ರಫೇಲ್ ಖರೀದಿ ಬೆಲೆ ತಿಳಿಸಿ 5 ಕೋಟಿ ಗೆಲ್ಲಿ: ಕಾಂಗ್ರೆಸ್ ಫ್ಲೆಕ್ಸ್
Team Udayavani, Oct 16, 2018, 5:31 PM IST
ಪಟ್ನಾ : ಆಳುವ ಎನ್ಡಿಎ ಸರಕಾರ ಫ್ರಾನ್ಸ್ ನಿಂದ ಖರೀದಿಸಿರುವ ರಫೇಲ್ ಫೈಟರ್ ಜೆಟ್ ವಿಮಾನಗಳ ಬೆಲೆ ಎಷ್ಟೆಂಬುದನ್ನು ನಿಖರವಾಗಿ ತಿಳಿಸಿ ಐದು ಕೋಟಿ ರೂ. ಇನಾಮು ಗೆಲ್ಲಿ ಎಂಬ ಫ್ಲೆಕ್ಸ್ ಗಳು ಬಿಹಾರದ ರಾಜಧಾನಿ ಪಟ್ನಾದಲ್ಲಿ ಕಂಡು ಬಂದಿರುವುದು ಜನರ ಕುತೂಹಲ ಕೆರಳಿಸಿದೆ.
ನಗರದ ಆದ್ಯಂತ ಈ ಬಗೆಯ ಫ್ಲೆಕ್ಸ್ ಗಳನ್ನು ದಸರಾ ಪೂಜಾ ಧಮಾಕಾ ಎಂಬ ರೀತಿಯಲ್ಲಿ ಕಾಂಗ್ರೆಸ್ ನಾಯಕರಾದ ಸಿದ್ಧಾರ್ಥ್ ಕ್ಷತ್ರಿಯ, ವೆಂಕಟೇಶ್ ಹಾಕಿಸಿರುವುದಾಗಿ ವರದಿಗಳು ತಿಳಿಸಿವೆ. ಆದರೆ ಈ ಬಗ್ಗೆ ತಮಗೇನೂ ಗೊತ್ತಿಲ್ಲ ಎಂದು ಬಿಹಾರದ ಕಾಂಗ್ರೆಸ್ ಅಧ್ಯಕ್ಷ ಮದನ್ ಮೋಹನ್ ಝಾ ಜಾಣತನದಿಂದ ಹೇಳಿದ್ದಾರೆ.
ಬಿಹಾರದ ಡಿಸಿಎಂ ಸುಶೀಲ್ ಕುಮಾರ್ ಮೋದಿ ಅವರು ಈ ಫ್ಲೆಕ್ಸ್ ಬಗ್ಗೆ ಕಿಡಿಕಾರಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ರಫೇಲ್ ಕುರಿತ ಸುಳ್ಳನ್ನು ನೂರು ಬಾರಿ ಹೇಳಿದರೂ ಜನ ನಂಬುವುದಿಲ್ಲ; ಆದುದರಿಂದ ರಾಹುಲ್ ಗೇ ಐದು ಕೋಟಿ ರೂ. ಇನಾಮು ನೀಡುವುದು ಒಳ್ಳೆಯದು ಎಂದು ಸುಶೀಲ್ ಮೋದಿ ಟೀಕಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ
Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?
Vijay Mallya ಹಸ್ತಾಂತರಕ್ಕೆ ಫ್ರಾನ್ಸ್ನೊಂದಿಗೆ ಭಾರತ ಮಾತುಕತೆ
VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್
MUST WATCH
ಹೊಸ ಸೇರ್ಪಡೆ
Devotion: ಭಕ್ತಿಯ ಅರ್ಥವಾದರೂ ಏನು?
Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು