ಬ್ರಹ್ಮಪುತ್ರ ಮೇಲೆ ಹೊಸ ರೈಲು ಸೇತುವೆ: ಸಮೀಕ್ಷೆ ಬಹುತೇಕ ಪೂರ್ಣ
Team Udayavani, Jan 1, 2019, 1:49 PM IST
ಸಿಲ್‌ಘಾಟ್, ಅಸ್ಸಾಂ : ಅಸ್ಸಾಂ ನ ನಗಾಂವ್ ಜಿಲ್ಲೆಯಲ್ಲಿ ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ ನಿರ್ಮಿಸಲು ಉದ್ದೇಶಿಸಲಾಗಿರುವ ಹೊಸ ರೈಲ್ವೇ ಸೇತುವೆಯ ಸಮೀಕ್ಷಾ ಕಾರ್ಯ ಈಗ ಮುಗಿತಾಯದ ಹಂತಕ್ಕೆ ಬಂದಿದೆ ಎಂಧು ಕೇಂದ್ರ ರೈಲ್ವೇ ಸಹಾಯಕ ಸಚಿವ ರಾಜೇನ್ ಗೊಹೇನ್ ಇಂದಿಲ್ಲಿ ಹೇಳಿದರು.
ಇದೇ ವೇಳೆ ಸಚಿವರು ಇಲ್ಲಿಂದ ಕೋಲ್ಕತ ಕ್ಕೆ ಆರಂಭಿಸಲಾದ ಹೊಸ ಸಾಪ್ತಾಹಿಕ ರೈಲಿಗೆ ಹಸಿರು ನಿಶಾನೆ ತೋರಿದರು.
ಬ್ರಹ್ಮಪುತ್ರ ನದಿಯ ಮೇಲಿನ ಸೇತುವೆಯ ಸಮೀಕ್ಷೆ ಪೂರ್ಣಗೊಂಡಾಗ ಅದರ ಬಜೆಟ್ ಸೇರ್ಪಡೆಯನ್ನು ಪರಿಗಣಿಸಲಾಗುವುದು ಎಂದು ಗೊಹೇನ್ ಹೇಳಿದರು.