ಶತ್ರು ಪತ್ನಿ ಪೂನಂ ಎಸ್ಪಿ ಸೇರ್ಪಡೆ; ಲಕ್ನೋದಿಂದ ರಾಜನಾಥ್ ಸಿಂಗ್ ಎದುರು ಕಣಕ್ಕೆ
Team Udayavani, Apr 16, 2019, 4:32 PM IST
ಲಕ್ನೋ : ರಾಜಕಾರಣಿಯಾಗಿ ಪರಿವರ್ತಿತರಾಗಿರುವ ನಟ ಶತ್ರುಘ್ನ ಸಿನ್ಹಾ ಅವರ ಪತ್ನಿ ಪೂನಮ್ ಸಿನ್ಹಾ ಇಂದು ಮಂಗಳವಾರ ಸಮಾಜವಾದಿ ಪಕ್ಷ ಸೇರಿದರು.
ಪೂನಂ ಅವರು ಎಸ್ ಪಿ ಮುಖ್ಯಸ್ಥ ಅಖೀಲೇಶ್ ಯಾದವ್ ಅವರ ಪತ್ನಿ ಡಿಂಪಲ್ ಯಾದವ್ ಅವರನ್ನು ಲಕ್ನೋದಲ್ಲಿನ ಆಕೆಯ ನಿವಾಸದಲ್ಲಿ ಭೇಟಿಯಾದರು. ಈ ವಿದ್ಯಮಾನವನ್ನು ಸಮಾಜವಾದಿ ಪಕ್ಷ ಟ್ವಿಟರ್ನಲ್ಲಿ ದೃಢಪಡಿಸಿದೆ.
ಪೂನಂ ಅವರು ಲಕ್ನೋ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರೆದುರು ಎಸ್ಪಿ-ಬಿಎಸ್ಪಿ-ಆರ್ಎಲ್ಡಿ ಮೈತ್ರಿಕೂಟದ ಅಭ್ಯರ್ಥಿಯಾಗಿ ಸೆಣಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕಾಂಗ್ರೆಸ್ ಪಕ್ಷ ಸಿನ್ಹಾ ಅವರನ್ನು ಬೆಂಬಲಿಸುವ ನಿರೀಕ್ಷೆ ಇದೆ ಎಂದು ಮೂಲಗಳು ಹೇಳಿವೆ.