ನಾಳೆ ಗುಜರಾತ್‌ಗೆ ಚಂಡಮಾರುತ

Team Udayavani, Jun 12, 2019, 6:10 AM IST

ಅಹ್ಮದಾಬಾದ್‌/ಹೊಸದಿಲ್ಲಿ: ಪೂರ್ವದ ಒಡಿಶಾಕ್ಕೆ ಫೋನಿ ಚಂಡಮಾರುತ ಅಪ್ಪಳಿಸಿದ ಒಂದೇ ತಿಂಗಳಿನಲ್ಲಿ ಈಗ ಪಶ್ಚಿಮ ಅರಬಿ ಸಮುದ್ರದಲ್ಲಿ ಎದ್ದಿರುವ ‘ವಾಯು’ ಚಂಡಮಾರುತವು ಗುರುವಾರ ಗುಜರಾತ್‌ ಕರಾವಳಿಗೆ ಅಪ್ಪಳಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.

‘ವಾಯು’ವನ್ನು ಸಮರ್ಥವಾಗಿ ಎದುರಿಸಲು ಗುಜರಾತ್‌ ಸರಕಾರ ಸಿದ್ಧತೆ ಪೂರ್ಣಗೊಳಿಸಿದೆ. ಜೂ. 13ರಂದು ಚಂಡಮಾರುತವು ಗುಜರಾತ್‌ ಕರಾವಳಿಗೆ ಅಪ್ಪಳಿಸುವ ಸಾಧ್ಯತೆ ಇದ್ದು, ಸೌರಾಷ್ಟ್ರ ಮತ್ತು ಕಛ್ ಕರಾವಳಿ ಪ್ರದೇಶಗಳಲ್ಲಿ 110 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದೆ ಮತ್ತು ಧಾರಾಕಾರವಾಗಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಕೇಂದ್ರ ಗೃಹ ಸಚಿವ ಅಮಿತ್‌ ಶಾ ದಿಲ್ಲಿಯಲ್ಲಿ ಹಿರಿಯ ಅಧಿಕಾರಿಗಳ ಜತೆಗೆ ಈ ಕುರಿತು ಸಭೆಯನ್ನೂ ನಡೆಸಿದ್ದಾರೆ.

ಐಎಂಡಿ ಬಿಡುಗಡೆ ಮಾಡಿರುವ ಬುಲೆಟಿನ್‌ ಪ್ರಕಾರ, ಜೂ.13ರಂದು ಪೋರಬಂದರ್‌ ಮತ್ತು ಮಾಹುವ, ವೇರಾವಲ್ ಮತ್ತು ದಿಯು ಪ್ರದೇಶದಲ್ಲಿ ಗಂಟೆಗೆ 110-120ರಿಂದ 135 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದೆ.

ಇಸ್ರೋ ಕಣ್ಣು

ಈ ಬಾರಿ ಚಂಡಮಾರುತದ ಬೆಳವಣಿಗೆಗಳ ಬಗ್ಗೆ ತಾಜಾ ಮಾಹಿತಿ ನೀಡಲು ಇಸ್ರೋ ವಿಶೇಷ ಕಣ್ಗಾವಲು ಇಡಲಿದೆ. ಉಳಿದಂತೆ ಎನ್‌ಡಿಆರ್‌ಎಫ್ನ 15 ವಿಶೇಷ ತಂಡಗಳು ಗುಜರಾತ್‌ನ ಕರಾವಳಿ ಪ್ರದೇಶಗಳಲ್ಲಿ ನಿಯೋಜನೆಗೊಂಡಿವೆ. ಇದರ ಜತೆಗೆ ಸೇನೆ, ಐಎಎಫ್, ನೌಕಾಪಡೆಗೂ ನೆರವು ನೀಡುವಂತೆ ಮನವಿ ಮಾಡಲಾಗಿದ್ದು, ಸನ್ನದ್ಧ ಸ್ಥಿತಿಯಲ್ಲಿ ಇರುವಂತೆ ಸೂಚಿಸಲಾಗಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ