ಬೆಂಗ್ಳೂರು ಐಐಎಸ್ಸಿಗೆ ಹಿರಿಮೆ
Team Udayavani, Nov 17, 2018, 7:17 AM IST
ಹೊಸದಿಲ್ಲಿ: ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್ಸಿ), ವಿದ್ಯಾರ್ಥಿಗಳಿಗೆ ಜಾಗತಿಕ ಮಟ್ಟದ ಉದ್ಯೋಗಾರ್ಹತೆ ಕಲ್ಪಿಸುವ (ಗ್ಲೋಬರ್ ಯೂನಿವರ್ಸಿಸಿ ಎಂಪ್ಲಾಯೆ ಬಿಲಿಟಿ ರ್ಯಾಂಕಿಂಗ್) ವಿಶ್ವದ ಟಾಪ್ 150 ವಿದ್ಯಾಸಂಸ್ಥೆಗಳ ಪಟ್ಟಿಯಲ್ಲಿ 28ನೇ ಸ್ಥಾನ ಪಡೆದಿದೆ. ಕಳೆದ ವರ್ಷ ಇದೇ ಪಟ್ಟಿಯಲ್ಲಿ 29ನೇ ಸ್ಥಾನ ಪಡೆದಿದ್ದ ಸಂಸ್ಥೆ ಈ ಬಾರಿ ತನ್ನ ಶ್ರೇಯಾಂಕ ಹೆಚ್ಚಿಸಿ ಕೊಂಡಿರುವುದು ವಿಶೇಷ. ಇದೇ ಪಟ್ಟಿಯಲ್ಲಿದಿಲ್ಲಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆ 53ನೇ ಸ್ಥಾನದಲ್ಲಿದ್ದರೆ (ಕಳೆದ ವರ್ಷ 145ನೇ ಸ್ಥಾನ), ಗುಜರಾತ್ನ ವಸ್ತ್ರಾಪುರ ದಲ್ಲಿರುವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸಂಸ್ಥೆ (ಐಐಎಂ) 144ನೇ ಸ್ಥಾನ ಪಡೆದಿದೆ.
ಫ್ರಾನ್ಸ್ ಮೂಲದ “ಎಮರ್ಜಿಂಗ್’ ಎಂಬ ಮಾನವ ಸಂಪನ್ಮೂಲ ಕ್ಷೇತ್ರದ ಸಲಹಾ ಸಂಸ್ಥೆ, ವಿಶ್ವದ ನಾನಾ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ದೊರೆ ಯುವ ಶಿಕ್ಷಣ ಹಾಗೂ ಅಲ್ಲಿನ ವಿದ್ಯಾರ್ಥಿ ಗಳಿಗೆ ಸಿಗುವ ಔದ್ಯೋಗಿಕ ಅವಕಾಶ ಗಳನ್ನಾಧರಿಸಿ “ಟೈಮ್ಸ್ ಹೈಯರ್ ಎಜುಕೇಷನ್’ ಎಂಬ ಈ ಪಟ್ಟಿಯನ್ನು ತಯಾ ರಿಸಿದೆ. ವಿವಿಧ ಅಂತಾರಾಷ್ಟ್ರೀಯ ಕಂಪನಿಗಳ ಸುಮಾರು 7000 ನೇಮಕಾತಿ ಅಧಿಕಾರಿಗಳ ಅಭಿಪ್ರಾಯವನ್ನು ಈ ಪಟ್ಟಿಯನ್ನು ತಯಾರಿಸುವ ಸಂದರ್ಭದಲ್ಲಿ ಬಳಸಲಾಗಿದೆ ಎಂದು ಹೇಳಲಾಗಿದೆ.
ಇದರಲ್ಲಿ, ಜಗದ್ವಿಖ್ಯಾತ ಹಾರ್ವರ್ಡ್ ವಿಶ್ವ ವಿದ್ಯಾಲಯ ಮೊದಲ ಸ್ಥಾನ ಪಡೆದಿದ್ದರೆ, ಕ್ಯಾಲಿಫೋರ್ನಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಹಾಗೂ ಮಸಾಚ್ಯುಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ತೃತೀಯ ಸ್ಥಾನ ಪಡೆದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tragedy: ತನ್ನ ಅಪಾರ್ಟ್ಮೆಂಟ್ನಲ್ಲೇ ನೇಣಿಗೆ ಶರಣಾದ ಭೋಜ್ಪುರಿ ನಟಿ… ಕಾರಣ ನಿಗೂಢ
B.Y. Raghavendra: ಕಾಂಗ್ರೆಸ್ನವರ ಬಳಿ ಗ್ಯಾರಂಟಿ ಅಡ್ವಾನ್ಸ್ ಹಣ ಕೇಳಿ: ಬಿವೈಆರ್
Gayatri Siddeshwar: ಕೈ ಸರ್ಕಾರದ ಗ್ಯಾರಂಟಿ ತಾತ್ಕಾಲಿಕ; ಗಾಯಿತ್ರಿ
Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ
Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ