ವ್ಯಂಗ್ಯಚಿತ್ರಕಾರ ಮಂಗೇಶ್ ತೆಂಡೂಲ್ಕರ್ ಇನ್ನಿಲ್ಲ
Team Udayavani, Jul 12, 2017, 2:50 AM IST
ಪುಣೆ: ಪ್ರಸಿದ್ಧ ವ್ಯಂಗ್ಯಚಿತ್ರ ಕಲಾವಿದ ಮಂಗೇಶ್ ತೆಂಡೂಲ್ಕರ್ (82) ಇಲ್ಲಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಸೋಮವಾರ ರಾತ್ರಿ ಕೊನೆಯುಸಿರೆಳೆದರು. ಭಾನುವಾರ ಇವರಿಗೆ ಮೂತ್ರಕೋಶದಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು. ಇವರನ್ನು ಆಸ್ಪತ್ರೆಗೆ ದಾಖಲಿಸಿ ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಯಿತು. ಆದರೆ ಶಸ್ತ್ರಚಿಕಿತ್ಸೆ ಫಲಕಾರಿಯಾಗದೇ ಅವರು ನಿಧನರಾದರು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ವ್ಯಂಗ್ಯಚಿತ್ರಗಳಲ್ಲದೇ ಹಲವಾರು ಲೇಖನಗಳನ್ನು ಮತ್ತು ಪುಸ್ತಕಗಳನ್ನು ಮಂಗೇಶ್ ಬರೆದಿದ್ದಾರೆ. ಇವರು ಖ್ಯಾತ ಲೇಖಕ ದಿ.ವಿಜಯ್ ತೆಂಡೂಲ್ಕರ್ ಅವರ ಸಹೋದರ.