ವಾಯು ಮಾರ್ಗ ನಿಯಮ ಉಲ್ಲಂಘನೆ: ಜಾರ್ಜಿಯಾ ವಿಮಾನವನ್ನು ಬಲವಂತವಾಗಿ ಇಳಿಸಿದ IAF

Team Udayavani, May 10, 2019, 7:05 PM IST

Georgian-plane-730

ಜೈಪುರ : ಪಾಕಿಸ್ಥಾನದ ವಾಯು ಪ್ರದೇಶದಿಂದ ಬಂದ, ಭಾರೀ ಸರಕು ತುಂಬಿದ ಜಾರ್ಜಿಯಾ ವಿಮಾನವನ್ನು ವಾಯು ಮಾರ್ಗ ನಿಯಮಗಳ ಉಲ್ಲಂಘನೆಯ ಕಾರಣಕ್ಕೆ ಭಾರತೀಯ ವಾಯು ಪಡೆಯ (ಐಎಎಫ್) ಫೈಟರ್‌ ಜೆಟ್‌ಗಳು ರಾಜಸ್ಥಾನದ ಜೈಪುರ ವಿಮಾನ ನಿಲ್ದಾಣದಲ್ಲಿ ಬಲವಂತವಾಗಿ ಇಳಿಸಿದವೆಂದು ವರದಿಗಳು ತಿಳಿಸಿವೆ.

ಪಾಕಿಸ್ಥಾನದ ಕರಾಚಿಯಿಂದ ದಿಲ್ಲಿಗೆ ಹೋಗಲಿದ್ದ ಆಂತೋನೋವ್‌ ಎಎನ್‌-12 ಜಾರ್ಜಿಯಾ ವಿಮಾನ ತನ್ನ ನಿಗದಿತ ಹಾರಾಟ ಮಾರ್ಗದಿಂದ ವಿಮುಖವಾಗಿ ಉತ್ತರ ಗುಜರಾತ್‌ನ ಅನಿರ್ಧರಿತ ಪ್ರದೇಶದಿಂದ ಭಾರತೀಯ ವಾಯು ವಲಯವನ್ನು ಪ್ರವೇಶಿಸಿತು ಎಂದು ವರದಿಗಳು ತಿಳಿಸಿವೆ.

ದೇಶದ ವಾಯು ಗಡಿಯಲ್ಲಿ ಅತ್ಯಂತ ಕಟ್ಟೆಚ್ಚರದಿಂದಿದ್ದ ಭಾರತೀಯ ವಾಯು ಪಡೆಯ ಫೈಟರ್‌ ಜೆಟ್‌ ಗಳು ಆ ಸಂದರ್ಭದಲ್ಲಿ ತತ್‌ಕ್ಷಣ ಕಾರ್ಯೋನ್ಮುಖವಾಗಿ ಜಾರ್ಜಿಯಾ ಸರಕು ಸಾಗಣೆ ವಿಮಾನವನ್ನು ಜೈಪುರ ವಿಮಾನ ನಿಲ್ದಾಣದಲ್ಲಿ ಬಲವಂತವಾಗಿ ಇಳಿಸಿದವು.

ಜಾರ್ಜಿಯಾ ಸರಕು ವಿಮಾನ ತನ್ನ ವೇಳಾ ಪಟ್ಟಿಗೆ ಅನುಗುಣವಾಗಿ ಹಾರಾಟ ಕೈಗೊಂಡಿತ್ತಾದರೂ ಅದರ ವಾಯು ಮಾರ್ಗ ತಪ್ಪಾಗಿತ್ತು. ಇದೀಗ ಜಾರ್ಜಿಯಾ ವಿಮಾನದ ಪೈಲಟ್‌ನನ್ನು ಪ್ರಶ್ನಿಸಲಾಗುತ್ತಿದ್ದು ವಿಮಾನವನ್ನು ಸಂಪೂರ್ಣವಾಗಿ ಸ್ಕ್ಯಾನ್‌ ಮಾಡಲಾಗುತ್ತಿದೆ. ಪೊಲೀಸರು ವಿಮಾನ ನಿಲ್ದಾಣಕ್ಕೆ ಧಾವಿಸಿ ಬಂದಿದ್ದು ಸಿಐಎಸ್‌ಎಫ್ ಅಧಿಕಾರಿಗಳು ಜಾರ್ಜಿಯಾ ವಿಮಾನದ ಪೈಲಟ್‌ ನನ್ನು ಪ್ರಶ್ನಿಸುತ್ತಿದ್ದಾರೆ.

ಜಾರ್ಜಿಯಾ ವಿಮಾನವನ್ನು ಜೈಪುರದಲ್ಲಿ ಬಲವಂತವಾಗಿ ಇಳಿಸುವಲ್ಲಿ ಎರಡು ಸುಖೋಯ್‌ ಫೈಟರ್‌ಗಳು ಬೆಂಗಾವಲಿಗೆ ಇದ್ದವು.

ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ.

ಟಾಪ್ ನ್ಯೂಸ್

sakath movie

‘ಸಖತ್’ ಚಿತ್ರ ವಿಮರ್ಶೆ: ಜಾಲಿ ರೈಡ್‌ನಲ್ಲಿ ಸಖತ್‌ ಥ್ರಿಲ್‌!

ಕೋವಿಡ್ ರೂಪಾಂತರಿ ಆತಂಕ: ಪ್ರಧಾನಿ ಮೋದಿಯಿಂದ ಮಹತ್ವದ ಸಭೆ

ಕೋವಿಡ್ ರೂಪಾಂತರಿ ಆತಂಕ: ಪ್ರಧಾನಿ ಮೋದಿಯಿಂದ ಮಹತ್ವದ ಸಭೆ

ನಥಿಂಗ್‍ ನಲ್ಲಿ ಯುವರಾಜ್‍ ಸಿಂಗ್‍, ಕರಣ್‍ ಜೋಹರ್ ಹೂಡಿಕೆ

ನಥಿಂಗ್‍ ನಲ್ಲಿ ಯುವರಾಜ್‍ ಸಿಂಗ್‍, ಕರಣ್‍ ಜೋಹರ್ ಹೂಡಿಕೆ

ಕಾರು ಶೋರೂಂ ಒಳಗೆ ನುಗ್ಗಿದ ಕಾಡು ಹಂದಿ!

ಮಂಗಳೂರು:ಕಾರು ಶೋರೂಂ ಒಳಗೆ ನುಗ್ಗಿದ ಕಾಡು ಹಂದಿ! ವ್ಯಕ್ತಿಗೆ ತಿವಿಯಲು ಯತ್ನ, ವಿಡಿಯೋ ವೈರಲ್

horocospe

ಈ ರಾಶಿಯವರಿಗಿಂದು ಉದ್ಯೋಗ ವ್ಯವಹಾರಗಳಲ್ಲಿ ನಿರೀಕ್ಷೆಗೂ ಮೀರಿದ ಅಭಿವೃದ್ಧಿ

ತಮಿಳುನಾಡಿನಲ್ಲಿ ನ. 30ರ ವರೆಗೆ ಮಳೆ

ತಮಿಳುನಾಡಿನಲ್ಲಿ ನ. 30ರ ವರೆಗೆ ಮಳೆ

ಸರಕಾರಿ ಹಾಸ್ಟೆಲ್‌ಗೆ ಅಧಿಕಾರಿಗಳೇ ಮಾರ್ಗದರ್ಶಕರು

ಸರಕಾರಿ ಹಾಸ್ಟೆಲ್‌ಗೆ ಅಧಿಕಾರಿಗಳೇ ಮಾರ್ಗದರ್ಶಕರುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೋವಿಡ್ ರೂಪಾಂತರಿ ಆತಂಕ: ಪ್ರಧಾನಿ ಮೋದಿಯಿಂದ ಮಹತ್ವದ ಸಭೆ

ಕೋವಿಡ್ ರೂಪಾಂತರಿ ಆತಂಕ: ಪ್ರಧಾನಿ ಮೋದಿಯಿಂದ ಮಹತ್ವದ ಸಭೆ

ತಮಿಳುನಾಡಿನಲ್ಲಿ ನ. 30ರ ವರೆಗೆ ಮಳೆ

ತಮಿಳುನಾಡಿನಲ್ಲಿ ನ. 30ರ ವರೆಗೆ ಮಳೆ

ಬಿಹಾರವೇ ಬಡ ರಾಜ್ಯ! ನೀತಿ ಆಯೋಗದ ಬಡತನ ಸೂಚ್ಯಂಕ ವರದಿ ಬಿಡುಗಡೆ

ಬಿಹಾರವೇ ಬಡ ರಾಜ್ಯ! ನೀತಿ ಆಯೋಗದ ಬಡತನ ಸೂಚ್ಯಂಕ ವರದಿ ಬಿಡುಗಡೆ

ಪ್ರಗತಿಗೆ ವಸಾಹತುಶಾಹಿ ಅಡ್ಡಿ: ಪ್ರಧಾನಿ ಮೋದಿ

ಪ್ರಗತಿಗೆ ವಸಾಹತುಶಾಹಿ ಅಡ್ಡಿ: ಪ್ರಧಾನಿ ಮೋದಿ

ಖಾಸಗಿ ಕ್ರಯೋಜನಿಕ್‌ ಪ್ರಯೋಗ ಯಶಸ್ವಿ

ಖಾಸಗಿ ಕ್ರಯೋಜನಿಕ್‌ ಪ್ರಯೋಗ ಯಶಸ್ವಿ

MUST WATCH

udayavani youtube

ಯುವಕ ಮತ್ತು ಮಹಿಳೆಯನ್ನ ವಿದ್ಯುತ್ ಕಂಬಕ್ಕೆ ಕಟ್ಟಿ ಮನ ಬಂದಂತೆ ಹಲ್ಲೆ

udayavani youtube

ಇಡೀ ವರ್ಷದ ಪಾಠ ಕೇವಲ 199 ರೂಪಾಯಿಗಳಿಗೆ !

udayavani youtube

ಕೃಷಿ ಬಿಕ್ಕಟ್ಟನ್ನು ಹೇಗೆ ಎದುರಿಸಬೇಕು ?

udayavani youtube

ಕಂಗನಾಗೆ ದೆಹಲಿ ವಿಧಾನಸಭೆ ಸಮಿತಿ ಸಮನ್ಸ್‌

udayavani youtube

ಮಾಜಿ ಶಾಸಕರ ಕಾಂಪ್ಲೆಕ್ಸ್ ನಲ್ಲಿ ಲಕ್ಷಾಂತರ ರೂ. ಕಳ್ಳತನ: ಸಿಸಿ ಟಿವಿಯಲ್ಲಿ ಸೆರೆ

ಹೊಸ ಸೇರ್ಪಡೆ

sakath movie

‘ಸಖತ್’ ಚಿತ್ರ ವಿಮರ್ಶೆ: ಜಾಲಿ ರೈಡ್‌ನಲ್ಲಿ ಸಖತ್‌ ಥ್ರಿಲ್‌!

1maraton

ಮೀಸಲು ಅರಣ್ಯದಲ್ಲಿ ಮ್ಯಾರಥಾನ್ ಗೆ ಪರಿಸರ ಪ್ರಿಯರ ವಿರೋಧ

ಕೋವಿಡ್ ರೂಪಾಂತರಿ ಆತಂಕ: ಪ್ರಧಾನಿ ಮೋದಿಯಿಂದ ಮಹತ್ವದ ಸಭೆ

ಕೋವಿಡ್ ರೂಪಾಂತರಿ ಆತಂಕ: ಪ್ರಧಾನಿ ಮೋದಿಯಿಂದ ಮಹತ್ವದ ಸಭೆ

ನಥಿಂಗ್‍ ನಲ್ಲಿ ಯುವರಾಜ್‍ ಸಿಂಗ್‍, ಕರಣ್‍ ಜೋಹರ್ ಹೂಡಿಕೆ

ನಥಿಂಗ್‍ ನಲ್ಲಿ ಯುವರಾಜ್‍ ಸಿಂಗ್‍, ಕರಣ್‍ ಜೋಹರ್ ಹೂಡಿಕೆ

ಕಾರು ಶೋರೂಂ ಒಳಗೆ ನುಗ್ಗಿದ ಕಾಡು ಹಂದಿ!

ಮಂಗಳೂರು:ಕಾರು ಶೋರೂಂ ಒಳಗೆ ನುಗ್ಗಿದ ಕಾಡು ಹಂದಿ! ವ್ಯಕ್ತಿಗೆ ತಿವಿಯಲು ಯತ್ನ, ವಿಡಿಯೋ ವೈರಲ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.