ತನಗೆ ಕೋವಿಡ್-19 ಇದೆಯೆಂದು ಭಯಪಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದ ವ್ಯಕ್ತಿಗಿರಲಿಲ್ಲ ಸೋಂಕು!
Team Udayavani, Mar 27, 2020, 10:26 AM IST
ಹೊಸದಿಲ್ಲಿ: ತನಗೆ ಕೋವಿಡ್-19 ಸೋಂಕು ಇದೆಯೆಂದು ಭಾವಿಸಿ ಆಸ್ಪತ್ರೆಯ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ ವ್ಯಕ್ತಿಗೆ ಸೋಂಕು ಲಕ್ಷಣಗಳು ಇರಲಿಲ್ಲ ಎಂದು ತಿಳಿದುಬಂದಿದೆ.
ಇತ್ತೀಚೆಗೆ ಆಸ್ಟ್ರೇಲಿಯಾದ ಸಿಡ್ನಿಯಿಂದ ಭಾರತಕ್ಕೆ ಆಗಮಿಸಿದ್ದ ಯುವಕನನ್ನು ಕೋವಿಡ್-19 ಸೋಂಕು ಶಂಕೆಯಿಂದ ಮಾರ್ಚ್ 18ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ತನಗೆ ಕೋವಿಡ್-19 ಸೋಂಕು ತಾಗಿದೆ ಎಂದು ಭಯಪಟ್ಟ ಆತ ವೈದ್ಯಕೀಯ ವರದಿ ಬರುವುದರ ಒಳಗೆ ಆಸ್ಪತ್ರೆಯ ಏಳನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ. ಸದ್ಯ ಆತನ ಗಂಟಲು ದ್ರವ ವರದಿ ಬಂದಿದ್ದು ಆತನಿಗೆ ಕೋವಿಡ್-19 ಸೋಂಕು ತಗುಲಿಲ್ಲ ಎಂದು ದೃಢವಾಗಿದೆ.
ಪಂಜಾಬ್ ಮೂಲದವನಾಗಿರುವ 23 ವರ್ಷದ ಯುವಕನನ್ನು ಸೋಂಕು ಶಂಕೆಯಿಂದ ದಿಲ್ಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕರೆತಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ ಆತನ ಮನೆಯವರು ಆಸ್ಪತ್ರೆಯ ವಿರುದ್ಧವೇ ದೂರು ದಾಖಲಿಸಿದ್ದಾರೆ. ತಮ್ಮ ಮಗನಿಗೆ ಆಸ್ಪತ್ರೆಯ ಸಿಬ್ಬಂದಿ ಸಾವಿನ ಭಯ ಮೂಡಿಸಿದ್ದಾರೆ. ಆತನನ್ನು ಭೇಟಿಯಾಗಲೂ ನಮಗೆ ಅವಕಾಶ ನೀಡಿಲ್ಲ. ಇದೇ ಕಾರಣಕ್ಕೆ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ದೂರು ದಾಖಲಿಸಿದ್ದಾರೆ ಎಂದು ವರದಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಶ್ಮೀರಿ ನಟಿಯ ಮನೆಯ ಮೇಲೆ ದಾಳಿ ಮಾಡಿದ ಲಷ್ಕರ್ ಉಗ್ರರು; ನಟಿ ಸಾವು!
ನಾಳೆ ಕೇರಳಕ್ಕೆ ಮುಂಗಾರು ಪ್ರವೇಶ; ಐದು ದಿನ ಸಾಧಾರಣ ಮಳೆ ಸಾಧ್ಯತೆ
ಮೋದಿ ಸರ್ಕಾರಕ್ಕೆ ಇಂದಿಗೆ 8 ವರ್ಷ; 2014ರ ಮೇ 26ರಂದು ಪ್ರಧಾನಿಯಾಗಿ ಪದಗ್ರಹಣ
ಕೂಲ್ಡ್ರಿಂಕ್ಸ್ನಲ್ಲಿ ಹಲ್ಲಿ! ಅಹ್ಮದಾಬಾದ್ ಮೆಕ್ಡೊನಾಲ್ಡ್ ವಿರುದ್ಧ ಆರೋಪ
ಮಂಗಳಕ್ಕೆ ವಿಜ್ಞಾನಿಗಳ 30 ದಿನಗಳ ಟ್ರಿಪ್! ಅಮೆರಿಕ ಬಾಹ್ಯಾಕಾಶ ಸಂಸ್ಥೆಯ ವಿಶಿಷ್ಟ ಸಾಹಸ