ಸುಪ್ರೀಂ ಕೋರ್ಟಿನಿಂದ ಜಾಮೀನು ಅರ್ಜಿ ತಿರಸ್ಕೃತ: ಲಾಲು ಯಾದವ್‌ಗೆ ಭಾರೀ ನಿರಾಶೆ
Team Udayavani, Apr 10, 2019, 11:47 AM IST
ಹೊಸದಿಲ್ಲಿ : ಆರ್‌ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ಅವರಿಗೆ ಭಾರೀ ದೊಡ್ಡ ನಿರಾಶೆ ಎನ್ನುವ ರೀತಿಯಲ್ಲಿ ಸುಪ್ರೀಂ ಕೋರ್ಟ್ ಇಂದು ಬುಧವಾರ, ಬಹುಕೋಟಿ ಮೇವು ಹಗರಣದ ಮೂರು ಕೇಸುಗಳಲ್ಲಿ ಅವರ ಜಾಮೀನು ಕೋರಿಕೆ ಅರ್ಜಿಯನ್ನು ವಜಾ ಮಾಡಿದೆ.
ಲಾಲು ಅವರ ಜಾಮೀನು ಕೋರಿಕೆ ಅರ್ಜಿಯನ್ನು ವಿರೋಧಿಸಿ ಸಿಬಿಐ ನಿನ್ನೆ ಮಂಗಳವಾರ ಪ್ರತಿ-ಅಫಿದಾವಿತ್ ಸಲ್ಲಿಸಿತ್ತು. ಲಾಲು ಅವರು ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಜಾಮೀನು ಕೋರಿರುವುದು ಲೋಕಸಭಾ ಚುನಾವಣೆಯ ಈ ಸಂದರ್ಭದಲ್ಲಿ ಸ್ಪಷ್ಟವಿರುವುದರಿಂದ ಅವರ ಅರ್ಜಿಯನ್ನು ಮನ್ನಿಸಬಾರದು ಎಂದು ಸಿಬಿಐ ತನ್ನ ಪ್ರತಿ-ಅಫಿದಾವಿತ್ ನಲ್ಲಿ ಹೇಳಿತ್ತು.
ಲಾಲು ಅವರು ಕಳೆದ ಎಂಟು ತಿಂಗಳಿಂದಲೂ ಆಸ್ಪತ್ರೆ ವಾರ್ಡಿನಲ್ಲಿ ಇದ್ದಾರೆ; ಆದಾಗ್ಯೂ ಅವರು ಅಲ್ಲಿದ್ದುಕೊಂಡೇ ರಾಜಕೀಯ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ ಎಂದು ಕೂಡ ಸಿಬಿಐ ತನ್ನ ಅಫಿದಾವಿತ್‌ನಲ್ಲಿ ಹೇಳಿದೆ.
ಲಾಲು ಅವರು ರಾಂಚಿಯ ರಾಜೇಂದ್ರ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಆರ್‌ಐಎಂಎಸ್) ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಎಲ್ಲಾ ಹುದ್ದೆಗೆ ಹಾರ್ದಿಕ್ ರಾಜೀನಾಮೆ;ಗುಜರಾತ್ ನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಹಿನ್ನಡೆ
ಗುಜರಾತ್ ನ ಕಾರ್ಖಾನೆಯಲ್ಲಿ ಗೋಡೆ ಕುಸಿತ; ಕನಿಷ್ಠ 12 ಮಂದಿ ಸಾವು
ನೀರಿನ ಸಮಸ್ಯೆ ಇದ್ದರೂ ಡೆವಲಪರ್ಗಾಗಿ ನೀರು ಕಾಯ್ದಿರಿಸಿದ ಸರಕಾರ
ರಾಜೀವ್ ಹತ್ಯೆ ಪ್ರಕರಣ:ಜೀವಾವಧಿ ಶಿಕ್ಷೆಗೊಳಗಾಗಿದ್ದ ಪೆರಾರಿವಾಳನ್ ಬಿಡುಗಡೆಗೆ ಸುಪ್ರೀಂ ಆದೇಶ
ಹಾಸಿಗೆಗಾಗಿ ಆನೆಯ ಕಿತ್ತಾಟ -ವಿಡಿಯೋ ವೈರಲ್