ಪೆಟ್ರೋಲ್ ಖಾಲಿಯಾಗಿ ನಿಂತ ಆಂಬುಲೆನ್ಸ್: ಆಸ್ಪತ್ರೆಗೆ ಸಾಗುತ್ತಿದ್ದ ಗರ್ಭಿಣಿ ಸಾವು
Team Udayavani, Oct 6, 2019, 9:02 AM IST
ಮಯೂರ್ ಭಂಜ್ (ಒಡಿಶಾ): ಹೆರಿಗೆ ನೋವಿನಲ್ಲಿದ್ದ ಗರ್ಭಿಣಿಯನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ಆಂಬುಲೆನ್ಸ್ ಪೆಟ್ರೋಲ್ ಖಾಲಿಯಾಗಿ ನಡುದಾರಿಯಲ್ಲಿ ನಿಂತ ಪರಿಣಾಮ ಮಹಿಳೆ ಮೃತಪಟ್ಟ ಘಟನೆ ಒಡಿಶಾದ ಹನಾಡದಲ್ಲಿ ನಡೆದಿದೆ.
ಹನಾಡ ಗ್ರಾಮದ ಚಿತ್ತರಂಜನ್ ಮುಂಡಾ ಅವರ ಪತ್ನಿ ತುಳಸಿ ಮುಂಡಾ ಅವರನ್ನು ಆಸ್ಪತ್ರೆಗೆ ಮೂಲಕ ಕರೆದುಕೊಂಡು ಹೋಗಲಾಗಿತ್ತು. ಆಕೆಯ ಪರಿಸ್ಥಿತಿ ಗಂಭಿರವಾಗಿದ್ದ ಕಾರಣ ಆಕೆಯನ್ನು ಮತ್ತೊಂದು ಆಸ್ಪತ್ರೆಗೆ ದಾಖಲಿಸಲು ವೈದ್ಯರು ಸೂಚಿಸಿದ್ದರು. ಆದರೆ ಆಸ್ಪತ್ರೆಯಿಂದ ಅಥವಾ ಯಾವುದೇ ಸರಕಾರಿ ಆಂಬುಲೆನ್ಸ್ ಸಿಗದ ಕಾರಣ ಚಿತ್ತರಂಜನ್ ಖಾಸಗಿ ಆಂಬುಲೆನ್ಸ್ ನಲ್ಲಿ ಪತ್ನಿಯನ್ನು ಕರೆದುಕೊಂಡು ಹೋದರು.
ಆದರೆ ಖಾಸಗಿ ಆಂಬುಲೆನ್ಸ್ ಇಂಧನ ಖಾಲಿಯಾಗಿ ನಡು ದಾರಿಯಲ್ಲಿ ನಿಂತು ಬಿಟ್ಟಿತ್ತು. ನಂತರ ಎರಡು ಘಂಟೆಯ ಬಳಿಕ ಇನ್ನೊಂದು ಆಂಬುಲೆನ್ಸ್ ದೊರೆತಿದ್ದು, ಅಸ್ಪತ್ರೆಗೆ ದಾಖಲಿಸುವ ವೇಳೆಗೆ ತುಳಸಿ ಮೃತಪಟ್ಟಿದ್ದರು.