Panaji: ನಿಸರ್ಗದ ಸೌಂದರ್ಯದ ನಡುವೆ ಮೈದುಂಬಿ ಹರಿಯುತ್ತಿದೆ ಜಲಪಾತಗಳು

ಪ್ರವಾಸಿಗರ ಆಕರ್ಷಣೀಯ ಕೇಂದ್ರವಾಗುತ್ತಿದೆ ಜಲಪಾತಗಳು

Team Udayavani, Jul 5, 2023, 2:57 PM IST

Panaji: ನಿಸರ್ಗ ಸೌಂದರ್ಯದ ನಡುವೆ ಮೈದುಂಬಿ ಹರಿಯುತ್ತಿದೆ ಜಲಪಾತಗಳು

ಪಣಜಿ: ಗೋವಾದ ಸತ್ತರಿ ತಾಲೂಕು ಭಾಗದಲ್ಲಿರುವ ಜಲಪಾತಗಳು ರಮಣೀಯ ಸೌಂದರ್ಯದಿಂದ ಕೂಡಿದ್ದು, ನಿಸರ್ಗದ ಸೌಂದರ್ಯವನ್ನು ಆನಂದಿಸಲು ಈ ಭಾಗವು ಪ್ರಮುಖ ಪ್ರವಾಸಿ ತಾಣವಾಗುತ್ತಿದೆ.  ನದಿಗಳು ಮತ್ತು ಸರೋವರಗಳು ಪ್ರವಾಸಿಗರನ್ನು ಆಕರ್ಷಿಸುತ್ತವೆ ಮತ್ತು ಗೋವಾ ಮತ್ತು ಗೋವಾದ ಹೊರಗಿನ ಪ್ರವಾಸಿಗರು ಮಳೆಗಾಲದಲ್ಲಿ ಜಲಪಾತಗಳನ್ನು ಆನಂದಿಸಲು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಇದೀಗ ಗೋವಾ ರಾಜ್ಯದಲ್ಲಿ ಭಾರೀ ಮಳೆಯಿಂದಾಗಿ ಪರ್ವತಗಳ ತುದಿಯಿಂದ ಜಲಪಾತಗಳು ಹರಿಯಲು ಪ್ರಾರಂಭಿಸಿವೆ. ಸತ್ತರಿಯಲ್ಲಿರುವ ಮಾನ್ಸೂನ್ ಜಲಪಾತಗಳು ಪ್ರವಾಸಿಗರನ್ನು ಆಕರ್ಷಿಸಲು ಮೈದುಂಬಿಕೊಳ್ಳುತ್ತಿದೆ.

ಸತ್ತರಿಯಲ್ಲಿ ಪ್ರತಿ ವರ್ಷ, ಪ್ರವಾಸಿಗರು ಮಳೆಗಾಲದಲ್ಲಿ ಶನಿವಾರ, ಭಾನುವಾರ ಮತ್ತು ರಜಾದಿನಗಳಲ್ಲಿ ಜಲಪಾತಗಳಿಗೆ ಭೇಟಿ ನೀಡುತ್ತಾರೆ. ಅದೇ ಸಮಯದಲ್ಲಿ, ಪ್ರವಾಸೋದ್ಯಮ ಇಲಾಖೆ ಮತ್ತು ಇತರ ಸಂಸ್ಥೆಗಳು ಆಯೋಜಿಸಿರುವ ಜಲಪಾತಕ್ಕೆ ಚಾರಣಕ್ಕಾಗಿ ರಜಾದಿನಗಳಲ್ಲಿ ಪ್ರವಾಸಿಗರ ಗರ್ದಿಯನ್ನು ಕಾಣಬಹುದಾಗಿದೆ. ಆಷಾಢ ಏಕಾದಶಿ ಮತ್ತು ಬಕ್ರಿ ಈದ್ ಸಾರ್ವಜನಿಕ ರಜಾದಿನಗಳಾಗಿದ್ದವು. ಹಾಗಾಗಿ ಈ ಭಾಗದಲ್ಲಿರುವ ಮಾನ್ಸೂನ್ ಜಲಪಾತಕ್ಕೆ ಪ್ರವಾಸಿಗರ ದಂಡೇ ಹರಿದು ಬಂದಿತ್ತು. ಮಳೆಗಾಲದ ಸಂದರ್ಭದಲ್ಲಂತೂ ಶನಿವಾರ ಮತ್ತು ಭಾನುವಾರದಂದು  ಸತ್ತರಿ ತಾಲೂಕಿನಲ್ಲಿರುವ ಜಲಪಾತಗಳು ಹೌಸ್ ಫುಲ್ ಆಗಿರುತ್ತದೆ. ಆದರೆ ಇಲ್ಲಿ ಮೂಲಭೂತ ಸೌಲಭ್ಯಗಳ ಕೊರತೆಯಿದ್ದು ಸ್ಥಳೀಯ ಪಂಚಾಯಿತಿ ಪ್ರವಾಸಿಗರಿಗೆ ಅಗತ್ಯ ಸೌಲಭ್ಯ ಕಲ್ಪಿಸಿದರೆ ಇನ್ನೂ ಹೆಚ್ಚಿನ ಪ್ರವಾಸಿಗರು ಇಲ್ಲಿನ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದಾಗಿದೆ.

ಪಾಳಿನಲ್ಲಿರುವ ಹೊಸ ರಸ್ತೆಯು ಪ್ರವಾಸಿಗರಿಗೆ ಪಾಳಿ ಮೂಲಕ ಚೋರ್ಲಾಘಾಟ್‍ಗೆ ಜಾಂಬಳಿ ತೆಂಬಾ ಮಾರ್ಗವಾಗಿ ಚೋರ್ಲಾ ತಲುಪಲು ಅನುಕೂಲಕರವಾಗಿದೆ. ಮಳೆಗಾಲದಲ್ಲಿ ಪ್ರವಾಸಿಗರು ಚೋರ್ಲಾ ಮತ್ತು ಸುರ್ಲಾದಂತಹ ಸುಂದರ ಸ್ಥಳಗಳಿಗೆ ಆಕರ್ಷಿತರಾಗುತ್ತಾರೆ. ಈ ರಸ್ತೆ ಪೂರ್ಣಗೊಂಡ ನಂತರ ಫೋಂಡಾ, ಗುಳೇಲಿ ಮತ್ತು ವಾಲ್ಪೈ ನಾಗರಿಕರು ಬೆಳಗಾವಿಗೆ ಹೋಗಲು ಈ ರಸ್ತೆಯನ್ನು ಬಳಸುತ್ತಿದ್ದಾರೆ. ಈ ಮಾರ್ಗದಲ್ಲಿ ಸಲೇಲಿ, ಜರ್ಮೆ, ನಾನೇಲಿ, ಬ್ರಹ್ಮಕರ್ಮಲಿ, ಶೆಲಪ್-ಬುದ್ರುಕ್, ಚೋರ್ಲಾಘಾಟ್, ಪಾಳಿ, ಹಿವ್ರೆ, ಶೆಲಾಪ್, ಸತ್ರೆ, ಕುಮ್ತಾಲ್, ಕಾರಂಜೋಲ್, ತುಲಾಸ್ ಕೊಂಡ್, ಮೋಳೆ, ರೈವ್, ಚರವಾಣೆ ಮತ್ತು ಸತ್ತಾರಿಯ ಅನೇಕ ಭಾಗಗಳಲ್ಲಿ ಹರಿಯುವ ಸಣ್ಣ ಮತ್ತು ದೊಡ್ಡ ಜಲಪಾತಗಳು ಮಳೆಗಾಲದ ಈ ಭಾಗದ ಪ್ರಮುಖ ಆಕರ್ಷಣೆಯಾಗಿದೆ. ಸತ್ತರಿಯಲ್ಲಿ ಜಲಪಾತ ವರ್ಷಪೂರ್ತಿ ಹರಿಯುತ್ತಿರುತ್ತದೆ. ಸತ್ತರಿ ಜಲಪಾತಗಳು ಮಹದಾಯಿ ಅಭಯಾರಣ್ಯದ ಅಡಿಯಲ್ಲಿ ಬರುತ್ತವೆ ಮತ್ತು ಅರಣ್ಯ ಅಧಿಕಾರಿಗಳು ಜಲಪಾತಗಳಿಗೆ ಪ್ರವೇಶ ಶುಲ್ಕವನ್ನು ವಿಧಿಸುತ್ತಾರೆ.

ಪಾಳಿ-ಸತ್ತರಿಯ ಪಂಚಾಯತ ಸದಸ್ಯ ಸುರೇಶ್ ಆಯಕರ್ ಪ್ರತಿಕ್ರಿಯೆ ನೀಡಿ- ಮಳೆಗಾಲದಲ್ಲಿ ಜಲಪಾತಕ್ಕೆ ಬರುವ ಪ್ರವಾಸಿಗರಿಂದ ಸ್ಥಳೀಯ ಪಂಚಾಯಿತಿ ಕಡಿಮೆ ಶುಲ್ಕ ವಿಧಿಸಬೇಕು. ಜಲಪಾತದ ಬಳಿ ಬಟ್ಟೆ ಬದಲಿಸಲು ಅಗತ್ಯ ಸೌಲಭ್ಯ ಕಲ್ಪಿಸಬೇಕು. ಪಂಚಾಯತ್‍ಗಳು ಕೆಲವು ಹಣಕಾಸಿನ ನೆರವನ್ನು ಶುಲ್ಕದ ಮೂಲಕ ಪಡೆಯಬಹುದು. ಪಾಳಿ-ಸತ್ತರಿಯಲ್ಲಿರುವ ಶಿವಲಿಂಗ ಮಾನ್ಸೂನ್ ಜಲಪಾತ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಈ ವರ್ಷ ಮುಂಗಾರು ಹಂಗಾಮು ತಡವಾಗಿ ಆರಂಭವಾಗಿರುವುದು ಪ್ರವಾಸಿಗರ ಗಮನದ ಮೇಲೆ ಪರಿಣಾಮ ಬೀರಿದೆ. ಆದರೆ, ಈಗ ಮುಂಗಾರು ಮಳೆ ಆರಂಭವಾಗಿರುವುದರಿಂದ ಜಲಪಾತಗಳು ಮೈದುಂಬಿಕೊಳ್ಳುತ್ತಿದೆ. ಹೀಗಾಗಿ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದೆ.

ಇದನ್ನೂ ಓದಿ: Odisha: ಹುಟ್ಟಿದ ಎರಡನೇ ಮಗುವೂ ಹೆಣ್ಣಾಯಿತೆಂದು 8 ತಿಂಗಳ ಮಗುವನ್ನು 800ರೂ. ಗೆ ಮಾರಿದ ತಾಯಿ

ಟಾಪ್ ನ್ಯೂಸ್

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Sullia ಮನೆಯಿಂದ ನಗ, ನಗದು ಕಳವು

Sullia ಮನೆಯಿಂದ ನಗ, ನಗದು ಕಳವು

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

yogi adityanath

Kolkatta; ಸಂಪತ್ತು ಹಂಚಿಕೆ ಮಾಡುತ್ತೇವೆ: ಉ.ಪ್ರ.ಸಿಎಂ ಯೋಗಿ ಘೋಷಣೆ

farmers, trailer, housewives star campaigners for CM Jagan’s party

Andhra Pradesh; ಸಿಎಂ ಜಗನ್‌ ಪಕ್ಷಕ್ಕೆ ರೈತರು,ಟೆೃಲರ್‌, ಗೃಹಿಣಿಯರೇ ಸ್ಟಾರ್‌ ಪ್ರಚಾರಕರು!

ಮುಸ್ಲಿಮರಿಗೆ ಅಷ್ಟೇ ಅಲ್ಲ, ನನಗೂ 5 ಮಕ್ಕಳಿದ್ದಾರೆ: ಮೋದಿಗೆ ಖರ್ಗೆ ಟಕ್ಕರ್‌

Loksabha; ಮುಸ್ಲಿಮರಿಗೆ ಅಷ್ಟೇ ಅಲ್ಲ, ನನಗೂ 5 ಮಕ್ಕಳಿದ್ದಾರೆ: ಮೋದಿಗೆ ಖರ್ಗೆ ಟಕ್ಕರ್‌

ಉಗ್ರರಿದ್ದಲ್ಲೇ ನುಗ್ಗಿ ವಿನಾಶ: ಪ್ರಧಾನಿ ಮೋದಿ

ಉಗ್ರರಿದ್ದಲ್ಲೇ ನುಗ್ಗಿ ವಿನಾಶ; ಇದು ನವಭಾರತದ ಹೆಗ್ಗಳಿಕೆ: ಪ್ರಧಾನಿ ಮೋದಿ

Suspense still about Rae Bareli, Amethi Congress candidates!

Lok Sabha; ರಾಯ್‌ಬರೇಲಿ, ಅಮೇಠಿ ಕಾಂಗ್ರೆಸ್‌ ಅಭ್ಯರ್ಥಿಗಳ ಬಗ್ಗೆ ಇನ್ನೂ ಸಸ್ಪೆನ್ಸ್‌!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.