ಪರೀಕ್ಷೆ ವೇಳೆ ಸಿಡಿದ ಸ್ಫೋಟಕ; ಇಬ್ಬರ ಸಾವು; ಮೂವರಿಗೆ ಗಾಯ
Team Udayavani, Sep 14, 2018, 6:03 PM IST
ಪುದುಕೋಟ್ಟೈ : ಪಾದೇಕಲ್ಲು ಸ್ಫೋಟಿಸುವ ಸಿಡಿಮದ್ದು ಆಕಸ್ಮಿಕವಾಗಿ ಪರೀಕ್ಷೆಯ ವೇಳೆ ಸ್ಫೋಟಗೊಂಡ ಕಾರಣ ಇಬ್ಬರು ಮೃತಪಟ್ಟು ಇತರ ಮೂವರು ಗಾಯಗೊಂಡರೆಂದು ಪೊಲೀಸರು ತಿಳಿಸಿದ್ದಾರೆ.
ಸೆ.12ರಂದು ಸಂಜೆ ಕ್ವಾರಿ ಸುಪರ್ವೈಸರ್ ಸ್ಫೋಟಕಕ್ಕೆ ಟೈಮರ್ ಸೆಟ್ ಮಾಡಿ ಇಟ್ಟಿದ್ದ. ಆದರೆ ಅದೇ ವೇಳೆ ಭಾರೀ ಮಳೆ ಸುರಿಯಿತು. ಹಾಗಾಗಿ ಅದು ಸ್ಫೋಟ ಗೊಂಡಿರಲಿಲ್ಲ. ಪುನಃ ಆತ ಸಂಜೆ ಬಂದು ಸ್ಫೋಟಕಗಳನ್ನು ಪರೀಕ್ಷಿಸುತ್ತಿದ್ದಂತೆಯೇ ಅದು ಅಛಾನಕ್ ಸ್ಫೋಟಗೊಂಡಿತು.
ಪರಿಣಾಮವಾಗಿ ಸುಪರ್ವೈಸರ್ ಸ್ಥಳದಲ್ಲೇ ಮೃತಪಟ್ಟ. ಆತನೊಂದಿಗೆ ಇತರ ನಾಲ್ವರು ಗಂಭೀರವಾಗಿ ಗಾಯಗೊಂಡರು. ಇವರ ಪೈಕಿ ಒಬ್ಬ ಗಾಯಾಳು ಸರಕಾರಿ ಆಸ್ಪತ್ರೆಯಲ್ಲಿ ತೀರಿಕೊಂಡ.
ಇದೇ ವೇಳೆ ಸುಪರ್ವೈಸರ್ ನ ತಾಯಿ ಗೆ ಮಗನ ಸಾವಿನ ಸುದ್ದಿ ತಿಳಿದು ಹೃದಯಾಘಾತವಾಗಿ ಆಕೆ ಕೂಡ ಆಸ್ಪತ್ರೆಯಲ್ಲಿ ಮೃತಪಟ್ಟಳು ಎಂದು ಪೊಲೀಸರು ತಿಳಿಸಿದ್ದಾರೆ.