ಬ್ಲೂವೇಲ್‌ನಿಂದ ಪಾರಾದ ಯುವಕ
Team Udayavani, Sep 7, 2017, 8:35 AM IST
ಕಾರೈಕಲ್ (ಪುದುಶೆÏàರಿ): ವಿಶ್ವದೆಲ್ಲೆಡೆ ಬ್ಲೂವೇಲ್ ಆನ್‌ಲೈನ್ ಗೇಮ್ ಸದ್ದು ಮಾಡಿದ್ದಷ್ಟೇ ಅಲ್ಲ, ಸಾಕಷ್ಟು ಆತಂಕವನ್ನೂ ಸೃಷ್ಟಿಸಿದೆ. ಪುದುಚೇರಿಯಲ್ಲೊಬ್ಬ 22ರ ಯುವಕ ಫೈನಲ್ ಚಾಲೇಂಜ್‌ನಲ್ಲಿ ಸಾವಿನ ದವಡೆಗೆ ಸಿಲುಕಿ ಪಾರಾಗಿ ಬಂದಿದ್ದಾನೆ.
ಫೈನಲ್‌ನಲ್ಲಿ ಸವಾಲನ್ನು ಪೂರ್ಣಗೊಳಿಸಲಾಗದೇ ಕೆಟ್ಟ ಅನುಭವದೊಂದಿಗೆ ಹಿಂದಿರುಗಿರುವ ವ್ಯಕ್ತಿಯಾಗಿದ್ದಾನೆ. ಸವಾಲುಗಳನ್ನು ಎದುರಿಸದೇ ಇದ್ದ ಪಕ್ಷದಲ್ಲಿ ನಾನಾ ರೀತಿಯ ಬೆದರಿಕೆಗಳನ್ನೂ ಎದುರಿಸಬೇಕಾಗಿ ಬರುತ್ತದೆ ಎಂದು ಹೇಳಿಕೊಂಡಿದ್ದಾನೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ಪೊಲೀಸ್ ಅಧಿಕಾರಿ ವಂಸೀಧರ್ ರೆಡ್ಡಿ ಯುವಕನನ್ನು ವಿಚಾರಣೆಗೊಳಪಡಿಸಿದ್ದು, ಆ ಬಳಿಕ ಘಟನೆ ಬಗ್ಗೆ ಮಾಹಿತಿ ಬಹಿರಂಗಗೊಂಡಿದೆ. ಆತನೇ ಹೇಳಿಕೊಂಡಿರುವಂತೆ, ಎರಡು ವಾರದ ಹಿಂದೆ ಬ್ಲೂéವೇಲ್‌ನ ಲಿಂಕ್ ವ್ಯಾಟ್ಸ್‌ಆ್ಯಪ್ ಮೂಲಕ ಬಂದಿದ್ದು, ಅದರ ಮೂಲಕ ಆಟದೊಳಕ್ಕೆ ಪ್ರವೇಶಿಸಿದ್ದಾನೆ. ಜನಪ್ರಿಯ ಕೊರಿಯರ್ ಕಂಪನಿಯೊಂದರಲ್ಲಿ ಕಾರ್ಯನಿರ್ವಹಿಸುವ ಸ್ನೇಹಿತರ ಗ್ರೂಪ್‌ನಲ್ಲಿ ಈ ಲಿಂಕ್ ಬಂದಿರುವುದಾಗಿ ಹೇಳಿಕೊಂಡಿದ್ದಾನೆ. ಆಟ ಆಡುತ್ತ ಊರು ಬಿಟ್ಟು ಬೇರೆಡೆ ಪ್ರಯಾಣ ಬೆಳೆಸಿದ್ದಾನೆ. ಅಡ್ಮಿನ್ ನೀಡುವ ಸವಾಲುಗಳು ಶುರುವಾಗುವುದೇ ಬೆಳಗಿನಜಾವ 2 ಗಂಟೆ ಸುಮಾರಿಗೆ ಎಂದು ಆತ ಪೊಲೀಸರಿಗೆ ವಿವರಿಸಿದ್ದಾನೆ.