ಮಾನವ ಓದುವ ರಹಸ್ಯ ಬಯಲು
Team Udayavani, Mar 14, 2017, 3:50 AM IST
ಹೊಸದಿಲ್ಲಿ: ಓದುವ ಕಲೆ ಮನುಷ್ಯನಿಗೆ ಮಾತ್ರ ಏಕೆ ಸಿದ್ಧಿಸಿದೆ? ಕಂಪ್ಯೂಟರ್, ಟಿವಿಯ ದೃಶ್ಯಗಳನ್ನು ನೋಡಿ ಹೇಗೆ ಅದರ ಅರ್ಥಹೀರಿಕೊಳ್ಳುತ್ತಾನೆ? ಬಣ್ಣಗಳನ್ನೇಕೆ ಗುರುತಿಸುಧಿತ್ತಾನೆ? ಈ ಪ್ರಶ್ನೆಗಳಿಗೀಗ ಕೋಲ್ಕತ್ತಾ ಮೂಲದ ಇಬ್ಬರು ವಿಜ್ಞಾನಿಗಳು ಉತ್ತರ ಕಂಡುಕೊಂಡಿದ್ದಾರೆ. ಇದಕ್ಕೆಲ್ಲ ನೆರವಾಗು ವುದು ಕಣ್ಣೊಳಗಿನ “ಫೋವಿಯಾ’ ಭಾಗ!
ನರವಿಜ್ಞಾನ ತಜ್ಞರಾದ ರೇಣುಕಾ ಸಿನ್ಹಾ ಮತ್ತು ಮೃಣಾಲಿನಿ ಹೂನ್ ಈ ಕುರಿತು ಸಂಶೋಧನೆ ನಡೆಸಿದ್ದು, ಮುಖವನ್ನು ಗುರುತಿಸುವ, ಅಕ್ಷರಗಳನ್ನು ಓದುವ ಕಲೆ ಹೋಮೋ ಸೇಪಿಯನ್ಸ್ಗೆ ಬಂದಿದೆ ಎಂದಾದರೆ ಇದಕ್ಕೆ ಕಾರಣ ಮೆದುಳಿನ ಯಾವುದೋ ಕೋಶವಲ್ಲ. ಕಣ್ಣಿನ ರೆಟಿನಾ ಭಾಗದಲ್ಲಿರುವ ಫೋವಿಯಾ ಎಂಬ ತಗ್ಗು ಪ್ರದೇಶ!
ಓದುವಾಗ, ಬಣ್ಣ ಗುರುತಿಸುವಾಗ, ಕಂಪ್ಯೂಟರ್ ನೋಡುವಾಗ ಫೋವಿಯಾದಲ್ಲಿನ ಸೆಲ್ಯುಲರ್ ಕೋಶದಲ್ಲೂ ಏರಿಳಿತಆಗುತ್ತಿರುತ್ತವೆ. ಸಾಮಾನ್ಯವಾಗಿ ವಯಸ್ಸಾಧಿಗುತ್ತಾ ಹೋದಂತೆ ಕಣ್ಣಿನ ಅಕ್ಷಿಪಟಲದ ಅವನತಿ ಆಗುತ್ತದೆ. ಆಗ ಫೋವಿಯಾ ಕೂಡ ಕೆಲಸ ಮಾಡುವುದು ಕಡಿಮೆ. ಈ ಕಾರಣ ದಿಂದ ವಯಸ್ಸಾದವರು ಆಪ್ತರ ಮುಖ ಗುರುತಿಸುವುದಿಲ್ಲ ಎನ್ನುತ್ತಾರೆ ತಜ್ಞರು.
ದೊಡ್ಡದಾದ ಸಂಗತಿಯನ್ನು, ಕಿರಿದಾಗಿ ಗ್ರಹಿಸುವಲ್ಲಿ ಇದರ ಪಾತ್ರ ಬಹಳ ಹಿರಿದು. ಜ್ಞಾನಗ್ರಹಿಕೆ ಅಂಗ ಕೇವಲ ಮೆದುಳಷ್ಟೇ ಅಲ್ಲ ಎಂಬುದು ಈ ಮೂಲಕ ಜಾಹೀರಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sadhguru; ಕಾವೇರಿ ಕಾಲಿಂಗ್ ಮೂಲಕ 10.9 ಕೋಟಿ ಸಸಿಗಳ ನಾಟಿ
WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್
Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು