
ರಸ್ತೆ ಹೊಂಡದ ಮಧ್ಯ ವೆಡ್ಡಿಂಗ್ ಫೋಟೋ ಶೂಟ್ ಮಾಡಿಸಿದ ವಧು!: ವಿಡಿಯೋ ವೈರಲ್
Team Udayavani, Sep 21, 2022, 12:31 PM IST

ಕೇರಳ: ಮದುವೆಗೆ ಸುಂದರವಾದ ಫೋಟೋಶೂಟ್ ಮಾಡಿಸಬೇಕೆನ್ನುವುದು ಕೆಲವರ ಕನಸಾಗಿರುತ್ತದೆ. ಎಷ್ಟೋ ಮಂದಿಗೆ ದುಬಾರಿ ಖರ್ಚು ಮಾಡಿ ವೆಡ್ಡಿಂಗ್ ಶೂಟ್ ಮಾಡಿಸುವ ಆಸೆಯಿರುತ್ತದೆ.
ಪ್ರೀ ವೆಡ್ಡಿಂಗ್, ಪೋಸ್ಟ್ ವೆಡ್ಡಿಂಗ್ ಹೀಗೆ ವಿವಿಧ ಬಗೆಯ ಫೋಟೋ ಶೂಟ್ ಗಳನ್ನು ಮಾಡಿಸುವುದು ಈಗ ಟ್ರೆಂಡಿಂಗ್. ಸಾಮಾನ್ಯವಾಗಿ ಸುಂದರವಾದ ತಾಣಗಳಲ್ಲಿ ಫೋಟೋ ಶೂಟ್ ಮಾಡಿಸುತ್ತಾರೆ. ಆದರೆ ಇಲ್ಲೊಬ್ಬಳು ನವ ವಿವಾಹಿತೆ ವಿಭಿನ್ನ ರೀತಿಯಲ್ಲಿ ಫೋಟೋ ಶೂಟ್ ಮಾಡಿಸಿ ವೈರಲ್ ಆಗಿದ್ದಾಳೆ.
ಕೇರಳದ ನವ ವಧುವೊಬ್ಬಳು ಕೆಂಪು ಸೀರೆಯುಟ್ಟು, ಆಭರಣಗಳನ್ನು ತೊಟ್ಟು, ಅಲಂಕಾರ ಮಾಡಿಕೊಂಡು ಸುಂದರವಾಗಿ ಫೋಟೋ ಶೂಟ್ ಮಾಡಿಸಿದ್ದಾಳೆ. ನವ ವಧು ಗುಂಡಿ ಬಿದ್ದು, ಕೆಸರು ನೀರು ತುಂಬಿಕೊಂಡಿರುವ ರಸ್ತೆಯಲ್ಲಿ ಫೋಟೋ ಶೂಟ್ ಮಾಡಿಸಿಕೊಂಡಿದ್ದಾಳೆ. ವಿವಿಧ ರೀತಿಯ ಪೋಸ್ ಕೊಟ್ಟು, ನಗು ಮುಖದಲ್ಲಿ ಫೋಟೋಗಳು ಸೆರೆಯಾಗಿವೆ. ಮದುವೆಯ ಬಟ್ಟೆಯಲ್ಲಿ ಹೊಂಡ ಬಿದ್ದ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿರುವ ವಿಡಿಯೋ, ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿವೆ.
ಆ್ಯರೋ ವೆಡ್ಡಿಂಗ್ ಫೋಟೋ ಕಂಪೆನಿ ಇನ್ಸ್ಟಾಗ್ರಾಮ್ ನಲ್ಲಿ ಸೆ.11 ರಂದು ಈ ಫೋಟೋ ಶೂಟ್ ನ ವಿಡಿಯೋ ಹಂಚಿಕೊಂಡು, ರಸ್ತೆ ಮಧ್ಯದಲ್ಲಿ ವಧುವಿನ ಫೋಟೋಶೂಟ್ ಎಂದು ಕ್ಯಾಪ್ಷನ್ ಬರೆದು ವಿಡಿಯೋ ಶೇರ್ ಮಾಡಿದ್ದು ಇದುವರೆಗೆ 4.3 ಮಿಲಿಯನ್ ವೀಕ್ಷಣೆಯಾಗಿದೆ. 39 ಸಾವಿರಕ್ಕೂ ಅಧಿಕ ಮಂದಿ ಲೈಕ್ ಮಾಡಿ,ರಸ್ತೆ ಅವ್ಯವಸ್ಥೆಯ ಬಗ್ಗೆ ಇದು ರಸ್ತೆಯಲ್ಲಿ ಶೂಟ್ ಆದ ಫೋಟೋವಲ್ಲ, ಹೊಂಡದಲ್ಲಿ ಶೂಟ್ ಆದ ಫೋಟೋವೆಂದು ಹಲವು ಮಂದಿ ವ್ಯಂಗ್ಯವಾಗಿ ಕಮೆಂಟ್ ಮಾಡಿದ್ದಾರೆ.
View this post on Instagram
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಾಷ್ಟ್ರದ ಪ್ರಗತಿಗಾಗಿ ಜಾತಿ ಮತ್ತು ಪ್ರಾದೇಶಿಕ ತಾರತಮ್ಯವನ್ನು ತೊಡೆದುಹಾಕಿ: ಯೋಗಿ ಆದಿತ್ಯನಾಥ್

ಒಡಿಶಾ ಸಚಿವನ ಹತ್ಯೆ: ಸಿಬಿಐ ತನಿಖೆಗೆ ಆಗ್ರಹ

ಬಿಜೆಪಿ ಜೊತೆಗೆ ಮೈತ್ರಿಗಿಂತ ಸಾಯುವುದು ಲೇಸು: ನಿತೀಶ್ ಕುಮಾರ್

ಮೋದಿ ಸರ್ಕಾರದ ಡಿಡಿಎಲ್ಜೆಯಲ್ಲಿ ಸಚಿವ ಜೈಶಂಕರ್ ನಟನೆ: ಜೈರಾಮ್ ರಮೇಶ್

ಗೋರಖ್ನಾಥ್ ದೇಗುಲ ದಾಳಿ: ಆರೋಪಿ ಅಹ್ಮದ್ ಮುರ್ತಾಜಾಗೆ ಮರಣದಂಡನೆ ಶಿಕ್ಷೆ
MUST WATCH

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan
