ಚುನಾವಣಾ ದೇಣಿಗೆಯಲ್ಲಿ ಪಾರದರ್ಶಕತೆಯತ್ತ ಹೆಜ್ಜೆ


Team Udayavani, Jan 3, 2018, 9:05 AM IST

03-6.jpg

ನವದೆಹಲಿ: ಚುನಾವಣಾ ದೇಣಿಗೆಯಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಹೊಸ ಎಲೆಕ್ಟೋರಲ್‌ ಬಾಂಡ್‌ಗಳನ್ನು ಪರಿಚಯಿಸುತ್ತಿರುವ ಕೇಂದ್ರ ಸರ್ಕಾರ ಮಂಗಳವಾರ, ಅದರ ಸ್ವರೂಪವನ್ನು ಲೋಕಸಭೆಯ ಮುಂದಿಟ್ಟಿದೆ. ಅದರಂತೆ, ಪಕ್ಷಗಳಿಗೆ ದೇಣಿಗೆ ನೀಡಲು ಇಚ್ಛಿಸುವವರು ಭಾರತೀಯ ಸ್ಟೇಟ್‌ಬ್ಯಾಂಕ್‌ನಿಂದ ಚುನಾವಣಾ ಬಾಂಡ್‌ಗಳನ್ನು ಖರೀದಿಸಬಹುದು. 

ಅಂತೆಯೇ, ಅದನ್ನು ಪಡೆಯುವ ರಾಜಕೀಯ ಪಕ್ಷಗಳು ಮಾನ್ಯ ಬ್ಯಾಂಕ್‌ ಖಾತೆಯ ಮೂಲಕವೇ ದೇಣಿಗೆ ಸ್ವೀಕರಿಸಬೇಕು ಎಂದು ಲೋಕಸಭೆಯಲ್ಲಿ ಕೇಂದ್ರ ವಿತ್ತ ಸಚಿವ ಅರುಣ್‌ ಜೇಟ್ಲಿ ಮಾಹಿತಿ ನೀಡಿದ್ದಾರೆ. ರಾಜಕೀಯ ಪಕ್ಷಗಳಿಗೆ ನೀಡುವ ನಗದು ದೇಣಿಗೆಗೆ ಪರ್ಯಾಯವಾಗಿ ಈ ಎಲೆಕ್ಟ್ರೋರಲ್‌ ಬಾಂಡ್‌ಗಳನ್ನು ಪರಿಚಯಿಸಲಾಗಿದೆ. ಇವು ಜನವರಿ, ಏಪ್ರಿಲ್‌, ಜುಲೈ ಮತ್ತು ಅಕ್ಟೋಬರ್‌ ತಿಂಗಳಲ್ಲಿ ತಲಾ 10 ದಿನಗಳ ಕಾಲ ಎಸ್‌ಬಿಐನ ನಿರ್ದಿಷ್ಟ ಶಾಖೆಗಳಲ್ಲಿ ಲಭ್ಯವಿರುತ್ತದೆ. ಈ ಬಾಂಡ್‌ಗಳು 15 ದಿನಗಳ ಕಾಲ ಮಾನ್ಯವಾಗಿರುತ್ತದೆ. ಇದರಲ್ಲಿ ದೇಣಿಗೆ ನೀಡಿದವನ ಹೆಸರು ಇರುವುದಿಲ್ಲ ಎಂದೂ ಜೇಟ್ಲಿ ತಿಳಿಸಿದ್ದಾರೆ. ರಾಜಕೀಯ ದೇಣಿಗೆಯನ್ನು ಪಾರದರ್ಶಕವಾಗಿಸುವ ಉದ್ದೇಶದಿಂದ ಜೇಟ್ಲಿ ಅವರು ಕಳೆದ ಫೆ.1ರ ಬಜೆಟ್‌ನಲ್ಲೇ ಚುನಾವಣಾ ಬಾಂಡ್‌ಗಳ ಕುರಿತು ಘೋಷಿಸಿದ್ದರು. ಈಗ ಸರ್ಕಾರ ಈ ಯೋಜನೆಯನ್ನು ಅಂತಿಮಗೊಳಿಸಿದೆ.

ಇದೇ ವೇಳೆ, ದೇಣಿಗೆ ನೀಡಿದವನ ಹೆಸರೇ ಇರಲ್ಲ ಎಂದ ಮೇಲೆ ಈ ಯೋಜನೆಯ ಉದ್ದೇಶ ಹೇಗೆ ಈಡೇರುತ್ತದೆ ಎಂದು ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದ್ದು, ಅದಕ್ಕೆ ಜೇಟ್ಲಿ, “ದೇಣಿಗೆ ನೀಡಿದಾತನ ಬ್ಯಾಲೆನ್ಸ್‌ ಶೀಟ್‌ನಲ್ಲಿ ಬಾಂಡ್‌ ಬಗ್ಗೆ ಉಲ್ಲೇಖವಿರುತ್ತದೆ’ ಎಂದರು. ಬಿಟ್‌ಕಾಯಿನ್‌ ವ್ಯಾಪಾರ ಅಕ್ರಮ: ಇದೇ ಸಂದರ್ಭ  ದಲ್ಲಿ, ಬಿಟ್‌ಕಾಯಿನ್‌ ಸೇರಿದಂತೆ ಡಿಜಿಟಲ್‌ ಕರೆನ್ಸಿಗಳು ಕಾನೂ ನುಬದ್ಧವಲ್ಲ. ಅದು ಕಾನೂನುಬಾಹಿರ ಎಂದೂ ಜೇಟ್ಲಿ ಪುನರುಚ್ಚರಿಸಿದ್ದಾರೆ. ಇನ್ನೊಂದೆಡೆ, ಜಿಎಸ್‌ಟಿಯಡಿ
ಎಲ್ಲ ಉತ್ಪನ್ನಗಳಿಗೂ ಒಂದೇ ತೆರಿಗೆ ಸ್ಲಾಬ್‌ ವಿಧಿಸಲು ಸಾಧ್ಯವಿಲ್ಲ ಎಂದೂ ಅವರು ಸ್ಪಷ್ಟಪಡಿ ಸಿದ್ದಾರೆ. ಪಾಕ್‌ ವಿರುದ್ಧ ಘೋಷಣೆ: ಕೇಂದ್ರ ಸರ್ಕಾರದ ಪಾಕ್‌ ನೀತಿ ಬಗ್ಗೆ ಪ್ರತಿಪಕ್ಷಗಳು ಲೋಕಸಭೆಯಲ್ಲಿ ಪ್ರಶ್ನೆಯೆತ್ತಿದ್ದು, ದೇಶದ ಸೇನಾ ಶಿಬಿರಗಳನ್ನು ರಕ್ಷಿಸುವಲ್ಲಿ
ಸರ್ಕಾರ ವಿಫ‌ಲವಾಗಿದೆ ಎಂದು ಆರೋಪಿಸಿವೆ. ಜತೆಗೆ, ಪುಲ್ವಾಮಾದಲ್ಲಿ ಐವರು ಯೋಧರು ಹುತಾತ್ಮರಾದರೂ ಪ್ರಧಾನಿ ಮೋದಿ ಏಕೆ ಮೌನ ವಹಿಸಿದ್ದಾರೆ ಎಂದೂ ಕಾಂಗ್ರೆಸ್‌ ಕೇಳಿದೆ. ಈ ನಡುವೆ, ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸುವ ವೇಳೆ ಕೆಲವು ಬಿಜೆಪಿ ಸದಸ್ಯರು ಪಾಕ್‌ ವಿರುದ್ಧ ಘೋಷಣೆ ಕೂಗಿದ್ದಾರೆ.

ಇಂದು ತಲಾಖ್‌ ವಿಧೇಯಕ ಮಂಡನೆ: ತ್ರಿವಳಿ ತಲಾಖ್‌ ವಿಧೇಯಕ ರಾಜ್ಯಸಭೆಯಲ್ಲಿ ಬುಧವಾರ ಮಂಡನೆಯಾಗಲಿದೆ. ಈ ವಿಧೇಯಕಕ್ಕೆ ಸಂಬಂಧಿಸಿದ ಕಾಂಗ್ರೆಸ್‌ ಗೊಂದಲ ಮುಂದುವರಿದಿದ್ದು, ಮಂಗಳವಾರ ಬೆಳಗ್ಗೆ ಇತರೆ ಪ್ರತಿಪಕ್ಷಗಳ ಜತೆ ಸಭೆ ನಡೆಸಿ,
ಯಾವ ನಿಲುವು ತೆಗೆದುಕೊಳ್ಳುವುದು ಎಂಬ ಬಗ್ಗೆ ಚರ್ಚೆ ನಡೆಸಿದೆ. ಇದೇ ವೇಳೆ, ವಿಧೇಯಕಕ್ಕೆ ತಿದ್ದುಪಡಿ ತರುವಂತೆ ಕಾಂಗ್ರೆಸ್‌ ಕೇಳಬಾರದು ಎಂದು ಸರ್ಕಾರ ಹೇಳಿದೆ. 

15 ವರ್ಷಗಳಲ್ಲೇ ಹೊಸ ದಾಖಲೆ ಬರೆದ ರಾಜ್ಯಸಭೆ ಚಳಿಗಾಲದ ಅಧಿವೇಶನದ ಆರಂಭದಲ್ಲಿ ಗದ್ದಲವನ್ನೇ ಕಂಡ ರಾಜ್ಯಸಭೆ ಇದೀಗ ಹೊಸ ದಾಖಲೆಯೊಂದನ್ನು ಬರೆದಿದೆ. ಪ್ರಶ್ನೋತ್ತರ ಕಲಾಪದ ವೇಳೆ ಲಿಸ್ಟ್‌ ಮಾಡಲಾಗಿದ್ದ ಎಲ್ಲ 15 ಪ್ರಶ್ನೆಗಳಿಗೂ ಅವಕಾಶ ನೀಡುವ ಮೂಲಕ 15 ವರ್ಷಗಳಲ್ಲೇ ಹೊಸ ದಾಖಲೆ ಸೃಷ್ಟಿಯಾಗಿದೆ. ಜತೆಗೆ, ಶೂನ್ಯ ವೇಳೆಯಲ್ಲಿ 18 ಸದಸ್ಯರು ಸಾರ್ವಜನಿಕವಾಗಿ ಮಹತ್ವದ ವಿಚಾರಗಳನ್ನು ಚರ್ಚಿಸಿದ್ದಾರೆ. 2002ರಲ್ಲಿ ಇದೇ ರೀತಿ ಎಲ್ಲ ಪ್ರಶ್ನೆಗಳಿಗೂ ಉತ್ತರಿಸುವ ಅವಕಾಶ ಸಿಕ್ಕಿತ್ತು. 

ಅಂತರ್‌ಧರ್ಮೀಯ ವಿವಾಹಕ್ಕಿಲ್ಲ ಪ್ರೋತ್ಸಾಹಧನ
ಅಂತರ್‌ಧರ್ಮೀಯ ವಿವಾಹಕ್ಕೆ ಪ್ರೋತ್ಸಾಹ ಧನ ನೀಡುವ ಪ್ರಸ್ತಾಪ ಇಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಡಾ. ಅಂಬೇಡ್ಕರ್‌ ಸಾಮಾಜಿಕ ಸಮನ್ವಯ ಯೋಜನೆಯಡಿ ಅಂತರ್‌ಜಾತೀಯ ವಿವಾಹಕ್ಕೆ ಪ್ರೋತ್ಸಾಹಧನ ನೀಡಲಾಗುತ್ತಿದೆ. ಅದನ್ನು ಅಂತರ್‌ಧರ್ಮೀಯ ವಿವಾಹಕ್ಕೂ ವಿಸ್ತರಿಸುವ ಯಾವುದೇ ಯೋಚನೆ ಸರ್ಕಾರದ ಮುಂದಿಲ್ಲ ಎಂದು ಸಚಿವ ವಿಜಯ್‌ ಸಂಪ್ಲಾ ತಿಳಿಸಿದ್ದಾರೆ.

ಟಾಪ್ ನ್ಯೂಸ್

priyanka gandhi (2)

Modi ಮದುವೆ ಮನೆಯಲ್ಲಿ ಕೂತ ಮಾವ ಇದ್ದಂತೆ: ಪ್ರಿಯಾಂಕಾ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

priyanka gandhi (2)

Modi ಮದುವೆ ಮನೆಯಲ್ಲಿ ಕೂತ ಮಾವ ಇದ್ದಂತೆ: ಪ್ರಿಯಾಂಕಾ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

priyanka gandhi (2)

Modi ಮದುವೆ ಮನೆಯಲ್ಲಿ ಕೂತ ಮಾವ ಇದ್ದಂತೆ: ಪ್ರಿಯಾಂಕಾ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.