ಚೌಕಿದಾರ್ ಚೋರ್ ಹೇಳಿಕೆ; ರಾಹುಲ್ ಗೆ ಸುಪ್ರೀಂನಿಂದ ನ್ಯಾಯಾಂಗ ನಿಂದನೆ ನೋಟಿಸ್

Team Udayavani, Apr 23, 2019, 2:19 PM IST

ನವದೆಹಲಿ: ರಫೇಲ್ ತೀರ್ಪಿಗೆ ಸಂಬಂಧಿಸಿದಂತೆ ಸುಳ್ಳು ಹೇಳಿಕೆ ನೀಡಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಸುಪ್ರೀಂಕೋರ್ಟ್ ಮಂಗಳವಾರ ನ್ಯಾಯಾಂಗ ನಿಂದನೆ ನೋಟಿಸ್ ಜಾರಿ ಮಾಡಿದೆ.

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಚುನಾವಣಾ ಸಭೆಗಳಲ್ಲಿ ಮಾತನಾಡುವಾಗ ಚೌಕದಾರ್ ಚೋರ್ ಹೈ(ಕಾವಲುಗಾರ ಕಳ್ಳ) ಎಂದು ಸುಪ್ರೀಂಕೋರ್ಟ್ ಹೇಳಿದೆ ಎಂದು ರಾಹುಲ್ ಗಾಂಧಿ ಈ ಸಂಬಂಧ ಸೋಮವಾರ ಸುಪ್ರೀಂಕೋರ್ಟ್ ಗೆ ಸಲ್ಲಿಸಿದ್ದ ಅಫಿಡವಿಟ್ ನಲ್ಲಿ ಈ ಹೇಳಿಕೆಗೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದಿದ್ದರು.

ಪ್ರಧಾನಿ ಮೋದಿ ಬಗ್ಗೆ ಹೇಳಿಕೆ ನೀಡಿದ್ದ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ ಸುಪ್ರೀಂಕೋರ್ಟ್ ನಲ್ಲಿ ದೂರು ದಾಖಲಿಸಿದ್ದರು. ಕ್ರಿಮಿನಲ್ ಮೊಕದ್ದಮೆ ಅರ್ಜಿ ಕುರಿತು ಏಪ್ರಿಲ್ 30ರಂದು ವಿಚಾರಣೆ ನಡೆಸುವುದಾಗಿ ಸುಪ್ರೀಂಕೋರ್ಟ್ ತಿಳಿಸಿದೆ.

ತನ್ನ ವಿರುದ್ಧ ಮೀನಾಕ್ಷಿ ಲೇಖಿ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಮೊಕದ್ದಮೆ ಅರ್ಜಿಯನ್ನು ವಜಾಮಾಡಬೇಕೆಂದು ಕೋರಿದ್ದ ರಾಹುಲ್ ಗಾಂಧಿ ಮನವಿಯನ್ನು ಸುಪ್ರೀಂಕೋರ್ಟ್ ನಿರಾಕರಿಸಿದೆ.

ಅಷ್ಟೇ ಅಲ್ಲ, ಚುನಾವಣೆ ಭಾಷಣಗಳಲ್ಲಿ ಇಂತಹ ಹೇಳಿಕೆಯನ್ನು ಪುನರಾವರ್ತಿಸುವುದಿಲ್ಲ ಎಂದು ಹೇಳಿದ್ದರು. ಕೋರ್ಟ್ ಈ ಶಬ್ದವನ್ನು(ಚೌಕಿದಾರ್ ಚೋರ್ ಹೈ) ಬಳಸಿಲ್ಲ. ಚುನಾವಣಾ ಪ್ರಚಾರ ನಡೆಸುವ ಭರದಲ್ಲಿ ಈ ಹೇಳಿಕೆ ಹೊರಬಂದಿದೆ ಎಂದು ರಾಹುಲ್ ತಪ್ಪೊಪ್ಪಿಕೊಂಡಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ