ದಿಲ್ಲಿ ಹೈಕೋರ್ಟ್ಗೆ ವಾದ್ರಾ ಮೇಲ್ಮನವಿ
Team Udayavani, Mar 21, 2019, 12:30 AM IST
ಹೊಸದಿಲ್ಲಿ: ಲಂಡನ್ನಲ್ಲಿ ಅಕ್ರಮ ಆಸ್ತಿ ಹೊಂದಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ದಾಖಲಿಸಿರುವ ಪ್ರಕರಣ ರದ್ದುಪಡಿಸುವಂತೆ ಕಾಂಗ್ರೆಸ್ ಕಾರ್ಯ ದರ್ಶಿ ಪ್ರಿಯಾಂಕಾ ಗಾಂಧಿ ಪತಿ ರಾಬರ್ಟ್ ವಾದ್ರಾ ದಿಲ್ಲಿ ಹೈಕೋರ್ಟ್ ಮೊರೆ ಹೋಗಿದ್ದಾರೆ.
2002ರ ಹಣ ದುರ್ಬಳಕೆ ಕಾಯ್ದೆಯ ಹಲವು ನಿಬಂಧನೆಗಳು ಅಸಾಂವಿಧಾನಿಕ ಎಂದು ಘೋಷಿಸುವಂತೆಯೂ ಆಗ್ರಹಿಸಿದ್ದಾರೆ. ವಾದ್ರಾ ಅಕ್ರಮಗಳ ವಿಚಾರಣೆ ಮಾರ್ಚ್ 25 ಕ್ಕೆ ನಿಗದಿಯಾಗಿದೆ. ಲಂಡನ್ನ 12 ಬ್ರಿಯಾನ್ಸ್ಟನ್ ಸ್ಕ್ವೇರ್ನಲ್ಲಿ 170 ಕೋಟಿ ರೂ. ಮೌಲ್ಯದ ಸ್ವತ್ತನ್ನು ವಾದ್ರಾ ಅಕ್ರಮವಾಗಿ ಹೊಂದಿದ್ದಾರೆ ಎಂದು ಜಾರಿ ನಿರ್ದೇಶನಾಲಯವು ಆರೋಪಿಸಿದೆ.