ಅಂಗಡಿ ಮುಚ್ಚಿಸುವ ಅಭಿಯಾನ ನಿಲ್ಲದಿದ್ದರೆ ನಿರಶನ: ಕೇಜ್ರಿವಾಲ್‌

Team Udayavani, Mar 10, 2018, 12:12 PM IST

ಹೊಸದಿಲ್ಲಿ :  ರಾಷ್ಟ್ರ ರಾಜಧಾನಿ ದಿಲ್ಲಿಯ ಮಾಸ್ಟರ್‌ ಪ್ಲಾನ್‌ಉಲ್ಲಂಘನೆ ಮತ್ತು ಪರಿವರ್ತನ ಶುಲ್ಕ ಪಾವತಿಸದಿರವಿಕೆಯ ಕಾರಣಕ್ಕೆ ಸುಪ್ರೀ, ಕೋರ್ಟ್‌ ನೇಮಿಸಿದ ಸಮಿತಿಯ ನಿರ್ದೇಶದ ಪ್ರಕಾರ ದಿಲ್ಲಿ ಮುನಿಸಿಪಲ್‌ ಕಾರ್ಪೋರೇಶನ್‌ ಕಳೆದ ಕೆಲವು ತಿಂಗಳಿಂದ ನಡೆಸುತ್ತಿರುವ ಅಂಗಡಿ ಮುಚ್ಚುವ ಅಭಿಯಾನವನ್ನು ಇದೇ ಮಾರ್ಚ್‌ 31ರ ಒಳಗೆ ನಿಲ್ಲಿಸದಿದ್ದಲ್ಲಿ ತಾನು ಉಪವಾಸ ಸತ್ಯಾಗ್ರಹ ಕೈಗೊಳ್ಳುವುದಾಗಿ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ಕೇಂದ್ರ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಅಂಗಡಿ ಮುಚ್ಚುವ ಅಭಿಯಾನದಂದ ದಿನದ 24 ತಾಸು ಕಾಲ ದುಡಿಯುವ ವರ್ಗದವರು ತಮ್ಮ ಆದಾಯ ಮೂಲವನ್ನು ಕಳೆದುಕೊಂಡು ನಿರ್ಗತಿಕರಾಗುತ್ತಿದ್ದಾರೆ. ಇಂತಹವರು ಸುಲಭದಲ್ಲಿ ಕ್ರಿಮಿನಲ್‌ ಗಳಾಗುವ ಅಪಾಯ ಇದೆ. ಇವರು ಯಾರಿಗೂ ಮೋಸ ವಂಚನೆ ಮಾಡದೆ ದುಡಿದು ಸರಕಾರಕ್ಕೆ ತೆರಿಗೆ ಪಾವತಿಸುತ್ತಾ ಬಂದವರಾಗಿದ್ದಾರೆ. ಇವರಿಗಿರುವ ಕಾನೂನು ತೊಡಕನ್ನು ಕೇಂದ್ರ ಸರಕಾರ ಸಂಬಂಧಿತ ಕಾಯಿದೆಗೆ ಸಣ್ಣ ದೊಂದು ತಿದ್ದುಪಡಿ ಮೂಲಕ ನಿವಾರಿಸಬಹುದಾಗಿದೆ. ಮೋದಿ ಸರಕಾರ ಇದನ್ನು ಇನ್ನಾದರೂ ಮಾಡಬೇಕು ಎಂದು ಕೇಜ್ರಿವಾಲ್‌ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. 


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ