ನ್ಯಾಯ ಎಲ್ಲಿದೆ?: ಮೋದಿ ಪ್ರಶ್ನೆ

ಕಾಂಗ್ರೆಸ್‌ನ ಉದ್ಘೋಷ ಪ್ರಸ್ತಾವಿಸಿ ಲೇವಡಿ

Team Udayavani, Apr 14, 2019, 6:00 AM IST

j-33

ಶನಿವಾರ ತಮಿಳುನಾಡಿನ ರಾಮನಾಥಪುರಂ ರ್ಯಾಲಿ ವೇಳೆ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ಪ್ರಧಾನಿ ಮೋದಿಗೆ ಬಿಲ್ಲು-ಬಾಣವನ್ನು ಉಡುಗೊರೆಯಾಗಿ ನೀಡಿದರು.

ಹೊಸದಿಲ್ಲಿ: ಕಾಂಗ್ರೆಸ್‌ನ ಚುನಾವಣಾ ಆಶ್ವಾಸನೆಯಾದ “ನ್ಯಾಯ್‌’ ಯೋಜನೆಯ ಹೆಸರನ್ನೇ ಇಟ್ಟುಕೊಂಡು ಆ ಪಕ್ಷದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಗುಡುಗಿದ್ದಾರೆ. 1984ರ ಸಿಕ್ಖ್ ವಿರೋಧಿ ದಂಗೆ, ಭೋಪಾಲ್‌ ಅನಿಲ ದುರಂತ ಮತ್ತು ದಲಿತರ ವಿರುದ್ಧದ ಹಿಂಸಾ ಚಾರದ ಸಂತ್ರಸ್ತರಿಗೆ ಮೊದಲು ಕಾಂಗ್ರೆಸ್‌ ನ್ಯಾಯ ಒದಗಿಸಲಿ ಎಂದು ತಿವಿದಿದ್ದಾರೆ.

ತಮಿಳುನಾಡಿನ ರಾಮನಾಥಪುರಂನಲ್ಲಿ ಶನಿವಾರ ಚುನಾವಣಾ ಪ್ರಚಾರ ರ್ಯಾಲಿ ನಡೆಸಿದ ಪ್ರಧಾನಿ ಮೋದಿ, “ಡಿಎಂಕೆ, ಕಾಂಗ್ರೆಸ್‌ ಮತ್ತು ಮುಸ್ಲಿಂ ಲೀಗ್‌ಗೆ ನೀಡುವ ಒಂದೊಂದು ಮತವೂ ನಿಮಗೆ ಅತ್ಯಧಿಕ ತೆರಿಗೆ ಮತ್ತು ಕಡಿಮೆ ಅಭಿವೃದ್ಧಿಯನ್ನು ನೀಡುತ್ತದೆ. ಭಯೋತ್ಪಾದಕರಿಗೆ ಮುಕ್ತ ಅವಕಾಶ, ರಾಜಕೀಯದಲ್ಲಿ ಕ್ರಿಮಿನಲ್‌ಗ‌ಳ ವೃದ್ಧಿಗೆ ಕಾರಣವಾಗುತ್ತದೆ’ ಎಂದಿದ್ದಾರೆ. ಯಾರಿಗೆ ಭಾರತವನ್ನು ರಕ್ಷಿಸಲು ಸಾಧ್ಯವಿಲ್ಲವೋ, ಅವರಿಂದ ದೇಶದ ಅಭಿವೃದ್ಧಿಯೂ ಸಾಧ್ಯವಿಲ್ಲ. ಕಾಂಗ್ರೆಸ್‌ ಅಧಿ ಕಾರದಲ್ಲಿದ್ದಾಗ ದೇಶದಲ್ಲಿ ನಿರಂತರವಾಗಿ ಉಗ್ರರ ದಾಳಿಗಳು ನಡೆಯುತ್ತಿದ್ದವು. ಆದರೆ ಕಾಂಗ್ರೆಸ್‌ ಮಾತ್ರ ಅಸಹಾಯಕವಾಗಿ ಮೌನಕ್ಕೆ ಶರಣಾಗಿತ್ತು. ಆದರೆ ಈಗ ಕಾಲ ಬದಲಾಗಿದೆ. ಭಾರತವು ಒಬ್ಬ ಭಯೋತ್ಪಾದಕ ಅಥವಾ ಜೆಹಾದಿಯನ್ನೂ ಸುಮ್ಮನೆ ಬಿಡುತ್ತಿಲ್ಲ. ನಮ್ಮ ಮೇಲೆ ದಾಳಿ ಮಾಡುವ ಧೈರ್ಯ ತೋರಿದರೆ, ಅವರನ್ನು ಎಲ್ಲಿದ್ದರೂ ಹುಡುಕಿ ಹುಡುಕಿ ನಿರ್ನಾಮ ಮಾಡುತ್ತೇವೆ ಎಂದೂ ಮೋದಿ ಹೇಳಿದ್ದಾರೆ.

ಈಗ ನ್ಯಾಯ ಸಿಗುತ್ತದೆ ಎಂದು ಹೇಳುವ ಕಾಂಗ್ರೆಸ್‌, ಕಳೆದ 60 ವರ್ಷಗಳಿಂದಲೂ ಅನ್ಯಾಯವನ್ನೇ ಮಾಡುತ್ತಾ ಬಂದಿದೆ. ಸಿಕ್ಖ್ ವಿರೋಧಿ ದಂಗೆಯ ಸಂತ್ರಸ್ತರಿಗೆ ನ್ಯಾಯ ಒದಗಿಸುವವರಾರು? ಭೋಪಾಲ್‌ ದುರಂತದ ಸಂತ್ರಸ್ತರಿಗೆ ನ್ಯಾಯ ಕೊಡುವವರಾರು, ದಲಿತರಿಗಾದ ಅನ್ಯಾಯಕ್ಕೆ ನ್ಯಾಯ ನೀಡುವವರಾರು ಎಂದು ಪ್ರಶ್ನಿಸಿದ್ದಾರೆ ಮೋದಿ.

ಶಬರಿಮಲೆ ಪ್ರಸ್ತಾವ: ಇದೇ ವೇಳೆ ಶಬರಿಮಲೆ ವಿವಾ ದದ ಕುರಿತು ಪ್ರಸ್ತಾವಿಸಿದ ಪ್ರಧಾನಿ, ಕೇರಳದಲ್ಲಿ ಕಾಂಗ್ರೆಸ್‌, ಕಮ್ಯೂನಿಸ್ಟ್‌ಗಳು ಮತ್ತು ಮುಸ್ಲಿಂ ಲೀಗ್‌ ಶಬರಿಮಲೆ ವಿಚಾರದಲ್ಲಿ ಅಪಾಯಕಾರಿ ಆಟ ಆಡು ತ್ತಿವೆ. ಆದರೆ, ಬಿಜೆಪಿ ಎಲ್ಲಿಯವರೆಗೆ ಇರುತ್ತದೋ, ಅಲ್ಲಿಯವರೆಗೆ ನಮ್ಮ ನಂಬಿಕೆ ಹಾಗೂ ಸಂಸ್ಕೃತಿಗೆ ಧಕ್ಕೆ ತರಲು ಬಿಡುವುದಿಲ್ಲ ಎಂದು ಹೇಳಿದ್ದಾರೆ. ಇದೇ ವೇಳೆ, ಡಿಎಂಕೆ, ಕಾಂಗ್ರೆಸ್‌ನಂಥ ಪಕ್ಷಗಳು ಸಂಸತ್‌ನಲ್ಲಿ ತ್ರಿವಳಿ ತಲಾಖ್‌ ವಿಧೇಯಕ ಅಂಗೀಕಾರಕ್ಕೆ ಅಡ್ಡಿಪಡಿಸುವ ಮೂಲಕ, ಮಹಿಳೆಯರ ಘನತೆಗೆ ಧಕ್ಕೆ ತರುತ್ತಿವೆ ಎಂದೂ ಆರೋಪಿಸಿದ್ದಾರೆ.

ಉಪವಾಸದಲ್ಲೇ 23 ರ್ಯಾಲಿಗಳಲ್ಲಿ ಭಾಗವಹಿಸಿದ ಮೋದಿ
ಇಂಫಾಲ್‌ನಿಂದ ಜುನಾಗಢ, ಕೂಚ್‌ ಬೆಹಾರ್‌ನಿಂದ ಕಲ್ಲಿಕೋಟೆವರೆಗೆ 13 ರಾಜ್ಯಗಳು, 23 ರ್ಯಾಲಿ ಹಾಗೂ 22 ಸಾವಿರ ಕಿ.ಮೀ. ಪ್ರಯಾಣ… ಇದು ನವರಾತ್ರಿ ಯಲ್ಲಿ ಪ್ರಧಾನಿ ನರೇಂದ್ರ ಮೋದಿ ಉಪವಾಸ ಮಾಡುತ್ತಲೇ ಪ್ರಯಾಣಗೈದ ವಿವರ. ಕೆಲವೆಡೆ 40 ಡಿಗ್ರಿ ಸೆಲಿÏಯಸ್‌ಗೂ ಹೆಚ್ಚು ತಾಪಮಾನವೂ ಇತ್ತು. ಎಪ್ರಿಲ್‌ 6 ರಿಂದ ಆರಂಭವಾದ ನವರಾತ್ರಿ ರವಿವಾರ ಮುಕ್ತಾಯವಾಗಲಿದೆ. ಈ ಅವಧಿಯಲ್ಲಿ ಮೋದಿ ಮೂರು ಮಾಧ್ಯಮಗಳಿಗೆ ದೀರ್ಘ‌ ಸಂದರ್ಶನ ನೀಡಿದ್ದಾರೆ.

ಉಪವಾಸದ ವೇಳೆಯೂ ಪ್ರಧಾನಿ ಮೋದಿ ತನ್ನ ಶೆಡ್ನೂಲ್‌ನಲ್ಲಿ ಯಾವುದೇ ಬದಲಾವಣೆ ಮಾಡು ವುದಿಲ್ಲ. ಎಂದಿನಂತೆಯೇ ರ್ಯಾಲಿ ಹಾಗೂ ಇತರ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ. ಪ್ರತಿವರ್ಷವೂ ನವರಾತ್ರಿಯಲ್ಲಿ ಒಂಬತ್ತೂ ದಿನ ಮೋದಿ ಕೇವಲ ನಿಂಬೆ ರಸ ಹಾಗೂ ನೀರನ್ನು ಕುಡಿಯುತ್ತಾರೆ. ಯಾವುದೇ ಘನ ಆಹಾರವನ್ನು ಸೇವಿಸುವುದಿಲ್ಲ. ಈ ಬಾರಿ ನವರಾತ್ರಿಯಲ್ಲೇ ಚುನಾವಣೆ ಕೂಡ ನಿಗದಿ ಯಾಗಿರುವುದರಿಂದ ರ್ಯಾಲಿಗಳಲ್ಲಿ ಭಾಗವಹಿಸುವುದು ಮೋದಿಗೆ ಅನಿವಾರ್ಯವೂ ಆಗಿತ್ತು. ಒಟ್ಟು 51 ದಿನಗಳ ಪ್ರಚಾರದ ಸಮಯದಲ್ಲಿ ಮೋದಿ 150 ರ್ಯಾಲಿ ನಡೆಸ ಲಿದ್ದಾರೆ. ಒಟ್ಟು 91 ಕ್ಷೇತ್ರಗಳು, 18 ರಾಜ್ಯ ಹಾಗೂ 2 ಕೇಂದ್ರಾಡಳಿತ ಪ್ರದೇಶಗಳಲ್ಲಿ ಅವರು ರ್ಯಾಲಿ ನಡೆಸಲಿದ್ದಾರೆ.

ವಯನಾಡ್‌ನ‌ಲ್ಲಿ ನಕ್ಸಲರಿಂದ ಎನ್‌ಡಿಎ ಅಭ್ಯರ್ಥಿ ವೆಳ್ಳಾಪಳ್ಳಿ ಅಪಹರಣ ಭೀತಿ
ವಯನಾಡು ಲೋಕಸಭಾ ಕ್ಷೇತ್ರದಲ್ಲಿ ಎನ್‌ಡಿಎ ಅಭ್ಯರ್ಥಿಯಾಗಿರುವ ಬಿಡಿಜೆಎಸ್‌ ಮುಖಂಡ ತುಷಾರ್‌ ವೆಳ್ಳಾಪಳ್ಳಿ ಸಹಿತ ಹಲವರನ್ನು ಮಾವೋವಾದಿಗಳು ಅಪಹರಿ ಸುವ ಸಾಧ್ಯತೆಯ ಬಗ್ಗೆ ಗುಪ್ತಚರ ವಿಭಾ ಗದ ಪೊಲೀಸರು ಮುನ್ನೆಚ್ಚರಿಕೆ ನೀಡಿದ್ದಾರೆ. ವೆಳ್ಳಾಪಳ್ಳಿ ಅವರನ್ನು ಅಪಹರಿಸುವ ಅಥವಾ ಅವರ ಚುನಾವಣಾ ಪ್ರಚಾರ ಸಭೆ ಮೇಲೆ ದಾಳಿ ನಡೆಸುವ ಮಾತ್ರವಲ್ಲ, ವಯನಾಡಿ ನಲ್ಲಿ ಚುನಾವಣೆ ಪ್ರಕ್ರಿಯೆಯನ್ನೂ ಬುಡ ಮೇಲುಗೊಳಿಸುವ ಯೋಜನೆಯನ್ನು ಮಾವೋ  ವಾದಿ ಗಳು ಹಾಕಿಕೊಂಡಿರುವು ದಾಗಿ ಗುಪ್ತಚರ ವಿಭಾಗ ಸರಕಾರಕ್ಕೆ ಸಲ್ಲಿಸಿದ ವರದಿಯಲ್ಲಿ ತಿಳಿಸಿದೆ. ಆ ವರ ದಿಯ ಆಧಾರದಲ್ಲಿ ತುಷಾರ್‌ ವೆಳ್ಳಾಪಳ್ಳಿ ಮಾತ್ರವಲ್ಲ, ಎಡರಂಗದ ಅಭ್ಯರ್ಥಿ ಪಿ. ಆರ್‌. ಸುನೀರ್‌ ಅವರಿಗೂ ವಿಶೇಷ ಭದ್ರತೆ ಒದಗಿಸಲಾಗಿದೆ. ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ರಾಹುಲ್‌ ಗಾಂಧಿ ಸ್ಪರ್ಧಿಸುವ ಮೂಲಕ ವಯನಾಡು ದೇಶದ ಗಮನ ಸೆಳೆದಿರುವ ಕೇತ್ರವಾಗಿದೆ. ಆದ್ದರಿಂದಲೇ ಕ್ಷೇತ್ರವನ್ನು ಮಾವೋವಾದಿಗಳು ತಮ್ಮ ಪ್ರಧಾನ ದಾಳಿ ಕೇಂದ್ರವನ್ನಾಗಿಸಿಕೊಂಡಿದ್ದಾ ರೆಂದು ಗುಪ್ತಚರ ವಿಭಾಗ ತಿಳಿಸಿದೆ.

ಸ್ನಾತಕೋತ್ತರ ಇಲ್ಲದೆ ರಾಹುಲ್‌ ಎಂ.ಫಿಲ್‌ ಮಾಡಿದ್ದು ಹೇಗೆ?: ಸಚಿವ ಜೇಟ್ಲಿ ಪ್ರಶ್ನೆ
ಕೇಂದ್ರ ಸಚಿವೆ ಸ್ಮತಿ ಇರಾನಿ ವಿದ್ಯಾರ್ಹತೆ ಬಗ್ಗೆ ವಿವಾದ ಎದ್ದಿರುವ ಹಿನ್ನೆಲೆಯಲ್ಲಿ ಅವರ ರಕ್ಷಣೆಗೆ ಧಾವಿಸಿರುವ ಸಚಿವ ಜೇಟ್ಲಿ, ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿಯವರ ವಿದ್ಯಾರ್ಹತೆ ಯನ್ನು ಪ್ರಶ್ನಿಸಿದ್ದಾರೆ. ಅಮೇಠಿ ಯಲ್ಲಿ ನಾಮಪತ್ರ ಸಲ್ಲಿಸಿರುವ ರಾಹುಲ್‌, ಅದರಲ್ಲಿ ತಾವು ಎಂ.ಫಿಲ್‌. ಮಾಡಿರುವು ದಾಗಿ ಘೋಷಿಸಿಕೊಂಡಿರುವುದನ್ನು ತಮ್ಮ ಬ್ಲಾಗ್‌ನಲ್ಲಿ ಪ್ರಶ್ನಿಸಿರುವ ಜೇಟ್ಲಿ, “ರಾಹುಲ್‌ ಸ್ನಾತಕೋತ್ತರ ಪದವಿ ಇಲ್ಲದೆಯೇ ಎಂ. ಫಿಲ್‌ ಹೇಗೆ ಮಾಡಲು ಸಾಧ್ಯ ವಾಯಿತು’ ಎಂದಿದ್ದಾರೆ. ಅಮೇಠಿ ಅಭ್ಯರ್ಥಿ ಸ್ಮತಿ, ತಾವು 3 ವರ್ಷದ ಸ್ನಾತಕ ಪದವಿ ಪೂರ್ಣಗೊಳಿಸಿಲ್ಲ ಎಂದು ಘೋಷಿಸಿ  ಕೊಂಡಿದ್ದಾರೆ. 2017ರಲ್ಲಿ ಅವರು ರಾಜ್ಯಸಭೆಗೆ ಸ್ಪರ್ಧಿಸಿದ್ದಾಗಲೂ ಅಫಿ ದವಿತ್‌ನಲ್ಲಿ ಇದನ್ನೇ ಹೇಳಿದ್ದರು. ಆದರೆ, 2014ರ ಮಹಾ ಚುನಾವಣೆಯಲ್ಲಿ ದಿಲ್ಲಿ ವಿವಿಯ ದೂರಶಿಕ್ಷಣ ವಿಭಾಗದಡಿ 1994 ರಲ್ಲಿ ಸ್ನಾತಕ ಪದವಿ ಪಡೆದಿರುವುದಾಗಿ ಘೋಷಿಸಿ ಕೊಂಡಿದ್ದ ಅವರು, 2004ರಲ್ಲಿ ದಿಲ್ಲಿಯ ಚಾಂದನಿ ಚೌಕ್‌ನಿಂದ ಸ್ಪರ್ಧಿಸಿ ದ್ದಾಗ 1996 ರಲ್ಲಿ ದಿಲ್ಲಿ ವಿವಿಯಿಂದ ಕಲಾ ವಿಭಾಗದಲ್ಲಿ ಪದವಿ ಪಡೆದಿರುವುದಾಗಿ ಹೇಳಿಕೊಂಡಿದ್ದರು. ಹೀಗೆ, ಪ್ರತಿ ಚುನಾವಣೆ ಯಲ್ಲಿ ತಮ್ಮ ವಿದ್ಯಾಭ್ಯಾಸದ ಬಗ್ಗೆ ಬೇರೆ ಬೇರೆ ಘೋಷಣೆ ಮಾಡಿಕೊಂಡಿರುವುದು ಟೀಕೆಗೊಳಗಾಗಿತ್ತು.

ನಮೋ ಟಿವಿ: ಬಿಜೆಪಿಗೆ ಆಯೋಗ ಸೂಚನೆ
“ನಮೋ ಟಿವಿ’ಯಲ್ಲಿ ಪ್ರಸಾರವಾಗುವ ಎಲ್ಲಾ ಕಾರ್ಯಕ್ರಮಗಳಿಗೆ ತನ್ನ ಪೂರ್ವ ಭಾವಿ ಒಪ್ಪಿಗೆಯನ್ನು ಪಡೆದೇ ಪ್ರಸಾರ ಮಾಡಬೇಕು ಎಂದು ದಿಲ್ಲಿಯ ಬಿಜೆಪಿ ಘಟಕಕ್ಕೆ ಚುನಾವಣಾ ಆಯೋಗ ಸೂಚಿ ಸಿದೆ. ಈ ಕುರಿತಂತೆ ನೋಟಿಸ್‌ ಜಾರಿಗೊಳಿ ಸಿರುವ ದಿಲ್ಲಿ ಚುನಾವಣಾ ಆಯುಕ್ತರು, ವಾಹಿನಿಯ ಮೂಲಕ ಪ್ರಸಾರವಾಗುವ ಯಾವುದೇ ಕಾರ್ಯಕ್ರಮವಾಗಲೀ, ತುಣುಕಾಗಲೀ ತನ್ನ ಅಪ್ಪಣೆ ಇಲ್ಲದೆ ಪ್ರಸಾರ ವಾಗುವ ಹಾಗಿಲ್ಲ. ನಮೋ ಟಿವಿಯು ಬಿಜೆಪಿಯ ಪ್ರಾಯೋಜಿತ ವಾಹಿನಿಯಾಗಿರುವುದರಿಂದ ಕಾರ್ಯಕ್ರಮಗಳು ಚುನಾ ವಣಾ ಆಯೋಗದ ಪೂರ್ವಭಾವಿ ಪರಿ ಶೀಲನೆಗೆ ಒಳಪಡುವುದು ಕಡ್ಡಾಯ ಎಂದು ಸೂಚಿಸಿದೆ. ಈ ಕುರಿತಂತೆ ಮತ್ತಷ್ಟು ವಿವರಣೆ ನೀಡಿರುವ ಆಯೋಗದ ಅಧಿಕಾರಿಯೊಬ್ಬರು, ಆಯೋಗದ ಸೂಚನೆಯನ್ನು ಬಿಜೆಪಿ ಪಾಲಿಸುತ್ತಿದೆಯೇ ಇಲ್ಲವೇ ಎಂಬುದನ್ನು ಗಮನಿಸಲು ಇಬ್ಬರು ಪರಿವೀಕ್ಷಕರನ್ನು ನೇಮಿಸಲಾಗಿದೆ ಎಂದು ಹೇಳಿದ್ದಾರೆ.

ಮೋದಿ ತಾಳಕ್ಕೆ ಆಯೋಗ‌ ಕುಣಿತ: ನಾಯ್ಡು
ಗುರುವಾರ ನಡೆದ ಮೊದಲ ಹಂತದ ಚುನಾವಣೆ ವೇಳೆ ಇವಿಎಂಗಳಲ್ಲಿ ಭಾರಿ ಪ್ರಮಾಣದ ದೋಷಗಳು ಕಂಡುಬಂದಿದ್ದು, ಸಾಕಷ್ಟು ಭದ್ರತೆ ಒದಗಿಸದ ಕಾರಣ ಹಿಂಸಾ ಚಾರವೂ ನಡೆದಿದೆ ಎಂದು ಆರೋಪಿಸಿ ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರ ಬಾಬು ನಾಯ್ಡು ಶನಿವಾರ ಮುಖ್ಯ ಚುನಾ ವಣಾ ಆಯುಕ್ತ ಸುನೀಲ್‌ ಅರೋರಾರಿಗೆ ದೂರು ನೀಡಿದ್ದಾರೆ. ಅವರನ್ನು ಭೇಟಿ ಯಾಗಿ ಮನವಿ ಪತ್ರ ಸಲ್ಲಿಸಿದ ನಾಯ್ಡು, ಬಳಿಕ ಸುದ್ದಿಗಾರರ ಜತೆ ಮಾತನಾಡಿ, ಚುನಾವಣಾ ಆಯೋಗವು ಪ್ರಧಾನಿ ಮೋದಿ ಸೂಚನೆಯಂತೆ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಜತೆಗೆ ಇವಿಎಂ ಬದಲಿಗೆ ಮತಪತ್ರವನ್ನೇ ಜಾರಿ ಮಾಡ ಬೇಕು ಎಂದೂ ಆಗ್ರಹಿಸಿದ್ದಾರೆ. ಇದೇ ವೇಳೆ, ನಾಯ್ಡು ಅವರ ಪ್ರತಿಯೊಂದು ದೂರಿಗೂ ಆಯೋಗವು ಉತ್ತರ ನೀಡಿದೆ ಎಂದು ಮೂಲಗಳು ತಿಳಿಸಿವೆ.

3 ಹಂತದ ಭದ್ರತೆ: ಇನ್ನೊಂದೆಡೆ, ತೆಲಂಗಾಣದಲ್ಲಿ ಇವಿಎಂ ಇಟ್ಟಿರುವ ಸ್ಟ್ರಾಂಗ್‌ ರೂಂಗಳಿಗೆ 3 ಹಂತದ ಭದ್ರತೆ ಒದಗಿಸ ಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಕೇಂದ್ರ ಸಶಸ್ತ್ರ ಪೊಲೀಸ್‌ ಪಡೆ ಮತ್ತು ರಾಜ್ಯ ಪೊಲೀಸರು ಭದ್ರತೆ ನೀಡು ತ್ತಿದ್ದಾರೆ. ಮೇ 23ರವರೆಗೂ ಇದು ಮುಂದುವರಿಯಲಿದೆ ಎಂದಿದೆ.

ಪಕ್ಷೇತರ ಅಭ್ಯರ್ಥಿಗೆ ನೋಟಿಸ್‌
ಪ್ರಧಾನಿ ನರೇಂದ್ರ ಮೋದಿಯವರನ್ನೇ ಹೋಲುವ ಹಾಗೂ ಲಕ್ನೋ ಲೋಕಸಭಾ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಅಭಿನಂದನ್‌ ಪಾಠಕ್‌, ನಾಮಪತ್ರ ಸಲ್ಲಿಸಿದ ಬೆನ್ನಲ್ಲೇ ನೀಡಿರುವ ಹೇಳಿಕೆ ಯೊಂದು ವಿವಾದಕ್ಕೀಡಾಗಿದೆ. ಹಾಗಾಗಿ, ಅಲ್ಲಿನ ಜಿಲ್ಲಾಧಿಕಾರಿ ನೋಟಿಸ್‌ ಜಾರಿಗೊಳಿಸಿದ್ದಾರೆ. ಲಕ್ನೋದಲ್ಲಿ ಗುರುವಾರ ತಮ್ಮ ನಾಮಪತ್ರ ಸಲ್ಲಿಸಿದ ಅನಂತರ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಪಾಠಕ್‌, ತಮ್ಮ ಚುನಾವಣ ಧ್ಯೇಯವಾಕ್ಯ “ಒಂದು ನೋಟು, ಒಂದು ವೋಟು’ ಆಗಿರಲಿದೆ ಎಂದಿದ್ದರು. “ಈ ಹೇಳಿಕೆಯು ಚುನಾವಣ ನೀತಿ ಸಂಹಿತೆಯ ಉಲ್ಲಂಘನೆಯಾಗಿರುವುದರಿಂದ ಈ ಬಗ್ಗೆ ಉತ್ತರಿಸಬೇಕು’ ಎಂದು ನೋಟಿಸ್‌ನಲ್ಲಿ ಸೂಚಿಸಲಾಗಿದೆ. ಈ ನಡುವೆ, ಲಕ್ನೋದಲ್ಲಿ ಕಣಕ್ಕಿಳಿದಂತೆ ಪ್ರಧಾನಿ ನರೇಂದ್ರ ಮೋದಿ ಸ್ಪರ್ಧಿಸುತ್ತಿರುವ ವಾರಾಣಸಿ ಕ್ಷೇತ್ರದಲ್ಲೂ ತಾವು ಪಕ್ಷೇತರರಾಗಿ ಕಣಕ್ಕಿಳಿಯುವುದಾಗಿ ಪಾಠಕ್‌ ತಿಳಿಸಿದ್ದಾರೆ.

ಕೈಗೆ ಉಗ್ರರ ಜತೆ ಈಲೂ, ಈಲೂ: ಶಾ
ಕಾಂಗ್ರೆಸ್‌ ಪಕ್ಷಕ್ಕೆ ಭಯೋತ್ಪಾದಕರ ಜತೆ ಈಲೂ ಈಲೂ ಇದೆ ಎಂದು ಉತ್ತರಪ್ರದೇಶದ ಬದೌನ್‌ನಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಆರೋಪಿಸಿದ್ದಾರೆ. ಬಾಲಿವುಡ್‌ ಸಿನೆಮಾವೊಂದರ ಜನಪ್ರಿಯ ಹಾಡು “ಈಲೂ ಈಲೂ'(ಐ ಲವ್‌ ಯೂ) ಅನ್ನು ಬಳಸಿಕೊಂಡು ಕಾಂಗ್ರೆಸ್‌ ವಿರುದ್ಧ ಹರಿಹಾಯ್ದ ಅವರು, “ರಾಹುಲ್‌ ಬಾಬಾರ ಗುರು ಸ್ಯಾಮ್‌ ಪಿತ್ರೋಡಾ, ಪಾಕಿಸ್ಥಾನಕ್ಕೆ ಬಾಂಬ್‌ ಹಾಕಬೇಡಿ, ಸಂಧಾನ ಮಾತುಕತೆ ನಡೆಸಿ ಎಂದು ಹೇಳುತ್ತಾರೆ. ರಾಹುಲ್‌ ಅವರೇ, ನಿಮ್ಮ ಪಕ್ಷಕ್ಕೆ ಉಗ್ರರ ಜತೆ ಈಲೂ ಈಲೂ ಮಾಡಬೇಕೆಂದಿದ್ದರೆ ಮಾಡಿ. ಆದರೆ ನಮ್ಮ ಉದ್ದೇಶ ಸ್ಪಷ್ಟ. ಅವರು ಒಂದು ಗುಂಡು ಹೊಡೆದರೆ, ನಾವು ಬಾಂಬ್‌ನಿಂದಲೇ ಉತ್ತರಿಸುತ್ತೇವೆ’ ಎಂದು ಹೇಳಿದ್ದಾರೆ.

ಮೋದಿ ಸೀರಿಯಲ್‌ ವಿರುದ್ಧ ದೂರು
ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಎರೋಸ್‌ ನೌ ಎಂಬ ಡಿಜಿಟಲ್‌ ಪ್ಲಾಟ್‌ಫಾರಂನಲ್ಲಿ ಪ್ರಸಾರವಾಗುತ್ತಿರುವ ವೆಬ್‌ ಸಿರೀಸ್‌ ವಿರುದ್ಧ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್‌ ದೂರು ನೀಡಿದೆ. ಕೆಲವೇ ದಿನಗಳ ಹಿಂದೆ ಮೋದಿ ಕುರಿತ ಸಿನಿಮಾಗೆ ಚುನಾವಣಾ ಆಯೋಗ ತಡೆ ಒಡ್ಡಿತ್ತು. ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಮತದಾರರನ್ನು ಪ್ರಭಾವಿಸುವ ಉದ್ದೇಶದಿಂದ ಈ ವೆಬ್‌ ಸಿರೀಸ್‌ ಪ್ರಸಾರ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್‌ ಆರೋಪಿಸಿದೆ.

553 ಕೋಟಿ ರೂ. ಮೌಲ್ಯದ ವಸ್ತು ವಶ
ಚುನಾವಣಾ ನೀತಿ ಸಂಹಿತೆ ಜಾರಿಯಾದಾಗಿನಿಂದ ಇಲ್ಲಿಯವರೆಗೆ ತಮಿಳುನಾಡಿನಲ್ಲಿ ದಾಖಲೆ ರಹಿತವಾಗಿ ಸಾಗಿಸಲಾಗುತ್ತಿದ್ದ 553.23 ಕೋಟಿ ರೂ. ಮೌಲ್ಯದ ಬೆಲೆಬಾಳುವ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಆ ರಾಜ್ಯದ ಮುಖ್ಯ ಚುನಾವಣಾ ಆಯುಕ್ತ ರಾದ ಸತ್ಯನಾರಾಯಣ ಸಾಹೂ ತಿಳಿಸಿದ್ದಾರೆ. ಇದಲ್ಲದೆ, 129.51 ಕೋಟಿ ರೂ. ನಗದು, 422.72 ಕೋಟಿ ರೂ. ಮೌಲ್ಯದ ಚಿನ್ನ, ಬೆಳ್ಳಿ ಆಭರಣಗಳನ್ನೂ ವಶಕ್ಕೆ ಪಡೆಯಲಾಗಿದೆ ಎಂದಿದ್ದಾರೆ.

ಅಲಿಯೂ ನಮ್ಮವರೇ, ಬಜರಂಗಬಲಿಯೂ ನಮ್ಮವರೇ
“ಅಲಿ ಬಿಎಸ್‌ಪಿ-ಎಸ್ಪಿ ಮೈತ್ರಿ ಜತೆಗಿದ್ದರೆ, ಬಜರಂಗಬಲಿ ಬಿಜೆಪಿ ಜತೆಗಿದ್ದಾನೆ’ ಎಂಬ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ರ ಹೇಳಿಕೆಗೆ ಬಿಎಸ್ಪಿ ನಾಯಕಿ ಮಾಯಾವತಿ ತಿರುಗೇಟು ನೀಡಿದ್ದಾರೆ. ಬದೌನ್‌ನಲ್ಲಿ ಮಾತನಾಡಿದ ಮಾಯಾ, “ಸಿಎಂ ಯೋಗಿ ಅವರಿಗೆ ಹೇಳುವುದಿಷ್ಟೆ- ಅಲಿಯೂ ನಮ್ಮವನೇ, ಬಜರಂಗ ಬಲಿಯೂ ನಮ್ಮವನೇ… ನಮಗೆ ಇಬ್ಬರೂ ಬೇಕು. ಅದರಲ್ಲೂ ಬಜರಂಗಬಲಿ ನನ್ನದೇ ದಲಿತ ಸಮುದಾಯಕ್ಕೆ ಸೇರಿದವನು. ಇವರಿಬ್ಬರು ಒಂದಾಗಿರುವ ಕಾರಣ ನಮಗೆ ಈ ಬಾರಿ ಉತ್ತಮ ಫ‌ಲಿತಾಂಶ ಬರಲಿದೆ’ ಎಂದು ಹೇಳಿದ್ದಾರೆ.

ನಾನು ಜೆಡಿಯು-ಆರ್‌ಜೆಡಿ ಮೈತ್ರಿ ಮಾತುಕತೆಗಾಗಿ ಲಾಲು ಯಾದವ್‌ರನ್ನು ಭೇಟಿಯಾಗಿದ್ದೆ ಎಂಬ ಆರೋಪದ ಬಗ್ಗೆ ಲಾಲು ಅವರ ಜತೆಗೇ ಸಾರ್ವಜನಿಕ ಚರ್ಚೆಗೆ ಸಿದ್ಧ. ಅವರೇ ಸಮಯ ನಿಗದಿ ಮಾಡಿ ಬಹಿರಂಗ ಚರ್ಚೆಗೆ ಬರಲಿ.
ಪ್ರಶಾಂತ್‌ ಕಿಶೋರ್‌, ಜೆಡಿಯು ನಾಯಕ

ಚರ್ಚೆ ಬೇಡ ಎಂದವರು ಯಾರು? ಪ್ರಶಾಂತ್‌ ಕಿಶೋರ್‌ ನೇರವಾಗಿ ರಾಂಚಿ ಜೈಲಿಗೆ ಹೋಗಿ ಅಧಿಕಾರಿಗಳ ಅಗತ್ಯ ಅನುಮತಿ ಪಡೆದು ನನ್ನ ಪತಿ ಲಾಲುರನ್ನು ಹೊರಗೆ ಕರೆತರಲಿ. ಅನಂತರ ಅವರ ಆಸೆಯಂತೆ ಬಹಿರಂಗ ಚರ್ಚೆ ಮಾಡಲಿ.
ರಾಬ್ರಿ ದೇವಿ, ಆರ್‌ಜೆಡಿ ನಾಯಕಿ

ಮಧ್ಯಪ್ರದೇಶದಲ್ಲಿ ಕಮಲ್‌ನಾಥ್‌ ಸರಕಾರ ಮೋಸ ಮಾಡುತ್ತಿದೆ. ಯಾರಿಗೂ ಉದ್ಯೋಗ ಸಿಗುತ್ತಿಲ್ಲ. ಮ.ಪ್ರ ದಲ್ಲಿ ನಡೆಯುತ್ತಿರುವ ಒಂದೇ ಉದ್ಯೋಗ ಎಂದರೆ ಅಧಿಕಾರಿಗಳ ವರ್ಗಾವಣೆಯದ್ದು.
ಶಿವರಾಜ್‌ ಸಿಂಗ್‌ ಚೌಹಾಣ್‌, ಬಿಜೆಪಿ ನಾಯಕ

ಡಾಲರ್‌ ಎದುರು ರುಪಾಯಿ ಮೌಲ್ಯ ಪಾತಾಳಕ್ಕಿಳಿಯಲು ಪ್ರಧಾನಿ ಮೋದಿಯವರೇ ಕಾರಣ. ಐಸಿಯುನಲ್ಲಿದ್ದ ರುಪಾಯಿಯನ್ನು ಮೋದಿಯವರು ನೇರವಾಗಿ ಸ್ಮಶಾನಕ್ಕೇ ಕಳುಹಿಸಿಬಿಟ್ಟರು.
ಜ್ಯೋತಿರಾದಿತ್ಯ ಸಿಂದಿಯಾ, ಕಾಂಗ್ರೆಸ್‌ ನಾಯಕ

ಎಸ್‌ಪಿ ನಾಯಕ ಅಜಂ ಖಾನ್‌ರನ್ನು ನಾನು ಅಣ್ಣಾ ಎಂದು ಕರೆದೆ. ಆದರೆ, ಅವರು ನನ್ನನ್ನು ನಾಚೆ° ವಾಲಿ (ಕುಣಿಯುವವಳು) ಎಂದು ಸಂಬೋಧಿಸುವ ಮೂಲಕ ಅವಮಾನ ಮಾಡಿದರು.
ಜಯಪ್ರದಾ, ಬಿಜೆಪಿ ಅಭ್ಯರ್ಥಿ

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.