ನೀಟ್ ಪಾಸಾದ ಕಾರ್ಮಿಕನ ಪುತ್ರ
Team Udayavani, Jun 9, 2018, 6:00 AM IST
ಕೋಟಾ(ರಾಜಸ್ಥಾನ): ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಕೂಲಿ ಕಾರ್ಮಿಕನ ಪುತ್ರ ನೀಟ್ ಪರೀಕ್ಷೆ ಪಾಸ್ ಮಾಡುವಲ್ಲಿ ಯಶಸ್ವಿಯಾಗಿದ್ದಾನೆ!
ರಾಜಸ್ಥಾನದ ದೋಲ್ಪುರ್ ಜಿಲ್ಲೆಯ ಸಖ್ವಾರ ಗ್ರಾಮದ ಕೃಷ್ಣ ಕುಮಾರ್ ಈ ಸಾಧನೆ ಮಾಡಿರುವ ವಿದ್ಯಾರ್ಥಿ. ಇನ್ನೊಂದು ಗಮನಾರ್ಹ ಸಂಗತಿಯೆಂದರೆ, ನೀಟ್ ಪಾಸ್ ಮಾಡಿದ ಈ ಗ್ರಾಮದ ಏಕೈಕ ವಿದ್ಯಾರ್ಥಿ ಎಂಬ ಹೆಗ್ಗಳಿಕೆಯೂ ಈಗ ಇವರದ್ದಾಗಿದೆ. ಈ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡಿರುವ ಪೋಷಕರು, “ಬಹುದಿನಗಳ ನಮ್ಮ ಕನಸು ಈಗ ಈಡೇರಿದೆ. ಮಗನ ಸಾಧನೆ ನಮ್ಮ ಹೆಮ್ಮೆ. ನಮ್ಮ ಗ್ರಾಮ ಪಂಚಾಯಿತಿಗೇ ನಮ್ಮ ಮಗ ಮೊದಲ ಡಾಕ್ಟರ್ ಆಗಲಿದ್ದಾನೆ’ ಎಂದು ತಂದೆ ಮುನ್ನಾ ಲಾಲ್ ಖುಷಿ ಹಂಚಿಕೊಂಡಿದ್ದಾರೆ. ಕುಮಾರ್ 5ನೇ ತರಗತಿಯ ತನಕವೂ ಹಳ್ಳಿಯೊಂದರ ಮನೆಯಲ್ಲಿ ಚಿಮಣಿ ದೀಪದಲ್ಲೇ ಓದಿ ಬಾಲ್ಯದ ಶಿಕ್ಷಣ ಪಡೆದಿದ್ದರು.