ಇಂದಿನ ಯುವ ಜನಾಂಗ ಜಾತಿ, ಸ್ವಜನ ಪಕ್ಷಪಾತವನ್ನು ಒಪ್ಪಲ್ಲ: ಪ್ರಧಾನಿ ಮೋದಿ ಮನ್ ಕೀ ಬಾತ್
ನಮಗೆ ಹಿಂದಿನ ವರ್ಷ ಹೊಸ ವರ್ಷಕ್ಕೆ ಮಾರ್ಗತೋರಿಸುವ ರಹದಾರಿಯಾಗಬೇಕು
Team Udayavani, Dec 29, 2019, 12:29 PM IST
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ 60ನೇ ಕಂತಿನ ಮನ್ ಕೀ ಬಾತ್ ರೇಡಿಯೋ ಕಾರ್ಯಕ್ರಮ ಉದ್ದೇಶಿಸಿ ಭಾನುವಾರ ಮಾತನಾಡಿದ್ದು, ಮಾತೃಭಾಷೆಯನ್ನು ಎಲ್ಲರೂ ಉಪಯೋಗಿಸುವಂತೆ ಕರೆ ನೀಡಿದರು.
ಅಲ್ಲದೇ ದೇಶದ ಎಲ್ಲಾ ಶಾಲೆಗಳಲ್ಲಿ ಫಿಟ್ ಇಂಡಿಯಾ ಗಾರ್ಡಿಂಗ್ ವ್ಯವಸ್ಥೆಯನ್ನು ಜಾರಿಗೊಳಿಸುವುದಾಗಿ ಹೇಳಿದರು. ಈ ಸಂದರ್ಭದಲ್ಲಿ ದೇಶದ ಎಲ್ಲಾ ಪ್ರಜೆಗಳಿಗೂ ಹೊಸ ವರ್ಷದ ಶುಭಾಶಯಗಳನ್ನು ಕೋರಿದ್ದಾರೆ. 2019ಕ್ಕೆ ಕೇವಲ ಗುಡ್ ಬೈ ಹೇಳುವುದಲ್ಲ…ಅದರ ಬದಲು ನಮಗೆ ಹಿಂದಿನ ವರ್ಷ ಹೊಸ ವರ್ಷಕ್ಕೆ ಮಾರ್ಗತೋರಿಸುವ ರಹದಾರಿಯಾಗಬೇಕು ಎಂದರು.
ದೇಶದ ಇಂದಿನ ಯುವಜನಾಂಗ ಜಾತಿವಾದ, ಸ್ವಜನ ಪಕ್ಷಪಾತ ಹಾಗೂ ತಾರತಮ್ಯವನ್ನು ಇಷ್ಟಪಡುವುದಿಲ್ಲ. ಇಂದಿನ ಭಾರತ ಯುವ ಜನತೆಯಿಂದ ಬಹಳಷ್ಟು ನಿರೀಕ್ಷೆಯಲ್ಲಿದೆ. ಅವರೇ ದೇಶವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ಆಶಾಕಿರಣಗಳು ಎಂದು ಹೇಳಿದರು.
ಯುವ ಜನತೆ ತಮ್ಮ ಶಕ್ತಿ, ಹುರುಪಿನೊಂದಿಗೆ ದೇಶದಲ್ಲಿ ಬದಲಾವಣೆ ತರುವ ಶಕ್ತಿಯನ್ನು ಹೊಂದಿದ್ದಾರೆ. ಈ ದಶಕ ಯುವಜನತೆಯ ಕಾಲವಾಗಿದೆ. ಈ ಯುವ ಪೀಳಿಗೆ ದೇಶದ ಅಭಿವೃದ್ಧಿಯಲ್ಲಿ ಮಹತ್ತರವಾದ ಪಾತ್ರ ವಹಿಸಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಯಮುನೋತ್ರಿ ಹೆದ್ದಾರಿಯ ಸುರಕ್ಷಾ ಗೋಡೆ ಕುಸಿತ: 10 ಸಾವಿರ ಪ್ರವಾಸಿಗರ ಪರದಾಟ
ಭಾರತದಲ್ಲಿ 24ಗಂಟೆಯಲ್ಲಿ 2,323 ಕೋವಿಡ್ 19 ಸೋಂಕು ಪ್ರಕರಣ ದೃಢ, 25 ಮಂದಿ ಸಾವು
ಜ್ಞಾನವಾಪಿ ಶಿವಲಿಂಗದ ಕುರಿತು ಫೇಸ್ಬುಕ್ ಪೋಸ್ಟ್ ಮಾಡಿದ ದೆಹಲಿ ಪ್ರಾಧ್ಯಾಪಕರ ಬಂಧನ
ಭಾರತದಲ್ಲಿದ್ದುಕೊಂಡು ತಿಂಗಳಿಗೆ 25 ಸಾವಿರ ರೂ. ಆದಾಯವಿದ್ದರೆ ಅಗ್ರರು!
ಎಲ್ಲ ಪ್ರಾದೇಶಿಕ ಭಾಷೆಗಳೂ ಪೂಜನೀಯ: ಪ್ರಧಾನಿ ಮೋದಿ