ತರಬೇತಿ ವೇಳೆ ಕ್ಯಾಪ್ಟರ್ನಿಂದ 50 ಅಡಿ ಕೆಳಕ್ಕೆ ಬಿದ್ದ ಯೋಧರು!
Team Udayavani, Jan 11, 2018, 11:02 AM IST
ಹೊಸದಿಲ್ಲಿ: ಜನವರಿ 15 ರಂದು ಆಚರಿಸಲಾಗುವ ಸೇನಾ ದಿನಾಚರಣೆಗಾಗಿ ತರಬೇಯಿಯಲ್ಲಿ ನಿರತರಾಗಿದ್ದ ಹೆಲಿಕ್ಯಾಪ್ಟರ್ನಿಂದ ಮೂವರು ವಾಯುಪಡೆಯ ಸೈನಿಕರು ಆಯತಪ್ಪಿ ಬಿದ್ದು ಗಂಭೀರವಾಗಿ ಗಾಯಗೊಂಡಿರುವ ಅವಘಡ ದೆಹಲಿಯಲ್ಲಿ ಮಂಗಳವಾರ ನಡೆದಿದ್ದು ಗುರುವಾರ ಬೆಳಕಿಗೆ ಬಂದಿದೆ.
ಗಾಯಗೊಂಡಿರುವ ಸೈನಿಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಮೂವರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
ಹಗ್ಗದ ಮೂಲಕ ಹೆಲಿಕ್ಯಾಪ್ಟರ್ನಿಂದ ಇಳಿಯುವ ಸಾಹಸ ತರಬೇತಿ ನಡೆಸುವ ವೇಳೆ ಹಗ್ಗ ಕಳಚಿ ಅವಘಡ ನಡೆದಿದೆ.ಮೂವರು ಯೋಧರು 50 ಅಡಿ ಎತ್ತರಿದಿಂದ ಒಬ್ಬರ ಮೇಲೆ ಒಬ್ಬರು ಬಿದ್ದಿರುವುದು ದೃಶ್ಯದಲ್ಲಿ ಕಂಡು ಬಂದಿದೆ.
ಸೇನೆ ಈ ಬಗ್ಗೆ ತನಿಖೆಗೆ ಆದೇಶಿಸಿದೆ.