ಶವವಾಗಿ ಪತ್ತೆಯಾದ ರಾಡಿಸನ್ ಬ್ಲೂ ಹೋಟೆಲ್ ಮಾಲೀಕ ಅಮಿತ್ ಜೈನ್
Team Udayavani, Nov 20, 2022, 10:21 AM IST
ಹೊಸದಿಲ್ಲಿ: ಗಾಜಿಯಾಬಾದ್ ನ ಜನಪ್ರಿಯ ರಾಡಿಸನ್ ಬ್ಲೂ ಹೋಟೆಲ್ ನ ಮಾಲೀಕ ಅಮಿತ್ ಜೈನ್ ದೆಹಲಿಯ ಕಾಮನ್ ವೆಲ್ತ್ ವಿಲೇಜ್ ಪ್ರದೇಶದಲ್ಲಿನ ಅವರ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ದೆಹಲಿಯ ಮಾಂಡವಲಿ ಪೊಲೀಸ್ ಠಾಣೆಯ ಪೊಲೀಸ್ ನಿಯಂತ್ರಣ ಕೊಠಡಿಗೆ ಶನಿವಾರ ಕರೆ ಬಂದಿದ್ದು, ಕಾಮನ್‌ವೆಲ್ತ್ ಗೇಮ್ಸ್ ಗ್ರಾಮದಲ್ಲಿರುವ ತನ್ನ ಮನೆಯಲ್ಲಿ ವ್ಯಕ್ತಿಯೊಬ್ಬ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ ಎಂದು ಕರೆ ಮಾಡಿದವರು ಹೇಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತರು ಕೌಶಂಬಿಯಲ್ಲಿರುವ ರಾಡಿಸನ್ ಬ್ಲೂ ಹೋಟೆಲ್ ಮಾಲೀಕ ಎಂದು ಪ್ರಾಥಮಿಕ ತನಿಖೆಯಿಂದ ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಮಿತ್ ಜೈನ್ ಕಾಮನ್‌ವೆಲ್ತ್ ಗೇಮ್ಸ್ ಗ್ರಾಮದಲ್ಲಿರುವ ಕರೆ ಮಾಡಿದವರ ನಿವಾಸಕ್ಕೆ ಭೇಟಿ ನೀಡಿದ್ದರು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ನೋಯ್ಡಾದಲ್ಲಿನ ತನ್ನ ಹೊಸ ಮನೆಯಲ್ಲಿ ಉಪಾಹಾರ ಸೇವಿಸಿದ ನಂತರ ಅವರು ಕಾಮನ್ ವೆಲ್ತ್ ವಿಲೇಜ್ ಗೆ ಬಂದರು, ಶೀಘ್ರದಲ್ಲೇ ಅವರು ತಮ್ಮ ಕುಟುಂಬದೊಂದಿಗೆ ಹೊಸ ಮನೆಗೆ ಹೋಗಬೇಕಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ನಂತರ ಕೆಲವು ವಸ್ತುಗಳನ್ನು ತೆಗೆದುಕೊಳ್ಳಲು ನಿವಾಸಕ್ಕೆ ಬಂದ ಜೈನ್ ಅವರ ಮಗ ಮತ್ತು ಅವರ ಡ್ರೈವರ್ ಅವರು ನೇಣು ಬಿಗಿದಿರುವುದನ್ನು ಕಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕೋವಿಡ್ ಪರಿಸ್ಥಿತಿ : ಉನ್ನತ ಮಟ್ಟದ ಸಭೆ ನಡೆಸಿದ ಪ್ರಧಾನಿ ಮೋದಿ
ಪರಾರಿಯಾಗುವ ವೇಳೆ ಗುರುದ್ವಾರಕ್ಕೆ ನುಸುಳಿ ಅಟ್ಟಹಾಸ ತೋರಿದ್ದ ಅಮೃತಪಾಲ್ ಸಿಂಗ್
ಕಾಂಚೀಪುರಂ ಪಟಾಕಿ ಘಟಕದಲ್ಲಿ ಅಗ್ನಿ ಅವಘಡ ; ಕನಿಷ್ಠ 8 ಜನ ಮೃತ್ಯು
ದೆಹಲಿಯಲ್ಲಿ ಪ್ರಧಾನಿ ವಿರುದ್ಧ ಪೋಸ್ಟರ್ ಅಭಿಯಾನ:100 ಎಫ್‌ಐಆರ್,6 ಜನ ಅರೆಸ್ಟ್
ಒಮಾನ್‌ನಿಂದ ಇಸ್ಲಾಂ ವಿವಾದಿತ ಪ್ರಚಾರಕ ಜಕೀರ್ ನಾಯ್ಕ ಗಡಿಪಾರು?