ಮರಾಠಾ ಮೀಸಲಾತಿ: ಬಾಂಬೆ ಹೈಕೋರ್ಟ್‌ ಆದೇಶ; ಮಹಾರಾಷ್ಟ್ರ ಉತ್ತರಕ್ಕೆ ಸುಪ್ರೀಂ ಸೂಚನೆ

Team Udayavani, Jul 12, 2019, 12:35 PM IST

ಹೊಸದಿಲ್ಲಿ : ಶಿಕ್ಷಣ ಮತ್ತು ಉದ್ಯೋಗದಲ್ಲಿ ಮರಾಠ ಸಮುದಾಯಕ್ಕೆ ನೀಡಲಾಗಿರುವ ಮೀಸಲಾತಿಯನ್ನು ಬಾಂಬೆ ಹೈಕೋರ್ಟ್‌ ಎತ್ತಿ ಹಿಡಿದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಮೇಲ್ಮನವಿಗಳಿಗೆ ಉತ್ತರಿಸುವಂತೆ ಸುಪ್ರೀಂ ಕೋರ್ಟ್‌ ಇಂದು ಮಹಾರಾಷ್ಟ್ರ ಸರಕಾರಕ್ಕೆ ಆದೇಶಿಸಿದೆ.

ವರಿಷ್ಠ ನ್ಯಾಯ ಮೂರ್ತಿ ರಂಜನ್‌ ಗೊಗೋಯ್‌ ನೇತೃತ್ವದ ಸುಪ್ರೀಂ ಕೋರ್ಟ್‌ ಪೀಠ, ಮರಾಠಾ ಕೋಟಾ ಕಾನೂನಿನ ಸಾಂವಿಧಾನಿಕ ಸಿಂಧುತ್ವವನ್ನು ಎತ್ತಿಹಿಡಿದ ಬಾಂಬೆ ಹೈಕೋರ್ಟ್‌ ಎತ್ತಿಹಿಡಿದಿರುವುದಕ್ಕೆ ತಡೆ ನೀಡಿಲ್ಲ; ಆದರೆ ಮರಾಠಾ ಮೀಸಲಾತಿಯನ್ನು 2014ರಿಂದ ಪೂರ್ವಾನ್ವಯ ಮಾಡಲಾಗಿರುವುದು ಅನುಷ್ಠಾನ ಮಾಡಲಾಗದು ಎಂದು ಹೇಳಿದೆ.

ಮರಾಠಾ ಮೀಸಲಾತಿಯ ಸಾಂವಿಧಾನಿಕ ಸಿಂಧುತ್ವವನ್ನು ಎತ್ತಿ ಹಿಡಿದ ಬಾಂಬೆ ಹೈಕೋರ್ಟಿನ ಆದೇಶವನ್ನು ಪ್ರಶ್ನಿಸಿದ ಜೆ ಲಕ್ಷ್ಮಣ್‌ ರಾವ್‌ ಪಾಟೀಲ್‌ ದಾಖಲಿಸಿದ್ದ ಮೇಲನ್ಮವಿ ಸಹಿತ ಎರಡು ಮೇಲ್ಮನವಿಗಳ ಮೇಲೆ ಸುಪ್ರೀಂ ಕೋರ್ಟ್‌ ವಿಚಾರಣೆ ನಡೆಸುತ್ತಿದೆ.

 


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ