ಪತ್ನಿ ಕೊಟ್ಟ ಲಡ್ಡೂ ತಿಂದು ವಿಚ್ಛೇದನ ಕೊಟ್ಟ ಪತಿ..!

Team Udayavani, Aug 20, 2019, 6:45 PM IST

ಮೀರತ್ : ನಿಮ್ಮ ಗಂಡನ ಆರೋಗ್ಯ ಹದಗೆಟ್ಟಾಗ ನೀವೇನು ಮಾಡ್ತೀರಾ?  ಡಾಕ್ಟರ್ ಹತ್ತಿರ ಹೋಗ್ತೀರ ಅಲ್ವಾ? ಅದು ಬಿಟ್ಟು ಬೇರೇನು ಮಾಡ್ತೀರ?  ದೇವರ ಮೊರೆ ಹೋಗಿ ಬೇಗ ಹುಷಾರು ಆಗಲಿ ಎಂದು ದೇವರ ಮೇಲೆ ಭಾರ ಹಾಕಿ ಹರಕೆ ಇಡ್ತೀರ. ಆದರೆ ಇಲ್ಲೊಬ್ಬಳು ಹೆಂಗಸು ತನ್ನ ಪತಿಯ ಆರೋಗ್ಯ ಸರಿಯಾಗಬೇಕೆಂದು ಪ್ರತಿದಿನ ಲಡ್ಡೂ ಕೊಡುತ್ತಿದ್ದಾಳೆ.!

ಹೌದು. ಇಂಥ ಪ್ರಸಂಗ ನಡೆದಿರುವುದು ಉತ್ತರ ಪ್ರದೇಶದ ಮೀರತ್ ನಲ್ಲಿ. ಈ ದಂಪತಿಗೆ ಮದುವೆಯಾಗಿ ಮೂರು ಮಕ್ಕಳಿವೆ. ಗಂಡನಿಗೆ ಆಗಾಗ ಅನಾರೋಗ್ಯ ಕಾಡುತ್ತಿತ್ತು. ಪತ್ನಿಗೆ ದೈವ ಭಕ್ತಿ ಹೆಚ್ಚು. ಗಂಡನ ಈ ಸ್ಥಿತಿಯನ್ನು ನೋಡಿ ಬೇಸತ್ತ ಹೆಂಡತಿ ತನ್ನ ಗಂಡ ಹುಷಾರ್ ಆಗಬೇಕೆಂದು ಮಂತ್ರವಾದಿಯೊಬ್ಬಳ ಬಳಿ ಪರಿಹಾರ ಕೇಳಲು ಹೋಗುತ್ತಾಳೆ. ಈ ವೇಳೆಯಲ್ಲಿ ಮಂತ್ರವಾದಿ ನಿನ್ನ ಗಂಡನಿಗೆ ಬೆಳಗ್ಗೆ ಸಂಜೆ ಪ್ರತಿದಿನ ಲಡ್ಡೂ ಗಳನ್ನು ಕೊಡು ಸರಿಯಾಗುತ್ತಾನೆ ಅನ್ನುವ ಪರಿಹಾರ ಮಾರ್ಗವನ್ನು ಸೂಚಿಸುತ್ತಾರೆ.

ಮಂತ್ರವಾದಿಯ ಉಪಾಯದಂತೆ ನಡೆಯುವ ಪತ್ನಿ ತನ್ನ ಗಂಡನಿಗೆ ಪ್ರತಿದಿನ ಬೆಳಗ್ಗೆ ಹಾಗೂ ಸಂಜೆ 4 ನಾಲ್ಕು ಲಡ್ಡೂಗಳನ್ನುಮಾತ್ರ ಕೊಡಲು ಆರಂಭಿಸುತ್ತಾಳೆ. ಪ್ರತಿದಿನ ಲಡ್ಡೂ ಗಳನ್ನು ಮಾತ್ರ ತಿನ್ನುವ ಗಂಡನಿಗೆ ತನ್ನ ಪತ್ನಿಯ ಅತಿಯಾದ ನಂಬಿಕೆ ಸಹಿಸಲು ಆಗದು. ತನಗೆ ನಿನ್ನಿಂದ ವಿಚ್ಛೇದನ ಬೇಕೆಂದು ಕೌಟುಂಬಿಕೆ ನ್ಯಾಯಾಲಯದ ಕದ ತಟ್ಟಿದ್ದಾನೆ. ಕೌಟುಂಬಿಕ ನ್ಯಾಯಾಲಯ ಇಬ್ಬರವಾದವನ್ನು ಆಲಿಸಿ ಕೌನ್ಸಿಲಿಂಗ್ ಮಾಡಿದ್ದಾರೆ. ಆದರೆ ಈ ವೇಳೆಯಲ್ಲಿ ಪತ್ನಿಯ ಅತಿಯಾದ ಮೌಢ್ಯದಿಂದ ಕೌನ್ಸಿಲಿಂಗ್ ಪ್ರಯೋಗ ವಿಫಲವಾಗಿದೆ. ಈಗ ದಂಪತಿಗಳು ವಿಚ್ಛೇದನದ ಹೊಸ್ತಿಲಲ್ಲಿ ನಿಂತಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ