ಹರಿ ಸತ್ಸಂಗ ಸಮಿತಿಯ ಸಂಸ್ಥಾಪಕ ಸ್ವರೂಪ್ ಚಂದ್ ಗೋಯಲ್ ಇನ್ನಿಲ್ಲ
Team Udayavani, Jul 9, 2019, 3:57 PM IST
ಮುಂಬಯಿ : ಖ್ಯಾತ ಸಮಾಜ ಸೇವಕ ಮತ್ತು ಶ್ರೀ ಹರಿ ಸತ್ಸಂಗ ಸಮಿತಿಯ ಸಂಸ್ಥಾಪಕ ಸ್ವರೂಪ್ ಚಂದ್ ಗೋಯಲ್ ಅವರು ನಿನ್ನೆ ಸೋಮವಾರ ತಮ್ಮ 89ರ ಹರೆಯದಲ್ಲಿ ಮುಂಬಯಿಯಲ್ಲಿ ನಿಧನ ಹೊಂದಿದರು.
ಸ್ವರೂಪ್ ಚಂದ್ ಗೋಯಲ್ ಅವರ ನಿಧನ ವಾರ್ತೆ ಅವರ ಅಪಾರ ಹಿಂಬಾಲಕರು ಮತ್ತು ಅವರೊಂದಿಗೆ ನಿಕಟ ಆಧ್ಯಾತ್ಮಿಕ ಸಂಬಂಧ ಹೊಂದಿದ ಎಲ್ಲರಿಗೂ ಆಘಾತ ಉಂಟು ಮಾಡಿದೆ.
ಗೋಯಲ್ ಅವರ ಅಂತ್ಯಕ್ರಿಯೆಯಲ್ಲಿ ಅನೇಕ ಗಣ್ಯರು, ವಿವಿಧ ರಾಜಕೀಯ ಮುಖಂಡರು, ಅಭಿಮಾನಿಗಳು ಮತ್ತು ಅನುಯಾಯಿಗಳು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
1930ರ ಆಗಸ್ಟ್ 18ರಂದು ಜನಿಸಿದ್ದ ಗೋಯಲ್ ಅವರ 90ನೇ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ನಡೆಸುವ ಸಿದ್ಧತೆಗಳು ಜಾರಿಯಲ್ಲಿದ್ದಂತೆಯೇ ಅವರು ನಿಧನ ಹೊಂದಿರುವುದು ಅಸಂಖ್ಯರ ದುಃಖಕ್ಕೆ ಕಾರಣವಾಗಿದೆ.