ರಫೇಲ್ ರಹಸ್ಯ ? ಗೋವಾ ಸಿಎಂ ಪರೀಕರ್ ಜತೆ ರಾಹುಲ್ ಖಾಸಗಿ ಭೇಟಿ
Team Udayavani, Jan 29, 2019, 9:37 AM IST
ಪಣಜಿ : ವಿವಾದಿತ ರಫೇಲ್ ಫೈಟರ್ ಜೆಟ್ ಡೀಲ್ ನ ರಹಸ್ಯ ಮಾಹಿತಿಗಳು ಮಾಜಿ ರಕ್ಷಣಾ ಸಚಿವ ಹಾಗೂ ಗೋವಾ ಸಿಎಂ ಆಗಿರುವ ಮನೋಹರ್ ಪರೀಕರ್ ಅವರ ಬಳಿ ಇವೆ ಎಂಬ ತನ್ನ ಆರೋಪವನ್ನು ಪುನರುಚ್ಚರಿಸಿದ ಒಂದು ದಿನದ ತರುವಾಯ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಇಂದು ಮಂಗಳವಾರ ಅನಾರೋಗ್ಯದಿಂದ ಚೇತರಿಸಿಕೊಳ್ಳುತ್ತಿರುವ ಪರೀಕರ್ ಜತೆಗೆ ಮುಚ್ಚಿದ ಬಾಗಿಲ ಹಿಂದೆ ಮಾತುಕತೆ ನಡೆಸಿದರು.
ಮಾತುಕತೆ ವಿವರಗಳನ್ನು ಬಹಿರಂಗಪಡಿಸದ ರಾಹುಲ್ ಗಾಂಧಿ ಇದೊಂದು ಖಾಸಗಿ ಭೇಟಿ ಎಂದರಲ್ಲದೆ ಆದಷ್ಟು ಬೇಗನೆ ಪರೀಕರ್ ಗುಣಮುಖವಾಗಲೆಂದು ಹಾರೈಸಿರುವುದಾಗಿ ಹೇಳಿದರು.
ನಿನ್ನೆ ಸೋಮವಾರವಷ್ಟೇ ರಾಹುಲ್, ರಫೇಲ್ ಡೀಲ್ ಕುರಿತಾಗಿ ಈ ರೀತಿ ಟ್ವೀಟ್ ಮಾಡಿದ್ದರು : ರಫೇಲ್ ಕುರಿತಾದ ಗೋವಾ ಆಡಿಯೋ ಟೇಪ್ ರಿಲೀಸ್ ಆಗಿ 30 ದಿನಗಳೇ ಸಂದಿವೆ. ಆದರೆ ಇನ್ನೂ ಎಫ್ಐಆರ್ ದಾಖಲಾಗಿಲ್ಲ; ತನಿಖಗೆ ಆದೇಶ ನೀಡಲಾಗಿಲ್ಲ; ಸಚಿವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಲಾಗಿಲ್ಲ; ಟೇಪ್ ಸಾಚಾ ಇರುವುದು ಸ್ಪಷ್ಟವೇ ಇದೆ. ಅಂತೆಯೇ ಗೋವಾ ಸಿಎಂ ಪರೀಕರ್, ರಫೇಲ್ ರಹಸ್ಯಗಳನ್ನು ತಮ್ಮಲ್ಲಿ ಹೊಂದಿರುವುದು ಕೂಡ ನಿಜವೇ ಇದೆ; ಇದರರ್ಥ ಪರೀಕರ್ ಗೆ ಪ್ರಧಾನಿ ಗಿಂತಲೂ ಹೆಚ್ಚಿನ ಅಧಿಕಾರ ಇರುವುದು ಸ್ಪಷ್ಟವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್
Kerala: ಗಲ್ಲು ಶಿಕ್ಷೆಗೆ ಗುರಿಯಾದ ಮಗಳನ್ನು11 ವರ್ಷಗಳ ಬಳಿಕ ಭೇಟಿಯಾದ ತಾಯಿ!
Emotional; 11 ವರ್ಷ ಬಳಿಕ ಗಲ್ಲಿಗೆ ಗುರಿಯಾದ ಮಗಳನ್ನು ಭೇಟಿಯಾದ ತಾಯಿ!
MUST WATCH
ಹೊಸ ಸೇರ್ಪಡೆ
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ
ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್ಕುಮಾರ್
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!