ಹೊಸ ವರ್ಷಕ್ಕೆ ಶಾಕ್ ನೀಡಿದ ರೈಲ್ವೇ: ಪ್ರಯಾಣಿಕರಿಗೆ ಏರಿಕೆ ಬಿಸಿ

Team Udayavani, Jan 1, 2020, 9:27 AM IST

ಹೊಸದಿಲ್ಲಿ: ದೇಶದಲ್ಲಿ ಹೊಸ ವರ್ಷದ ಸಂಭ್ರಮ ಮನೆಮಾಡಿದೆ. ಆದರೆ ಇದೇ ಸಮಯದಲ್ಲಿ ರೈಲ್ವೇ ಇಲಾಖೆ ಶಾಕ್ ನೀಡಿದೆ. ಈಗಾಗಲೇ ರೈಲು ದರ ಹೆಚ್ಚಳವಾಗಿದ್ದು, ಪರಿಷ್ಕೃತ ದರ ಇಂದಿನಿಂದ ಜಾರಿಗೆ ಗರಲಿದೆ.

ಸಾಮಾನ್ಯ ನಾನ್ ಎಸಿ, ಶತಾಬ್ದಿ, ರಾಜಧಾನಿ, ತುರಂತ್ ರೈಲುಗಳಿಗೆ ಈ ದರ ಹೆಚ್ಚಳ ಅನ್ವಯವಾಗಲಿದೆ. ಆದರೆ ಉಪನಗರ ರೈಲು ಪ್ರಯಾಣ ದರದಲ್ಲಿ ಬದಲಾವಣೆ ಮಾಡಲಾಗಿಲ್ಲ. ಹಾಗೆಯೇ ಈಗಾಗಲೇ ಕಾಯ್ದಿರಿಸಿರುವ ಟಿಕೆಟ್ ಗಳಿಗೆ ದರ ಹೆಚ್ಚಳವಾಗುವುದಿಲ್ಲ.

ಸಾಮಾನ್ಯ ಅರೆ ಹವಾನಿಂತ್ರಿತ ರೈಲು ಪ್ರಯಾಣದ ದರ ಪ್ರತೀ ಕಿ.ಮೀಗೆ ಒಂದು ಪೈಸೆ , ಮೇಲ್/ ಎಕ್ಸ್ ಪ್ರೆಸ್ ನಾನ್ ಎಸಿ ರೈಲು ಪ್ರಯಾಣದ ದರ ಪ್ರತಿ ಕಿ.ಮೀ ಗೆ 2 ಪೈಸೆ ಮತ್ತು ಎಸಿ ರೈಲುಗಳ ಪ್ರಯಾಣ ದರ ಕಿ.ಮೀಗೆ 4 ಪೈಸೆಗಳಷ್ಟು ಜಾಸ್ತಿ ಮಾಡಲಾಗಿದೆ.

2014ರಲ್ಲಿ ರೈಲು ಪ್ರಯಾಣ ದರವನ್ನು ಹೆಚ್ಚಿಸಲಾಗಿತ್ತು. ಪ್ರಯಾಣ ದರಗಳನ್ನು ಶೇ14.2 ಮತ್ತು ಸರಕು ಸಾಗಾಣಿಕೆ ದರಗಳನ್ನು ಶೇ6.5ರಷ್ಟು ಹೆಚ್ಚು ಮಾಡಲಾಗಿತ್ತು. ಇದೀಗ ಐದು ವರ್ಷದ ನಂತರ ಬಳಿಕ ದರ ಹೆಚ್ಚಳ ಮಾಡಲಾಗಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ