ಟ್ರಿಲಿಯನ್‌ ಟಾರ್ಗೆಟ್‌


Team Udayavani, Jul 6, 2019, 3:09 AM IST

trilion

ದೇಶದ ಅರ್ಥ ವ್ಯವಸ್ಥೆಯನ್ನು 2024-25ನೇ ವಿತ್ತೀಯ ವರ್ಷದ ವೇಳೆ ಐದು ಶತಕೋಟಿ ಡಾಲರ್‌ಗೆ ಏರಿಕೆ ಮಾಡುವುದರ ಬಗ್ಗೆ ಮೋದಿ ಸರ್ಕಾರ ಗುರಿ ಹೊಂದಿದೆ. ಅದಕ್ಕಾಗಿ ಮಹತ್ವದ ಸುಧಾರಣಾ ಕ್ರಮಗಳನ್ನು ಹೊಂದಬೇಕಾಗಿದೆ ಎಂದು ಸರ್ಕಾರ ಪ್ರತಿಪಾದಿಸಿದೆ. ಆದರೆ ಪ್ರಸಕ್ತ ವಿತ್ತೀಯ ವರ್ಷದಲ್ಲಿಯೇ ಮೂರು ಶತಕೋಟಿ ಡಾಲರ್‌ (3 ಟ್ರಿಲಿಯನ್‌)ವ್ಯವಸ್ಥೆಯ ಅರ್ಥ ವ್ಯವಸ್ಥೆಯಾಗಿ ಹೊರ ಹೊಮ್ಮಲಿದೆ.

ಐದು ವರ್ಷಗಳ ಹಿಂದೆ ದೇಶದ ಅರ್ಥ ವ್ಯವಸ್ಥೆ 1.85 ಶತಕೋಟಿ ಡಾಲರ್‌ ಆಗಿ, 11ನೇ ಸ್ಥಾನ ದಲ್ಲಿತ್ತು. ಅದು ಈಗ 2.7 ಶತಕೋಟಿ ಡಾಲರ್‌ಗೆ ಏರಿಕೆಯಾಗಿ, ವಿಶ್ವದ ಆರನೇ ಅತಿದೊಡ್ಡ ಅರ್ಥ ವ್ಯವಸ್ಥೆಯಾಗಿದೆ. ಇದರ ಜತೆಗೆ ಈ ಅವಧಿಯಲ್ಲಿ ದೇಶದ ಅರ್ಥ ವ್ಯವಸ್ಥೆ ಭಾರಿ ಪ್ರಮಾಣದ ಸುಧಾರ ಣೆಗಳನ್ನು ಕಾಣುತ್ತಾ ಬಂದಿದೆ. 2024-25ನೇ ಸಾಲಿನಲ್ಲಿ ಐದು ಶತಕೋಟಿ ಡಾಲರ್‌ ಮೌಲ್ಯದ ಅರ್ಥ ವ್ಯವಸ್ಥೆಯನ್ನು ಹೊಂದಬೇಕಾದರೆ ಬಹು ಹಂತದ ಅರ್ಥ ವ್ಯವಸ್ಥೆಯ ಸುಧಾರಣೆಗಳು ಆಗಬೇಕಾಗಿವೆ.

ಮುದ್ರಾ ಯೋಜನೆಯ ಮೂಲಕ ಜನಸಾಮಾನ್ಯರಿಗೆ ವಿವಿಧ ರೀತಿಯ ಉದ್ದಿಮೆ ಗಳನ್ನು ಕೈಗೊಳ್ಳಲು ಅವಕಾಶ ಮಾಡಿಕೊಡಲಾಗಿದೆ. ಪರೋಕ್ಷ ತೆರಿಗೆ ಸುಧಾರಣೆ, ಕಪ್ಪುಹಣ ವಿರುದ್ಧದ ಸಮರ, ರಿಯಲ್‌ ಎಸ್ಟೇಟ್‌ ಕ್ಷೇತ್ರದಲ್ಲಿ ಸುಧಾರಣೆ ಹೀಗೆ ಹಲವು ಕ್ಷೇತ್ರಗಳಲ್ಲಿ ಪರಿವರ್ತನೆ ತರಲಾಗಿದೆ. ಜನರ ಖರೀದಿ ಸಾಮರ್ಥ್ಯ ವಿಚಾರ ಪರಿಶೀಲಿಸುವುದಿದ್ದರೆ, ದೇಶದ ಈಗ ಮೂರನೇ ಸ್ಥಾನದಲ್ಲಿದೆ. ಈ ಸಾಲಿನಲ್ಲಿ ಚೀನಾ ಮೊದಲ ಸ್ಥಾನದಲ್ಲಿದ್ದರೆ, ಅಮೆರಿಕ ದ್ವಿತೀಯ ಸ್ಥಾನದಲ್ಲಿದೆ.

ಸುಧಾರಣೆಯಾಗಬೇಕಾಗಿದೆ: ಮುಂದಿನ ಐದು ವರ್ಷಗಳಲ್ಲಿ ಐದು ಶತಕೋಟಿ ಡಾಲರ್‌ ಮೌಲ್ಯದ ಅರ್ಥ ವ್ಯವಸ್ಥೆಯಾಗಬೇಕಾಗಿದ್ದರೆ, ಸಾಮಾನ್ಯ ಜನರ ಜೀವನ ಕ್ರಮದಲ್ಲಿ ಸುಧಾರಣೆಯಾಗಬೇಕು. ಪ್ರತಿಯೊಂದು ಕುಟುಂಬದ ಅಡುಗೆ ಮನೆ ಹೊಗೆ ರಹಿತವಾಗಿರಬೇಕು, ಮನೆಗೆ ವಿದ್ಯುತ್‌ ಸಂಪರ್ಕ ಸಿಗಬೇಕು, ಮಹಿಳೆಯರ ಗೌರವ, ಔನ್ನತ್ಯ ಹೆಚ್ಚುವಂತಾಗಲು ಶೌಚಾಲಯ ಇರಬೇಕು. ಈ ನಿಟ್ಟಿನಲ್ಲಿ ಸರ್ಕಾರ ಹಲವು ಕ್ರಮಗಳನ್ನು ಘೋಷಣೆ ಮಾಡಿದೆ. ಈ ನಿಟ್ಟಿನಲ್ಲಿ ಮುಂದುವರಿಯಲು ಮೂಲ ಸೌಕರ್ಯ, ಉದ್ಯೋಗ ಕ್ಷೇತ್ರ, ಸಣ್ಣ ಮತ್ತು ಮಧ್ಯಮ ಉದ್ಯೋಗ ಕ್ಷೇತ್ರದಲ್ಲಿ ಹಚ್ಚಿನ ಮೊತ್ತದ ಬಂಡವಾಳ ಅಗತ್ಯವಿದೆ.

55 ವರ್ಷ ಬೇಕಾಯಿತು: ಒಂದು ಶತಕೋಟಿ ಡಾಲರ್‌ ಅರ್ಥ ವ್ಯವಸ್ಥೆಯಾಗಿ ಹೊರಹೊಮ್ಮಲು ದೇಶಕ್ಕೆ 55 ವರ್ಷ ಬೇಕಾಯಿತು. ದೇಶದ ಜನರಲ್ಲಿ ಆಶೆ, ವಿಶ್ವಾಸ ಮತ್ತು ಆಕಾಂಕ್ಷೆ ತುಂಬಿರುವಾಗ ಅದಕ್ಕೆ ಮತ್ತೂ ಒಂದು ಟ್ರಿಲಿಯನ್‌ ಡಾಲರ್‌ ಮೌಲ್ಯ ಸೇರಿಸಲಾಗಿದೆ. ಹೀಗಾಗಿ, ಈ ವರ್ಷವೇ 3 ಶತಕೋಟಿ ಡಾಲರ್‌ ಮೌಲ್ಯದ ಅರ್ಥ ವ್ಯವಸ್ಥೆ ಎಂಬ ಗುರಿ ಸಾಧಿಸಲು ಸಾಧ್ಯವಿದೆ ಎಂದಿದೆ ಸರ್ಕಾರ.

ಕಠಿಣ ದುಡಿಮೆ: ದೇಶದ ಜನರ ಕಠಿಣ ದುಡಿಮೆಯಿಂದ ಐದು ಶತಕೋಟಿ ಡಾಲರ್‌ ಮೌಲ್ಯದ ಗುರಿ ಸಾಧಿಸುವ ನಿರೀಕ್ಷೆ ಇದೆ. ಏಕೆಂದರೆ ಅವರಿಗೆ ಜೀವನದಲ್ಲಿ ಅಭಿವೃದ್ಧಿಯಾಗಬೇಕು ಎಂಬ ಹಂಬಲವೂ ಇದೆ. ಅದಕ್ಕೆ ಪೂರಕವಾಗಿ ದೇಶದ ಸಂಸತ್‌ನಲ್ಲಿ ಉತ್ತಮ ನಾಯಕತ್ವವೂ ಇರುವುದರಿಂದ ಅದಕ್ಕೆ ಪೂರಕವಾಗಿ ಇರಲಿದೆ.

ಕೊಡುಗೆ ನೀಡಿವೆ: ಖಾಸಗಿ ವಲಯದಲ್ಲಿರುವ ಸಣ್ಣ, ಮಧ್ಯಮ ಅಥವಾ ಭಾರಿ ಉದ್ದಿಮೆಗಳು ಅರ್ಥ ವ್ಯವಸ್ಥೆಯ ಬೆಳವಣಿಗೆಯಲ್ಲಿ ತಮ್ಮದೇ ಆದ ಕೊಡುಗೆ ನೀಡಿವೆ. ಅಭಿವೃದ್ಧಿ ಮತ್ತು ಬೆಳವಣಿಗೆ ಎನ್ನುವುದು ದೇಶಕ್ಕೆ ಸ್ವಾತಂತ್ರ್ಯ ಬರುವುದಕ್ಕೆ ಮೊದಲು ಮತ್ತು ನಂತರದ ವರ್ಷಗಳಲ್ಲಿ ಅವಿಭಾಜ್ಯ ಅಂಗವೇ ಆಗಿದೆ. ಹೀಗಾಗಿ ಸ್ವದೇಶಿ ಎನ್ನುವ ನೀತಿ ಕೈಗಾರಿಕೆಗಳಲ್ಲಿ ಹಾಸುಹೊಕ್ಕಾಗಿದೆ. ಜತೆಗೆ ಮೇಕ್‌ ಇನ್‌ ಇಂಡಿಯಾ ಎಂಬ ಸರ್ಕಾರದ ಆಶಯವನ್ನು ಅವುಗಳು ಅರ್ಥೈಸಿಕೊಂಡಿವೆ. ನೀತಿ ಗ್ರಹಣ, ಲೈಸನ್ಸ್‌ ರಾಜ್‌, ನಿಯಂತ್ರಣಾತ್ಮಕ ದಿನಗಳು ಕಳೆದಿವೆ. ದೇಶದ ಕೈಗಾರಿಕೋದ್ಯಮವೇ ಈಗ ಉದ್ಯೋಗ ಸೃಷ್ಟಿಯ ಪ್ರಧಾನ ಕ್ಷೇತ್ರವಾಗಿದೆ. ಹೀಗಾಗಿ ಅವುಗಳ ಕೊಡುಗೆ ದೇಶದ ಅರ್ಥ ವ್ಯವಸ್ಥೆ ಮತ್ತು ಕೈಗಾರಿಕೋದ್ಯಮಕ್ಕೆ ಭಾರಿ ಮಹತ್ವದ್ದಾಗಿದೆ.

ಆರ್‌ಬಿಐ ನಿಯಂತ್ರಣಕ್ಕೆ: ಗೃಹ ನಿರ್ಮಾಣ ಕ್ಷೇತ್ರದಲ್ಲಿನ ಹಣಕಾಸು ಹರಿವಿನ ಪ್ರಮಾಣವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮುಂದುವರಿಸಲು ಮಹತ್ವದ ಕ್ರಮ ಘೋಷಿಸಲಾಗಿದೆ. ನ್ಯಾಷನಲ್‌ ಹೌಸಿಂಗ್‌ ಬ್ಯಾಂಕ್‌ (ಎನ್‌ಎಚ್‌ಬಿ) ಈ ಕ್ಷೇತ್ರಕ್ಕೆ ಹಣಕಾಸು ನೀಡುತ್ತಿತ್ತು ಮತ್ತು ಈ ಕ್ಷೇತ್ರ ಹಣಕಾಸು ಪ್ರಕ್ರಿಯೆ ನಿಯಂತ್ರಿಸುತ್ತಿತ್ತು. ಇನ್ನು ಮುಂದೆ ಗೃಹ ನಿರ್ಮಾಣ ಕ್ಷೇತ್ರದ ವಿತ್ತೀಯ ನಿಯಂತ್ರಣವನ್ನು ಆರ್‌ಬಿಐಗೆ ವಹಿಸಿಕೊಳ್ಳಲು ನಿರ್ಧರಿಸಲಾಗಿದೆ.

ಟಾಪ್ ನ್ಯೂಸ್

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

voter

VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್‌

1-wqeqewqe

Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು

1-qweqewqe

IPL;ಮುಂಬೈ ಇಂಡಿಯನ್ಸ್‌ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

voter

VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್‌

1-wqeqewqe

Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

voter

VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.