ಸದ್ಗುರುವಿಗೆ ಭವ್ಯ ಸ್ವಾಗತ : ರಾಮ್‌ ವಿಲಾಸ್‌ ಅರಮನೆಯಲ್ಲಿ ಸಮಾರಂಭ

Team Udayavani, May 30, 2022, 1:32 AM IST

ಸದ್ಗುರುವಿಗೆ ಭವ್ಯ ಸ್ವಾಗತ : ರಾಮ್‌ ವಿಲಾಸ್‌ ಅರಮನೆಯಲ್ಲಿ ಸಮಾರಂಭ

ಅಹ್ಮದಾಬಾದ್‌: “ಮಣ್ಣು ಉಳಿಸಿ’ ಅಭಿಯಾನದ ಅಂಗವಾಗಿ 26 ದೇಶಗಳನ್ನು ಸುತ್ತಿರುವ ಸದ್ಗುರು ಜಗ್ಗಿ ವಾಸುದೇವ್‌ ರವಿವಾರ ಭಾರತಕ್ಕೆ ಹಿಂದಿರುಗಿದರು. ಗುಜರಾತ್‌ನ ಜಾಮ್‌ ನಗರದ ಬಂದರಿನಲ್ಲಿ ಬಂದಿಳಿದ ಅವರನ್ನು ಭಾರತೀಯ ನೌಕಾಪಡೆ ವಿಶೇಷವಾಗಿ ಸ್ವಾಗತಿಸಿತು. ಅನಂತರ ಸದ್ಗುರು ಅವರು ಜಾಮ್‌ನಗರದಲ್ಲಿರುವ ರಾಮ್‌ ವಿಲಾಸ್‌ ಅರಮನೆಯಲ್ಲಿ ಭವ್ಯ ಸ್ವಾಗತ ಸಮಾ ರಂಭದಲ್ಲಿ ಭಾಗವಹಿಸಿದ್ದರು.

ಒಮನ್‌ ದೇಶದ ಪೋರ್ಟ್‌ ಸುಲ್ತಾನ್‌ ಕಾಬೂಸ್‌ನಿಂದ ಹೊರಟು ಸತತ ಮೂರು ದಿನಗಳ ಪ್ರಯಾಣದ ಅನಂತರ ಜಾಮ್‌ನಗರದ ಬಂದರಿಗೆ ಆಗಮಿಸಿದ ಸದ್ಗುರು ಅವರಿಗೆ, ನೌಕಾಪಡೆಯ ವಾದ್ಯ ವೃಂದ Save soil anthem ಎಂಬ ಗೀತೆ ಯನ್ನು ನುಡಿಸುವ ಮೂಲಕ ಸುಸ್ವಾ ಗತ ಕೋರಿದರು. ಬಂದರಿನಲ್ಲಿ ಸದ್ಗುರು ವನ್ನು ನೋಡಲು ಆಗಮಿಸಿದ್ದ ಅಪಾರ ಸಂಖ್ಯೆಯ ಜನರು, “ಭೂಮಾತೆಯ ಕರೆ, ಭೂಮಾತೆಯ ಸವಾಲು, ಭೂಮಾತೆಯ ಘರ್ಜನೆ, ಮಣ್ಣು ಉಳಿಸಿ- ಮರ ನೆಡಿ’ ಎಂಬ ಘೋಷಣೆಗಳೊಂದಿಗೆ ಹರ್ಷ ವ್ಯಕ್ತಪಡಿಸಿದರು. ಇದೇ ವೇಳೆ ಗುಜ ರಾತ್‌ನ ಪ್ರಶಸ್ತಿ ವಿಜೇತ ಹಾಡುಗಾರರೂ ಕೂಡ ಸದ್ಗುರುವಿಗೆ ಗೀತನಮನ ಸಲ್ಲಿಸಿ ದರು. ಸದ್ಗುರು ಅವರು ಭರತ ಭೂಮಿ ಯಲ್ಲಿ “ಮಣ್ಣು ಉಳಿಸಿ’ ಅಭಿಯಾನದ ಆರಂಭದ ದ್ಯೋತಕವಾಗಿ ಸಸಿ ಯೊಂದನ್ನು ನೆಟ್ಟರು.

ವಿವಿಧ ರಾಜ್ಯಗಳಿಂದ ಬಂದು ಸೇರಿದ್ದ ಸಾವಿರಾರು ಉತ್ಸಾಹಿಗಳ ಮುಗಿಲು ಮುಟ್ಟುವ ಘೋಷಣೆಗಳ ಕಲರವ, ಮೈನವಿರೇಳಿಸುವ ಡೋಲು ವಾದನ ಮತ್ತು ರೋಮಾಂಚಕ ಜಾನಪದ ಪ್ರದರ್ಶನಗಳ ನಡುವೆ ಸದ್ಗುರು ಅವರು ನೆರೆದಿದ್ದ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡಿ, “ಮಣ್ಣು ಉಳಿಸಿ’ ಅಭಿ ಯಾನದ ತೀವ್ರಗತಿಯನ್ನು ಕಾಪಾಡಿ ಮುಂದುವರಿಸುವಂತೆ ಕರೆಕೊಟ್ಟರು. “ಕೊನೇಪಕ್ಷ ಮುಂದಿನ 30 ದಿನಗಳ ಕಾಲ ನೀವು ನಿಮ್ಮ ಧ್ವನಿಯನ್ನು ಮುಗಿಲು ಮುಟ್ಟುವಂತೆ ಏರಿಸಬೇಕು. ಕೇವಲ ಒಂದು ದಿನದ ಘೋಷಣೆ ಕೂಗುವುದಲ್ಲ. ಜಗತ್ತಿನ ಎಲ್ಲ ಸರಕಾರಗಳೂ ಮಣ್ಣಿನ ಪುನರುಜ್ಜೀವನ ಮಾಡಲು ನೀತಿ-ನಿರೂ ಪಣೆಯ ಬದಲಾವಣೆ ಮಾಡಿದೆ ಎಂದು ತಿಳಿದು ಬರುವ ತನಕ, ನಿರಂತರವಾಗಿ ಈ ಅಭಿಯಾನದ ಘೋಷವನ್ನು ಪ್ರತೀ ದಿನ 15-20 ನಿಮಿಷಗಳ ಕಾಲ ಎಲ್ಲ ರಿಗೂ ಕೇಳುವಂತೆ ಮಾಡಿ’ ಎಂದು ಕರೆ ನೀಡಿದರು. ಅಲ್ಲದೆ ನಿಮ್ಮ ಕೈಯ್ಯಲ್ಲಿರುವ ಮೊಬೈಲ್‌ಗ‌ಳನ್ನು ಬಳಸಿ, ಸಾಮಾಜಿಕ ಜಾಲತಾಣಗಳಲ್ಲಿ ಮಣ್ಣಿನ ಬಗ್ಗೆ ಮಾತನಾಡಬೇಕು ಎಂದರು.

ಜೂ. 21ರ ವರೆಗೆ 10 ಕಡೆ ಕಾರ್ಯಕ್ರಮ
“ಮಣ್ಣು ಉಳಿಸಿ’ ಅಭಿಯಾನದ ಅಂಗವಾಗಿ, ಯೂರೋಪ್‌, ಏಷ್ಯಾದ ಕೇಂದ್ರ ಭಾಗ, ಮಧ್ಯಪ್ರಾಚ್ಯ ಪ್ರಾಂತ್ಯಕ್ಕೆ ಸೇರಿದ ಸುಮಾರು 26 ದೇಶಗಳನ್ನು ಸುತ್ತಾಡಿರುವ ಅವರು ತಮ್ಮ ಅಭಿಯಾನದ ಕಡೆಯ ಹಂತವನ್ನು ಭಾರತದಲ್ಲಿ ಮುಂದುವರಿಸಲಿ ದ್ದಾರೆ. ಇಲ್ಲಿಯೂ ಮೇ 29ರಿಂದ ಜೂ. 21ರ ವರೆಗೆ 10 ಕಡೆಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಟಾಪ್ ನ್ಯೂಸ್

1-visa

India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-visa

India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.