ಎಫ್ ಬಿ ಮೂಲಕ 50 ಕೋಟಿ ಜನರ ಮಾಹಿತಿ ಮಾರಾಟಕ್ಕೆ
Team Udayavani, Jan 27, 2021, 7:40 AM IST
ನವದಿಲ್ಲಿ: ಈಗಾಗಲೇ ಬಳಕೆದಾರರ ಖಾಸಗಿ ಮಾಹಿತಿ ಹಂಚಿಕೆ ಆರೋಪಕ್ಕೆ ಗುರಿಯಾಗಿರುವ ಫೇಸ್ಬುಕ್ ವಿರುದ್ಧ ಮತ್ತೂಂದು ಆರೋಪ ಕೇಳಿ ಬಂದಿದೆ.
ಭಾರತದ 61,62,450 ಮಂದಿ ಸೇರಿದಂತೆ ಜಗತ್ತಿನ 50 ಕೋಟಿ ಮಂದಿಯ ಫೋನ್ ನಂಬರ್ ಅನ್ನು ಟೆಲಿಗ್ರಾಂ ಬಾಟ್ ಮೂಲಕ ಮಾರಾ ಟಕ್ಕೆ ಇರಿಸಲಾಗಿದೆ ಎಂದು “ಮದರ್ಬೋರ್ಡ್’ ಎಂಬ ವೆಬ್ಸೈಟ್ ವರದಿ ಮಾಡಿದೆ. ಸೈಬರ್ ಭದ್ರತಾ ಕ್ಷೇತ್ರದ ವಿಶ್ಲೇಷಣೆ ಕಾರ, ಸಂಶೋಧಕ ಅಲೊನ್ ಗಾಲ್ ಈ ಅಂಶ ವನ್ನು ಮೊದಲು ಪತ್ತೆ ಹಚ್ಚಿ, ಟ್ವೀಟ್ ಮಾಡಿ ದ್ದರು. ಮೊಬೈಲ್ ನಂಬರ್ ಲಿಂಕ್ ಆಗಿರುವ ಫೇಸ್ಬುಕ್ನ ಮಾಹಿತಿಯನ್ನು ಸುಲಭವಾಗಿ ಕದಿಯಲು ಸಾಧ್ಯವಿದೆ ಎಂಬ ತಾಂತ್ರಿಕ ಅಂಶ ಗಳನ್ನು ಅರಿತು ಈ ಕುಕೃತ್ಯವೆಸಗಲಾಗಿದೆ. ಭಾರತ ಸೇರಿದಂತೆ ಜಗತ್ತಿನ ಹಲವು ದೇಶ ಗಳಲ್ಲಿ ರುವ ಜನರ ಮಾಹಿತಿ ಬಿಕರಿಯಾಗಿದೆ. 2019 ರಲ್ಲಿಯೂ 41 ಕೋಟಿ ಬಳಕೆದಾರರ ಮೊಬೈಲ್, ಖಾಸಗಿ ಮಾಹಿತಿ ಸೋರಿಕೆಯಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ