ವಿದೇಶ ಪ್ರವಾಸದಲ್ಲಿ ಪ್ರಧಾನಿ ಜತೆ ಯಾರೆಲ್ಲ ಇರ್ತಾರೆ: ಸಿಬಲ್
Team Udayavani, Feb 17, 2018, 3:24 PM IST
ಹೊಸದಿಲ್ಲಿ : ಪಿಎನ್ಬಿ ಬಹುಕೋಟಿ ವಂಚನೆ ಹಗರಣದಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ಮೇಲೆ ದಾಳಿ ನಡೆಸಿರುವ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಅವರು ಇಂದು ಶನಿವಾರ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಬೆಂಕಿ ಉಗುಳುವ ಭಾಷಣ ಮಾಡಿದರು.
“ಪ್ರಧಾನಿ ಮೋದಿ ಅವರು ಅಧಿಕೃತ ವಿದೇಶ ಪ್ರವಾಸ ಕೈಗೊಳ್ಳುವಾಗ ತಮ್ಮೊಂದಿಗೆ ಯಾರನ್ನೆಲ್ಲ ಕರೆದೊಯ್ಯುತ್ತಾರೆ ಎಂಬುದನ್ನು ಯಾಕೆ ಬಹಿರಂಗಪಡಿಸುವುದಿಲ್ಲ?’ ಎಂದು ಸಿಬಲ್ ಪ್ರಶ್ನಿಸಿದರು.
ಪಿಎನ್ಬಿ ಬಹುಕೋಟಿ ಹಗರದಲ್ಲಿ ಓರ್ವ ಮುಖ್ಯ ಆರೋಪಿಯಾಗಿರುವ ನೀರವ್ ಮೋದಿ ಅವರನ್ನು ಬಿಜೆಪಿ ರಕ್ಷಿಸುತ್ತಿದೆ ಎಂದು ಆರೋಪಿಸಿದ ಸಿಬಲ್, “ಪ್ರಧಾನಿಯವರು ಹೇಳುವಂತೆ ಸುಲಿಲಿತ ಉದ್ಯಮ ನಡೆಸುವ ಕ್ರಮ ಹೀಗೆಯಾ?’ ಎಂದು ಪ್ರಶ್ನಿಸಿದರು.
ದಾವೋಸ್ನಲ್ಲಿ ಈಚೆಗೆ ನಡೆದ ವಿಶ್ವ ಆರ್ಥಿಕ ಶೃಂಗಕ್ಕೆ ಹೋದ ಮೋದಿ ನಿಯೋಗದಲ್ಲಿ ನೀರವ್ ಮೋದಿ ಕೂಡ ಇದ್ದರು ಎಂದು ಕಾಂಗ್ರೆಸ್ ಈ ಮೊದಲು ಆಪಾದಿಸಿತ್ತು. ಬಿಜೆಪಿ ಈ ಆರೋಪಗಳನ್ನೆಲ್ಲ ಅಲ್ಲಗಳೆದು ಪ್ರಧಾನಿ ಮೋದಿ ಅವರು ನೀರವ್ ಮೋದಿ ಅವರೊಂದಿಗೆ ಯಾವುದೇ ಖಾಸಗಿ ಭೇಟಿ ಮಾತುಕತೆ ನಡೆಸಿಲ್ಲ ಎಂದು ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ
Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?
Vijay Mallya ಹಸ್ತಾಂತರಕ್ಕೆ ಫ್ರಾನ್ಸ್ನೊಂದಿಗೆ ಭಾರತ ಮಾತುಕತೆ
VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್
Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು