ರಶ್ಯದೊಂದಿಗಿನ ಭಾರತದ ರಕ್ಷಣಾ ವಹಿವಾಟಿನ ಮೇಲೆ ಅಮೆರಿಕ, ಚೀನ ಕಣ್ಣು
Team Udayavani, Oct 5, 2018, 11:32 AM IST
ಹೊಸದಿಲ್ಲಿ : ಭಾರತಕ್ಕೆ ಆಗಮಿಸಿ ವಿದೇಶ ಸಚಿವೆ ಸುಶ್ಮಾ ಸ್ವರಾಜ್ ಅವರಿಂದ ಹಾರ್ದಿಕ ಸ್ವಾಗತ ಪಡೆದು ಪ್ರಧಾನಿ ನರೇಂದ್ರ ಮೋದಿ ಅವರಿಂದ ಆಲಿಂಗಿತರಾಗಿರುವ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರಿಂದು ಭಾರತದೊಂದಿಗೆ ರಕ್ಷಣಾ ಪರಿಕರ ಖರೀದಿಯ ಮಹತ್ವದ ಒಪ್ಪಂದಕ್ಕೆ ಸಹಿಹಾಕಲಿದ್ದಾರೆ.
ಇಡಿಯ ವಿಶ್ವ, ಮುಖ್ಯವಾಗಿ ಅಮೆರಿಕ ಮತ್ತು ಚೀನ, ಭಾರತದಲ್ಲಿ ಪುಟಿನ್ ಅವರ ನಡೆ-ನುಡಿ-ವಹಿವಾಟನ್ನು ತದೇಕ ಚಿತ್ತದಿಂದ ಗಮನಿಸುತ್ತಿದೆ.
ಹೈದರಾಬಾದ್ ಹೌಸ್‌ನಲ್ಲಿಂದು ಶುಕ್ರವಾರ ಬೆಳಗ್ಗೆ ನಡೆಯುವ ಉಭಯ ನಾಯಕರೊಳಗಿನ ಮಾತುಕತೆಯ ವೇಳೆ ಅಜೆಂಡಾದ ಅಗ್ರಸ್ಥಾನದಲ್ಲಿರುವ ವಿಷಯವೆಂದರೆ ಭಾರತ ರಶ್ಯದಿಂದ ನಡೆಸಲಿರುವ ಎಸ್ 400 ವಾಯು ರಕ್ಷಣಾ ವ್ಯವಸ್ಥೆಯ ಖರೀದಿ ವ್ಯವಹಾರ.
ಈ ಪ್ರಸ್ತಾವಿತ ವ್ಯವಹಾರಕ್ಕೆ ಅಮೆರಿಕ ಈಗಾಗಲೇ ಭಾರತಕ್ಕೆ ಎಚ್ಚರಿಕೆಯ ಮಾತುಗಳನ್ನು ಹೇಳಿ ತನ್ನ ಆಕ್ಷೇಪವನ್ನು ವ್ಯಕ್ತಪಡಿಸಿದೆ.
ಅಮೆರಿಕ ಈಗಾಗಲೇ ಹಾಕಿರುವ ನಿಷೇಧದ ಪ್ರಕಾರ ಭಾರತ ಸಹಿತ ವಿಶ್ವದ ಯಾವುದೇ ದೇಶ ಇರಾನ, ಉತ್ತರ ಕೊರಿಯ ಅಥವಾ ರಶ್ಯದೊಂದಿಗೆ ತೈಲ, ಶಸ್ತ್ರಾಸ್ತ್ರ ಖರೀದಿಯ ವಹಿವಾಟು ನಡೆಸುವಂತಿಲ್ಲ.
ಆದರೂ ಭಾರತ ಅಮೆರಿಕಕ್ಕೆ ಸಡ್ಡು ಹೊಡೆದು ರಶ್ಯಕ್ಕೆ ನಿಕಟವಾಗಿದ್ದು 36,000 ಕೋಟಿ ರೂ.ಗಳ ರಕ್ಷಣಾ ವಹಿವಾಟು ನಡೆಸಲು ಮುಂದಾಗಿದೆ. ಇದರಿಂದಾಗಿ ಅಮೆರಿಕ ಈಗಿನ್ನು ಚೀನದ ವಿರುದ್ಧ ಪ್ರತಿತಂತ್ರ ರೂಪಿಸಲು ಭಾರತವನ್ನು ತನ್ನ ಹತ್ತಿರಕ್ಕೆ ಸೆಳೆದುಕೊಳ್ಳುವ ತಂತ್ರವನ್ನು ಕಾರ್ಯಗತ ಗೊಳಿಸುವ ಬಿಗಿ ಹಗ್ಗದ ಮೇಲಿನ ನಡೆಯನ್ನು ಕೈಗೊಳ್ಳಬೇಕಾಗುತ್ತದೆ ಎಂದು ವಿಶ್ಲೇಷಕರು ಹೇಳಿದ್ದಾರೆ.
ರಶ್ಯದಿಂದ ಚೀನ ಎಸ್ 400 ಮತ್ತು ಎಸ್‌ಯು 35 ಫೈಟರ್ ಜೆಟ್‌ಗಳನ್ನು ಖರೀದಿಸುವುದರ ವಿರುದ್ಧ ಅಮೆರಿಕ ಕಳೆದ ತಿಂಗಳಲ್ಲಷ್ಟೇ ನಿಷೇಧ ಹೇರಿದೆ. ಈಗಿನ್ನು ಭಾರತದ ಮೇಲಿನ ಪರಿಣಾಮ ಏನೆಂಬುದನ್ನು ಕಾದು ನೋಡಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Farrukhabad; ಬಿಜೆಪಿ ಅಭ್ಯರ್ಥಿಗೆ ಎಂಟು ಬಾರಿ ಮತದಾನ ಮಾಡಿದ ವ್ಯಕ್ತಿ; ವಿಡಿಯೋ ವೈರಲ್
Unemployment; ಭಾರತದ ಯುವಕರಿಗೆ ಕೆಲಸ ಸಿಗಬೇಕಾದರೆ ಮೋದಿ ನಿವೃತ್ತಿಯಾಗಬೇಕು: ರಾಹುಲ್ ಗಾಂಧಿ
47.8 degrees; ಉತ್ತರ ಭಾರತದ ಹಲವೆಡೆ ಶಾಖದ ಅಲೆ ಅಲರ್ಟ್!
TRAI ವ್ಯಾಪ್ತಿಗೆ ಫೇಸ್ಬುಕ್, ವಾಟ್ಸ್ಆ್ಯಪ್, ಎಕ್ಸ್?
Report; 4 ವರ್ಷಗಳಲ್ಲಿ ದೇಶದ ಕೃಷಿ ಪ್ರದೇಶದ 50 ಲಕ್ಷ ಮರಗಳು ಕಣ್ಮರೆ!
MUST WATCH
ಹೊಸ ಸೇರ್ಪಡೆ
Bengaluru: ಬರ್ತ್ ಡೇ ಹೆಸರಲ್ಲಿ ಮಾಡೆಲ್, ಟೆಕ್ಕಿಗಳ ರೇವ್ ಪಾರ್ಟಿ; ಸಿಸಿಬಿ ಪೊಲೀಸರ ದಾಳಿ
IPL ಮುಂದಿನ ವರ್ಷವೂ ಧೋನಿ ಆಡುತ್ತಾರಾ..?; ರಾಯುಡು ಹೇಳಿದ್ದೇನು?
Farrukhabad; ಬಿಜೆಪಿ ಅಭ್ಯರ್ಥಿಗೆ ಎಂಟು ಬಾರಿ ಮತದಾನ ಮಾಡಿದ ವ್ಯಕ್ತಿ; ವಿಡಿಯೋ ವೈರಲ್
Ebrahim Raisi; ಹೆಲಿಕಾಪ್ಟರ್ ದುರಂತದಲ್ಲಿ ಕೊನೆಯುಸಿರೆಳೆದ ಇರಾನ್ ಅಧ್ಯಕ್ಷ ರೈಸಿ
Unemployment; ಭಾರತದ ಯುವಕರಿಗೆ ಕೆಲಸ ಸಿಗಬೇಕಾದರೆ ಮೋದಿ ನಿವೃತ್ತಿಯಾಗಬೇಕು: ರಾಹುಲ್ ಗಾಂಧಿ