ರಿಟರ್ನ್ಸ್ ಸಲ್ಲಿಕೆ ಇಂದು ಕೊನೆ
Team Udayavani, Aug 31, 2019, 6:15 AM IST
ಹೊಸದಿಲ್ಲಿ: ಐಟಿ ರಿಟರ್ನ್ಸ್ ಸಲ್ಲಿಕೆಗೆ ಶನಿವಾರವೇ ಕೊನೆಯ ದಿನವಾಗಿದ್ದು, ಅವಧಿಯನ್ನು ಮುಂದೂಡಿಲ್ಲ ಎಂದು ಆದಾಯ ತೆರಿಗೆ ಇಲಾಖೆ ಸ್ಪಷ್ಟಪಡಿಸಿದೆ.
ರಿಟರ್ನ್ಸ್ ಸಲ್ಲಿಕೆ ಅವಧಿಯನ್ನು ಒಂದು ತಿಂಗಳು ವಿಸ್ತರಣೆ ಮಾಡಲಾಗಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ತೆರಿಗೆದಾರರು ಆ.31ರೊಳಗೆ, ಅಂದರೆ ಶನಿವಾರದ ಒಳಗೆ ರಿಟರ್ನ್ಸ್ ಸಲ್ಲಿಸಬೇಕು ಎಂದು ಆದಾಯ ತೆರಿಗೆ ಇಲಾಖೆ ಟ್ವೀಟ್ ಮೂಲಕ ಸ್ಪಷ್ಟಪಡಿಸಿದೆ.