ಸುಂದರ ಮುಖ ನೋಡಿ ಯಾರೂ ಮತ ಚಲಾಯಿಸಲ್ಲ!; ಸಚಿವ ನಾರಾಯಣ ಝಾ

Team Udayavani, Jan 25, 2019, 7:55 AM IST

ಪಾಟ್ನಾ: ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಗೊಂಡಿರುವ ಪ್ರಿಯಾಂಕಾ ಗಾಂಧಿ ತುಂಬಾ ಚೆಲುವೆ, ಆದರೆ ರಾಜಕೀಯವಾಗಿ ಆಕೆಯ ಸಾಧನೆ ಶೂನ್ಯ ಎಂದು ಹೇಳಿರುವ ಬಿಜೆಪಿ ಮುಖಂಡ, ಬಿಹಾರ ಸಚಿವ ವಿನೋದ್ ನಾರಾಯಣ್ ಝಾ, ಮತದಾರರು ಸುಂದರವಾದ ಮುಖದ ಆಧಾರದ ಮೇಲೆ ಮತ ಹಾಕುವುದಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರಿಯಾಂಕಾ ಆಗಮನದಿಂದಾಗಿ ಉತ್ತರಪ್ರದೇಶ ಕ್ಷೇತ್ರದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಆಕೆ ರಾಬರ್ಟ್ ವಾದ್ರಾನ ಪತ್ನಿ. ವಾದ್ರಾ ಭೂಹಗರಣ ಸೇರಿದಂತೆ ಹಲವಾರು ಭ್ರಷ್ಟಾಚಾರ ಪ್ರಕರಣಗಳಲ್ಲಿ ಶಾಮೀಲಾಗಿರುವುದಾಗಿ ಝಾ ಆರೋಪಿಸಿದರು.

ಸುಂದರವಾದ ಮುಖ ನೋಡಿ ಯಾರೂ ಮತ ಚಲಾಯಿಸುವುದಿಲ್ಲ. ರಾಜಕೀಯವಾಗಿಯೂ ಪ್ರಿಯಾಂಕಾ ಸಾಧನೆ ಏನೇನೂ ಇಲ್ಲ. ಹೀಗಾಗಿ ಆಕೆಯ ಆಗಮನದಿಂದ ರಾಜಕೀಯವಾಗಿ ಏನೂ ಪರಿಣಾಮ ಬೀರಲ್ಲ ಎಂದು ಝಾ ಎಎನ್ ಐ ಜೊತೆ ಮಾತನಾಡುತ್ತ ತಿಳಿಸಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ