ಶಬರಿಮಲೆ ಪ್ರಕರಣ ಸಂವಿಧಾನ ಪೀಠಕ್ಕೆ

Team Udayavani, Oct 14, 2017, 8:20 AM IST

Shabarimala-Temple-600.jpg

ಹೊಸದಿಲ್ಲಿ: ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಮಹಿಳೆಯರಿಗೆ ಪ್ರವೇಶ ಅವಕಾಶ ನೀಡುವ ಬಗ್ಗೆ ಹಲವು ವರ್ಷಗಳಿಂದ ನಡೆಯುತ್ತಿರುವ ವಾದ ಈಗ ಇನ್ನೊಂದು ಹಂತ ತಲುಪಿದೆ. ಮಹಿಳೆಯರ ಪ್ರವೇಶಕ್ಕೆ ನಿರ್ಬಂಧ ವಿಧಿಸಲು ತಿರುವಾಂಕೂರು ದೇವಸ್ವಂ ಮಂಡಳಿಯಂಥ ಶಾಸನಾತ್ಮಕ ಮಂಡಳಿಗೆ ಅವಕಾಶವಿದೆಯೇ ಹಾಗೂ ಧಾರ್ಮಿಕ ಹಕ್ಕುಗಳನ್ನು ರಕ್ಷಿಸುವ ಸಾಂವಿಧಾನದ 25, 26ನೇ ಪರಿಚ್ಛೇದವನ್ನು ಇದು ಉಲ್ಲಂ ಸುತ್ತದೆಯೇ ಎಂಬ ಅಂಶಗಳನ್ನು ಸಾಂವಿಧಾನಿಕ ಪೀಠ ಚರ್ಚಿಸಲಿದೆ. ಸದ್ಯ ಪ್ರಕರಣದ ವಿಚಾರಣೆ ನಡೆಸುತ್ತಿರುವ ಸುಪ್ರೀಂಕೋರ್ಟ್‌ನ ತ್ರಿಸದಸ್ಯ ಪೀಠವು ಈಗ ವಿಚಾರಣೆಯನ್ನು ಸಂವಿಧಾನ ಪೀಠಕ್ಕೆ ವರ್ಗಾಯಿಸಿದೆ.

ಸಾಂವಿಧಾನಿಕ ಪರಿಚ್ಛೇದಗಳ ಪ್ರಕರಣದ ವಿಚಾ ರಣೆಯನ್ನು ಐವರು ಸದಸ್ಯರ ಪೀಠವೇ ಮಾಡಬೇಕಿದೆ. ಹೀಗಾಗಿ ಈ ನಿರ್ಧಾರ ಕೈಗೊಂಡಿದ್ದೇವೆ ಎಂದಿದೆ ನ್ಯಾಯಪೀಠ. ಶಬರಿಮಲೆ ದೇಗುಲಕ್ಕೆ ಮಹಿಳೆಯರಿಗೆ ಅವಕಾಶ ನೀಡಬೇಕು ಎಂಬುದು ಹಲವು ದಶಕಗಳ ವಾದವಾಗಿದ್ದು, ಹಿಂದೆ ಕೇರಳ ಹೈಕೋರ್ಟ್‌ ಈ ನಿರ್ಬಂಧವನ್ನು ಎತ್ತಿಹಿಡಿದಿದ್ದರಿಂದ ಇದರ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗಿತ್ತು.

ಸಾಂವಿಧಾನಿಕ ದ್ವಂದ್ವ: ಸಂವಿಧಾನ ಪೀಠವು ತನ್ನ ವಿಚಾರಣೆಯಲ್ಲಿ ಪರಿಗಣಿಸಬೇಕಾದ ಆರು ಅಂಶಗಳನ್ನು ತ್ರಿಸದಸ್ಯ ಪೀಠ ಸೂಚಿಸಿದೆ. ಪ್ರಸ್ತುತ ನಿರ್ಬಂಧವು ಮಹಿಳೆಯರ ವಿರುದ್ಧ ಲಿಂಗ ತಾರತಮ್ಯ ಉಂಟುಮಾಡುತ್ತದೆಯೇ, ಸಮಾನತೆ ಹಕ್ಕನ್ನು ಉಲ್ಲಂಘಿಸುತ್ತದೆಯೇ ಅಥವಾ ಧಾರ್ಮಿಕ ಸ್ವಾತಂತ್ರ್ಯದ ಉಲ್ಲಂಘನೆಯಾಗಿದೆಯೇ ಎಂಬುದನ್ನು ಪರಿಶೀಲಿಸಲಿದೆ. ಅಲ್ಲದೆ ಸಂವಿಧಾನದ ಪರಿಚ್ಛೇದ 25ರ ಅಡಿಯಲ್ಲಿ ಅಯ್ಯಪ್ಪ ಭಕ್ತರ ಹಕ್ಕುಗಳನ್ನು ರಕ್ಷಿಸಬೇಕೆ ಎಂಬುದನ್ನೂ ಇದು ಪರಿಗಣಿಸಲಿದೆ.

ಪುರಾತನ ವಿವಾದ: ಪ್ರಸ್ತುತ 10 ರಿಂದ 50 ವರ್ಷ ವರೆಗಿನ ಮಹಿಳೆಯರನ್ನು ಶಬರಿಮಲೆ ದೇಗುಲ ಪ್ರವೇಶಕ್ಕೆ ನಿರ್ಬಂಧಿಸಲಾಗಿದೆ. ಅಯ್ಯಪ್ಪ ಬ್ರಹ್ಮಚಾರಿಯಾಗಿದ್ದು, ಋತುಸ್ರಾವವಾದ ಮಹಿಳೆಯರು ಗರ್ಭಗುಡಿ ಪ್ರವೇಶಿಸಬಾರದು ಎಂಬ ನಿರ್ಬಂಧವನ್ನು ತಿರುವಾಂಕೂರು ದೇವಸ್ವಂ ಮಂಡಳಿ ಅನುಸರಿಸುತ್ತಿದೆ. ಈ ನಿರ್ಬಂಧ ತುಂಬಾ ಹಿಂದಿನಿಂದಲೂ ಚಾಲ್ತಿಯಲ್ಲಿದೆ. ಆದರೆ ಇದು ಲಿಂಗ ತಾರತಮ್ಯದ ಪ್ರಕರಣವಲ್ಲ. ಬದಲಿಗೆ ವಯೋ ತಾರತಮ್ಯ ಎಂದು ದೇವಸ್ವಂ ಮಂಡಳಿ ಹೇಳಿದ್ದು, ಸಂವಿಧಾನದ 26ನೇ ಪರಿಚ್ಛೇದದ ಅಡಿಯಲ್ಲಿ ಧಾರ್ಮಿಕ ನಂಬಿಕೆಗಳನ್ನು ಪೋಷಿಸಲಾಗುತ್ತಿದೆ ಎಂದು ವಾದಿಸಿದೆ. ಆದರೆ ಕೇರಳದಲ್ಲಿ ಸರಕಾರ ಬದಲಾದಂತೆ ನಿಲುವೂ ಬದಲಾಗಿದೆ. ಈ ಹಿಂದೆ ಯುಡಿಎಫ್ ಸರಕಾರವಿದ್ದಾಗ ಶಬರಿಮಲೆ ಆಡಳಿತ ಮಂಡಳಿಯ ನಿರ್ಬಂಧವನ್ನು ಬೆಂಬಲಿಸಿತ್ತು. ಆದರೆ ಎಲ್‌ಡಿಎಫ್ ಸರಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ನಿಲುವು ಬದಲಾಗಿದ್ದು, ಎಲ್ಲ ವಯಸ್ಸಿನ ಮಹಿಳೆಯರಿಗೂ ಪ್ರವೇಶಕ್ಕೆ ಅವಕಾಶ ನೀಡಬೇಕು ಎಂದು ವಾದಿಸಿದೆ.

ಟಾಪ್ ನ್ಯೂಸ್

crime

Ramanagara: ತಂದೆಯಿಂದಲೇ ಮಗನ ಕೊಲೆ.!

Bus Carrying Devotees Catches Fire In Haryana

Nuh; ಹೊತ್ತಿ ಉರಿದ ಮಥುರಾ ಭಕ್ತರಿದ್ದ ಬಸ್; ಎಂಟು ಮಂದಿ ಸಾವು

ಕಾಶಿಯಲ್ಲಿ ಕಾಲು ಸಂಕ- ಬಟ್ಟೆ ಒಗೆಯುವ ಕಲ್ಲಾಗಿದೆ ಕೆಳದಿ ಸಾಮ್ರಾಜ್ಯದ ಶಾಸನ

ಅವ್ಯವಸ್ಥೆ… ಕಾಶಿಯಲ್ಲಿ ಕಾಲು ಸಂಕ- ಬಟ್ಟೆ ಒಗೆಯುವ ಕಲ್ಲಾಗಿದೆ ಕೆಳದಿ ಸಾಮ್ರಾಜ್ಯದ ಶಾಸನ

PU ಕಂಪ್ಯೂಟರ್‌ ಸೈನ್ಸ್‌, ಸೈಕಾಲಜಿಗೂ ಎನ್‌ಸಿಇಆರ್‌ಟಿ ಪಠ್ಯ

PU ಕಂಪ್ಯೂಟರ್‌ ಸೈನ್ಸ್‌, ಸೈಕಾಲಜಿಗೂ ಎನ್‌ಸಿಇಆರ್‌ಟಿ ಪಠ್ಯ

ಕೇರಳದಲ್ಲಿ 2 ವಾರದಲ್ಲಿ 2 ಲಕ್ಷ ಮಂದಿಗೆ ಸಾಂಕ್ರಾಮಿಕ ರೋಗ; 10 ಸಾವು

ಕೇರಳದಲ್ಲಿ 2 ವಾರದಲ್ಲಿ 2 ಲಕ್ಷ ಮಂದಿಗೆ ಸಾಂಕ್ರಾಮಿಕ ರೋಗ; 10 ಸಾವು

KARಸಾಗರದಾಚೆಯಿಂದ ತವರಿಗೆ ಕರೆ ತಂದ ಕೃಷಿ ಪ್ರೀತಿ

Karkala ಸಾಗರದಾಚೆಯಿಂದ ತವರಿಗೆ ಕರೆ ತಂದ ಕೃಷಿ ಪ್ರೀತಿ

Hyderabad: ನಟಿ ಪವಿತ್ರ ಜಯರಾಂ ಕಾರು ಅಪಘಾತದಲ್ಲಿ ಗಾಯಗೊಂಡಿದ್ದ, ಗೆಳೆಯ ಚಂದು ಆತ್ಮಹತ್ಯೆ

Hyderabad: ನಟಿ ಪವಿತ್ರ ಜಯರಾಂ ಕಾರು ಅಪಘಾತದಲ್ಲಿ ಗಾಯಗೊಂಡಿದ್ದ, ಗೆಳೆಯ ಚಂದು ಆತ್ಮಹತ್ಯೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bus Carrying Devotees Catches Fire In Haryana

Nuh; ಹೊತ್ತಿ ಉರಿದ ಮಥುರಾ ಭಕ್ತರಿದ್ದ ಬಸ್; ಎಂಟು ಮಂದಿ ಸಾವು

Jaishankar

Nehru ಕಾಲದಲ್ಲಿ ಕಬಳಿಸಿದ್ದ ಹಳ್ಳಿಯಲ್ಲಿ ಚೀನ ಗ್ರಾಮ: ಸಚಿವ ಜೈಶಂಕರ್‌ ತಿರುಗೇಟು

covid

BHU; ಕೊವ್ಯಾಕ್ಸಿನ್‌ನಿಂದ ಶೇ. 33 ಜನರಿಗೆ ಅಡ್ಡಪರಿಣಾಮ

1-qweqweqwe

Kejriwal ಮನೆಯಲಿ ಹಲ್ಲೆ ಪ್ರಕರಣ: ಮಲಿವಾಲ್‌-ಆತಿಷಿ ವಾಗ್ಯುದ್ಧ

Supreme Court

ಮತದಾನ ವಿವರ ವಿಳಂಬ: ಅರ್ಜಿಯ ತ್ವರಿತ ವಿಚಾರಣೆಗೆ ಸುಪ್ರೀಂ ಅಸ್ತು

MUST WATCH

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

ಹೊಸ ಸೇರ್ಪಡೆ

crime

Ramanagara: ತಂದೆಯಿಂದಲೇ ಮಗನ ಕೊಲೆ.!

Bus Carrying Devotees Catches Fire In Haryana

Nuh; ಹೊತ್ತಿ ಉರಿದ ಮಥುರಾ ಭಕ್ತರಿದ್ದ ಬಸ್; ಎಂಟು ಮಂದಿ ಸಾವು

ಕಾಶಿಯಲ್ಲಿ ಕಾಲು ಸಂಕ- ಬಟ್ಟೆ ಒಗೆಯುವ ಕಲ್ಲಾಗಿದೆ ಕೆಳದಿ ಸಾಮ್ರಾಜ್ಯದ ಶಾಸನ

ಅವ್ಯವಸ್ಥೆ… ಕಾಶಿಯಲ್ಲಿ ಕಾಲು ಸಂಕ- ಬಟ್ಟೆ ಒಗೆಯುವ ಕಲ್ಲಾಗಿದೆ ಕೆಳದಿ ಸಾಮ್ರಾಜ್ಯದ ಶಾಸನ

PU ಕಂಪ್ಯೂಟರ್‌ ಸೈನ್ಸ್‌, ಸೈಕಾಲಜಿಗೂ ಎನ್‌ಸಿಇಆರ್‌ಟಿ ಪಠ್ಯ

PU ಕಂಪ್ಯೂಟರ್‌ ಸೈನ್ಸ್‌, ಸೈಕಾಲಜಿಗೂ ಎನ್‌ಸಿಇಆರ್‌ಟಿ ಪಠ್ಯ

ಕೇರಳದಲ್ಲಿ 2 ವಾರದಲ್ಲಿ 2 ಲಕ್ಷ ಮಂದಿಗೆ ಸಾಂಕ್ರಾಮಿಕ ರೋಗ; 10 ಸಾವು

ಕೇರಳದಲ್ಲಿ 2 ವಾರದಲ್ಲಿ 2 ಲಕ್ಷ ಮಂದಿಗೆ ಸಾಂಕ್ರಾಮಿಕ ರೋಗ; 10 ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.