‘ಭೋಬಿಶೋಟರ್ ಭೂತ್’ ಚಿತ್ರ ನಿಷೇಧ: ಪ.ಬಂ. ಸರಕಾರಕ್ಕೆ ಸುಪ್ರೀಂ 20 ಲಕ್ಷ ರೂ. ದಂಡ
Team Udayavani, Apr 11, 2019, 12:33 PM IST
ಹೊಸದಿಲ್ಲಿ : ‘ಭೋಬಿಶೋಟರ್ ಭೂತ್’ ಎಂಬ ವ್ಯಂಗ್ಯಭರಿತ ಚಿತ್ರದ ಮೇಲೆ ವಸ್ತುತಃ ನಿಷೇಧ ಹೇರಿದ ಕಾರಣಕ್ಕೆ ಸುಪ್ರೀಂ ಕೋರ್ಟ್ ಪಶ್ಚಿಮ ಬಂಗಾಲ ಸರಕಾರದ ಮೇಲೆ 20 ಲಕ್ಷ ರೂ. ದಂಡ ಹೇರಿದೆ.
ಪಶ್ಚಿಮ ಬಂಗಾಲ ಸರಕಾರ ಚಿತ್ರದ ನಿರ್ಮಾಪಕ ಮತ್ತು ಸಿನೇಮಾ ಹಾಲ್ ಮಾಲಕರಿಗೆ 20 ಲಕ್ಷ ರೂ. ಪರಿಹಾರವನ್ನು ನೀಡಬೇಕು ಎಂದಿರುವ ಜಸ್ಟಿಸ್ ಡಿ ವೈ ಚಂದ್ರಚೂಡ್ ನೇತೃತ್ವದ ಸುಪ್ರೀಂ ಪೀಠ, ಚಿತ್ರದ ಮೇಲೆ ವಸ್ತುತಃ ನಿಷೇಧ ಹೇರುವ ಮೂಲಕ ಪ.ಬಂಗಾಲ ಸರಕಾರ ಅವರ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಉಲ್ಲಂಘನೆ ಮಾಡಿದೆ ಎಂದು ತನ್ನ ತೀರ್ಪಿನಲ್ಲಿ ಹೇಳಿತು.
ತನ್ನ ಚಿತ್ರವನ್ನು ರಾಜ್ಯಾಡಳಿತೆಯ ಕುಮ್ಮಕ್ಕಿನಿಂದಾಗಿ ಹೆಚ್ಚಿನೆಲ್ಲ ಸಿನೆಮಾ ಮಂದಿರಗಳಿಂದ ಎತ್ತಂಗಡಿ ಮಾಡಲಾಯಿತು ಎಂದು ದೂರಿ ಚಿತ್ರದ ನಿರ್ಮಾಪಕರು ಸುಪ್ರೀಂ ಮೆಟ್ಟಲೇರಿದ್ದರು.
ಇದಕ್ಕೆ ಮೊದಲು ಮಾರ್ಚ್ 15ರಂದು ಸುಪ್ರೀಂ ಕೋಟ್‌ರ ಮಮತಾ ಬ್ಯಾನರ್ಜಿ ಸರಕಾರಕ್ಕೆ “ಈ ಚಿತ್ರದ ಪ್ರದರ್ಶನಕ್ಕೆ ಯಾವುದೇ ತಡೆ ಅಥವಾ ನಿರ್ಬಂಧ ಒಡ್ಡಬಾರದು’ ಎಂದು ಆದೇಶಿಸಿತ್ತು. ಆದರೂ ಪಶ್ಚಿಮ ಬಂಗಾಲ ಸರಕಾರ ಅದಕ್ಕೆ ಡೋಂಟ್ ಕೇರ್ ಎಂಬ ರೀತಿಯಲ್ಲಿ ವರ್ತಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಾಜೀವ್ ಹತ್ಯೆ ಪ್ರಕರಣ:ಜೀವಾವಧಿ ಶಿಕ್ಷೆಗೊಳಗಾಗಿದ್ದ ಪೆರಾರಿವಾಳನ್ ಬಿಡುಗಡೆಗೆ ಸುಪ್ರೀಂ ಆದೇಶ
ಹಾಸಿಗೆಗಾಗಿ ಆನೆಯ ಕಿತ್ತಾಟ -ವಿಡಿಯೋ ವೈರಲ್
ಮತ್ತೆ ಆರೆಂಜ್ ಅಲರ್ಟ್; ಎರ್ನಾಕುಳಂ, ಇಡುಕ್ಕಿ ಸೇರಿ 8 ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ
ರಾಮ ಮಂದಿರ ಅಡಿಪಾಯ ಆಗಸ್ಟ್ಗೆ ಸಂಪೂರ್ಣ : ಫೆಬ್ರವರಿಯಲ್ಲಿ ಆರಂಭವಾಗಿದ್ದ ಕಾಮಗಾರಿ
ಪತ್ನಿಗೆ ಸೀರೆ ಉಡಲು ಬರುವುದಿಲ್ಲ: ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆ !
MUST WATCH
ಹೊಸ ಸೇರ್ಪಡೆ
ಹೆಜ್ಜೆ ಹೆಜ್ಜೆಗೂ ಕೇಂದ್ರ, ರಾಜ್ಯ ಸರಕಾರದಿಂದ ನಾರಾಯಣ ಗುರುಗಳಿಗೆ ಅವಮಾನ: ಜೆ.ಆರ್.ಲೋಬೋ
ಭಾರಿ ಮಳೆ ಆತಂಕ : ಬೆಂಗಳೂರಿನ ಜಲಾವೃತ ಪ್ರದೇಶಗಳಿಗೆ ಸಿಎಂ ಭೇಟಿ
ದೇಶದಲ್ಲೇ ದಾಖಲೆ ಬರೆದ ನಾಯಕ ಬಸವರಾಜ್ ಹೊರಟ್ಟಿ: ಸಿಎಂ ಬಣ್ಣನೆ
ಬಂಟ್ವಾಳ: ರಸ್ತೆ ಬದಿ ನಿಲ್ಲಿಸಿದ್ದ ಬೈಕ್ ಕಳ್ಳತನ; ಮೂವರ ಬಂಧನ, ಸೊತ್ತುಗಳು ವಶಕ್ಕೆ
ರಾಜೀವ್ ಹತ್ಯೆ ಪ್ರಕರಣ:ಜೀವಾವಧಿ ಶಿಕ್ಷೆಗೊಳಗಾಗಿದ್ದ ಪೆರಾರಿವಾಳನ್ ಬಿಡುಗಡೆಗೆ ಸುಪ್ರೀಂ ಆದೇಶ