ಶ್ರದ್ಧಾ ಪ್ರಕರಣ: ಆಫ್ತಾಬ್ ಗೆ ನ್ಯಾಯಾಂಗ ಬಂಧನ; ನಾರ್ಕೋ ಪರೀಕ್ಷೆಗೆ ದಿನಾಂಕ ನಿಗದಿ
Team Udayavani, Nov 26, 2022, 8:08 PM IST
ನವದೆಹಲಿ: ಇತ್ತೀಚಿನ ವರದಿಗಳ ಪ್ರಕಾರ, ಶ್ರದ್ಧಾ ವಾಕರ್ ಪ್ರಕರಣದ ಆರೋಪಿ ಆಫ್ತಾಬ್ ಅಮೀನ್ ಪೂನಾವಾಲಾ ನವೆಂಬರ್ 28 ರಂದು ನಾರ್ಕೋ ಪರೀಕ್ಷೆಗೆ ಒಳಗಾಗಲಿದ್ದಾನೆ. ಮೂಲಗಳು ಮುಂದಿನ ಎರಡು ದಿನಗಳಲ್ಲಿ ಪರೀಕ್ಷೆ ನಡೆಸಲಾಗುವುದು ಎಂದು ಶನಿವಾರ ತಿಳಿಸಿವೆ.
ದೆಹಲಿಯ ಸಾಕೇತ್ ಕೋರ್ಟ್ ಶ್ರದ್ಧಾ ಪ್ರಕರಣದ ಆರೋಪಿ ಅಫ್ತಾಬ್ ಅಮೀನ್ ಪೂನವಾಲಾನನ್ನು 13 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ.
ದೆಹಲಿ ಪೊಲೀಸರು, ಕೆಲವು ದಿನಗಳ ಹಿಂದೆ, ಶ್ರದ್ಧಾ ವಾಲ್ಕರ್ ದೇಹದ ಡಿಎನ್‌ಎ ಪರೀಕ್ಷೆಯ ವರದಿಯನ್ನು ಸ್ವೀಕರಿಸಿಲ್ಲ ಎಂದು ತಿಳಿಸಿದ್ದರು. “ಡಿಎನ್‌ಎ ಪರೀಕ್ಷಾ ವರದಿ ( ದೇಹದ ಭಾಗಗಳು) ಪೊಲೀಸರಿಗೆ ಬಂದಿಲ್ಲ” ಎಂದು ಐಪಿಎಸ್, ಕಾನೂನು ಮತ್ತು ಸುವ್ಯವಸ್ಥೆ, ವಲಯ II ರ ವಿಶೇಷ ಪೊಲೀಸ್ ಆಯುಕ್ತ ಸಾಗರ್ ಪ್ರೀತ್ ಹೂಡಾ ಹೇಳಿದ್ದಾರೆ.
ಈಗಾಗಲೇ ಅಫ್ತಾಬ್ ಅಮೀನ್ ಪೂನವಾಲಾಗೆ ಪಾಲಿಗ್ರಫಿ ಟೆಸ್ಟ್ ನಡೆಸಲಾಗಿದೆ.ಕೆಲ ಪ್ರಶ್ನೆಗಳಿಗೆ ಆತ ಸುಳ್ಳು ಉತ್ತರ ನೀಡಿದ್ದ ಎಂದು ವಿಧಿವಿಜ್ಞಾನ ಪ್ರಯೋಗಾಲಯದ ಹಿರಿಯ ಅಧಿಕಾರಿ ತಿಳಿಸಿದ್ದಾರೆ.
ಶ್ರದ್ಧಾ ವಾಕರ್ ಪ್ರಕರಣವನ್ನು ದೆಹಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ನವೆಂಬರ್ 16 ರಂದು ದೆಹಲಿ ಪೊಲೀಸರು ಶ್ರದ್ಧಾ ವಾಲ್ಕರ್ ಅವರ ತಂದೆ ವಿಕಾಸ್ ವಾಲ್ಕರ್ ಅವರ ಡಿಎನ್‌ಎ ಮಾದರಿಗಳನ್ನು ಸಂಗ್ರಹಿಸಿದ್ದಾರೆ. ದೆಹಲಿಯ ಛತ್ತರ್‌ಪುರದಲ್ಲಿರುವ ಆರೋಪಿ ಅಫ್ತಾಬ್ ಅಮೀನ್ ಪೂನವಾಲಾನ ಫ್ಲಾಟ್‌ನ ಅಡುಗೆಮನೆಯಲ್ಲಿ ಕಲೆಗಳು ಪತ್ತೆಯಾಗಿರುವುದು ತನಿಖೆಯ ವೇಳೆ ಈಗಾಗಲೇ ದೃಢಪಟ್ಟಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಅಲಿಗಢ ಮುಸ್ಲಿಂ ವಿವಿಯ ಮಾಜಿ ವಿದ್ಯಾರ್ಥಿಯ ಮೇಲೆ ಗುಂಡು; ಸ್ಥಿತಿ ಚಿಂತಾಜನಕ
ವಾಣಿ ಜಯರಾಂ ನಿಗೂಢ ಮೃತ್ಯು; ಪ್ರಕರಣ ದಾಖಲಿಸಿಕೊಂಡ ಪೊಲೀಸರು
ಸುಪ್ರೀಂ ಕೋರ್ಟ್ಗೆ 5 ನೂತನ ನ್ಯಾಯಾಧೀಶರ ನೇಮಕಕ್ಕೆ ಕೇಂದ್ರ ಅಸ್ತು
ನಾಗಾಲ್ಯಾಂಡ್ ಚುನಾವಣೆ; 28 ಕೋಟಿ ರೂ.ಗೂ ಹೆಚ್ಚು ನಿಷೇಧಿತ ವಸ್ತುಗಳ ವಶ
ನಾಗಾಲ್ಯಾಂಡ್ ವಿಧಾನಸಭಾ ಚುನಾವಣೆ: ಕಾಂಗ್ರೆಸ್ 21 ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟ