ತಿಮ್ಮಪ್ಪನ ದರ್ಶನ ಟಿಕೆಟ್ ಹೆಚ್ಚಳಕ್ಕೆ ನಿರ್ಧಾರ
ಎಸ್ಎಸ್ಡಿ ಟೋಕನ್, ಆನ್ಲೈನ್ ಟಿಕೆಟ್ ಎರಡೂ ಹೆಚ್ಚಳ; ಕೊರೊನಾ ಇಳಿಕೆ ಹಿನ್ನೆಲೆಯಲ್ಲಿ ಟಿಟಿಡಿಯಿಂದ ಮಹತ್ವದ ನಿರ್ಧಾರ
Team Udayavani, Feb 24, 2022, 7:20 AM IST
ನವದೆಹಲಿ: ತಿರುಮಲದಲ್ಲಿರುವ ತಿರುಪತಿ ವೆಂಕಟೇಶ್ವರ ದೇಗುಲ ಸನ್ನಿಧಾನದಲ್ಲಿ ನೀಡಲಾಗುವ ಸ್ಲಾಟೆಡ್ ಸರ್ವ ದರ್ಶನಂ (ಎಸ್ಎಸ್ಡಿ) ಟೋಕನ್ಗಳ ಸಂಖ್ಯೆಯನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ.
ಕೊರೊನಾ ಸೋಂಕು ಸಂಖ್ಯೆಯಲ್ಲಿ ಇಳಿಮುಖವಾದ್ದರಿಂದ ಆಡಳಿತ ಮಂಡಳಿ, ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಈ ನಿರ್ಧಾರ ಕೈಗೊಂಡಿದೆ.
ಫೆ. 24ರಿಂದ 28ರ ಅವಧಿಯಲ್ಲಿ ದರ್ಶನ ಪಡೆಯಲಿಚ್ಛಿಸುವವರಿಗೆ, ದಿನಂಪ್ರತಿ ಪ್ರಮಾಣಕ್ಕಿಂತ ಹೆಚ್ಚುವರಿಯಾಗಿ 13,000 ಎಸ್ಎಸ್ಡಿ ಟೋಕನ್ಗಳನ್ನು ನೀಡಲು ನಿರ್ಧರಿಸಲಾಗಿದೆ.
ಫೆ. 26ರಿಂದ 28ರ ಅವಧಿಯಲ್ಲಿ ದರ್ಶನ ಪಡೆಯಲು ಇಚ್ಛಿಸುವವರಿಗೆ, ಭೂದೇವಿ ಕಾಂಪ್ಲೆಕ್ಸ್, ಶ್ರೀನಿವಾಸಂ ಕಾಂಪ್ಲೆಕ್ಸ್ ಹಾಗೂ ಶ್ರೀ ಗೋವಿಂದರಾಜ ಸ್ವಾಮಿ ಚೌಲಿóಗಳಲ್ಲಿ ನೀಡಲಾಗುವ ದಿನಂಪ್ರತಿ ಎಸ್ಎಸ್ಡಿ ಟೋಕನ್ಗಳಿಗೆ ಹೆಚ್ಚುವರಿಯಾಗಿ 5,000 ಟೋಕನ್ಗಳನ್ನು ವಿತರಿಸಲು ನಿರ್ಧರಿಸಲಾಗಿದೆ.
ಆ ಮೂಲಕ ದಿನಂಪ್ರತಿ ಒಟ್ಟು 29,000 ಟೋಕನ್ಗಳನ್ನು ವಿತರಿಸಲು ತೀರ್ಮಾನಿಸಲಾಗಿದೆ.
ಇದನ್ನೂ ಓದಿ:ಕಾಶ್ಮೀರದಲ್ಲಿ ಭಾರೀ ಹಿಮಪಾತ: ವಿಮಾನಗಳು ರದ್ದು, ಹೆದ್ದಾರಿ ಬಂದ್
25 ಸಾವಿರ ಟಿಕೆಟ್:
ಮಾರ್ಚ್ನಲ್ಲಿ ದರ್ಶನ ಪಡೆಯಲು ಇಚ್ಛಿಸುವವರಿಗೆ ದಿನಂಪ್ರತಿ ಮಾರಾಟ ಮಾಡಲಾಗುವ ಆನ್ಲೈನ್ ಟಿಕೆಟ್ಗಳ ಸಂಖ್ಯೆಯನ್ನೂ ಹೆಚ್ಚಿಸಲು ತೀರ್ಮಾನಿಸಲಾಗಿದ್ದು, ಪ್ರತಿ ದಿನ ಹೆಚ್ಚುವರಿಯಾಗಿ 25,0000 ಟಿಕೆಟ್ಗಳನ್ನು ನೀಡಲು ತೀರ್ಮಾನಿಸಲಾಗಿದೆ. ಪ್ರತಿ ಟಿಕೆಟ್ ಬೆಲೆ 300 ರೂ. ಆಗಿದ್ದು, ಬುಧವಾರ ಬೆ. 9ಗಂಟೆಯಿಂದ ಇವು ಟಿಟಿಡಿ ವೆಬ್ಸೈಟ್ನಲ್ಲಿ ಲಭ್ಯವಾಗಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ
IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ; ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Horoscope: ಈ ರಾಶಿಯವರು ಹಿತಶತ್ರುಗಳ ಒಳಸಂಚಿನ ಬಗೆಗೆ ಎಚ್ಚರದಿಂದಿರಬೇಕು