರೆ.
ವೆಂಕಟರಮಣ ಮತ್ತು ಶ್ರವಣ್ ರೆಡ್ಡಿ ಬಂಧಿತ ಆರೋಪಿಗಳು.
ಕೀಸರ ಠಾಣಾಧಿಕಾರಿ ನರೇಂದರ್ ಗೌಡ್ ಅವರ ನೇತೃತ್ವದ ತಂಡ ದಾಳಿ ನಡೆಸಿ ಸ್ಪೋಟಕಗಳನ್ನು ವಶಪಡಿಸಿಕೊಂಡಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.