ಎಸ್ಯುವಿ, ಲಕ್ಸುರಿ ಕಾರುಗಳಿಗೆ ಜಿಎಸ್ಟಿ ಬರೆ
Team Udayavani, Aug 8, 2017, 7:40 AM IST
ಹೊಸದಿಲ್ಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಜಾರಿ ಬಳಿಕ ಎಸ್ಯುವಿ, ಮಧ್ಯಮಗಾತ್ರದ ಕಾರುಗಳು, ದೊಡ್ಡ ಮತ್ತು ಲಕ್ಸುರಿ ಕಾರುಗಳ ಬೆಲೆ ಅಗ್ಗವಾಗಿದ್ದು, ಇದೀಗ ಮತ್ತೆ ದುಬಾರಿಯಾಗಲಿದೆ. ಜಿಎಸ್ಟಿ ಮಂಡಳಿ ಸಭೆಯಲ್ಲಿ ಇಂತಹ ಕಾರುಗಳ ಮೇಲಿನ ಸೆಸ್ ಅನ್ನು ಈಗಿರುವ ಶೇ.15ರಿಂದ ಶೇ.25ಕ್ಕೇರಿಸಲು ಶಿಫಾರಸು ಮಾಡಲಾಗಿದೆ.
ಸದ್ಯ ಜಿಎಸ್ಟಿಯಲ್ಲಿ ಕಾರುಗಳಿಗೆ ಅತ್ಯಧಿಕ ಶೇ.28ರಷ್ಟು ತೆರಿಗೆ ವಿಧಿಸಲಾಗುತ್ತಿದೆ. ಇದರ ಮೇಲೆ ಶೇ.1ರಿಂದ ಶೇ.15 ಸೆಸ್ ವಿಧಿಸಲಾಗುತ್ತದೆ. ಈ ಮೂಲಕ ಜಿಎಸ್ಟಿ ಜಾರಿಯಿಂದ ರಾಜ್ಯಗಳಿಗಾಗುವ ನಷ್ಟಕ್ಕೆ ಪರಿಹಾರ ನೀಡಲಾಗುತ್ತದೆ. ಆ.5ರಂದು ನಡೆದ ಜಿಎಸ್ಟಿ ಮಂಡಳಿ 20ನೇ ಸಭೆಯಲ್ಲಿ ಕಾರುಗಳ ಮೇಲಿನ ಸೆಸ್ ಏರಿಸುವ ಬಗ್ಗೆ ಶಿಫಾರಸು ಮಾಡಿದೆ. ಆದರೆ ಪರಿಹಾರ ಸೆಸ್ ಅನ್ನು ಹೆಚ್ಚಳಗೊಳಿಸುವ ವಿಚಾರದಲ್ಲಿ ಜಿಎಸ್ಟಿ (ರಾಜ್ಯಗಳಿಗೆ ಪರಿಹಾರ) ಸೆಕ್ಷನ್ 8ಕ್ಕೆ ತಿದ್ದುಪಡಿ ಮಾಡಬೇಕಾಗುತ್ತದೆ. ಈ ತಿದ್ದುಪಡಿ ಆದದ್ದೇ ಆದಲ್ಲಿ 13 ಪ್ರಯಾಣಿಕರಿಗಿಂತ ಕಡಿಮೆ ಕೂರುವ, 10 ಮಂದಿಗಿಂತ ಹೆಚ್ಚು ಮಂದಿ ಕೂರುವ ದೊಡ್ಡ ಕಾರುಗಳು, ಮಧ್ಯಮ, ದೊಡ್ಡ ಗಾತ್ರದ, ಎಸ್ಯುವಿಗಳ ಬೆಲೆ ಏರಿಕೆಯಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!