
“ತಂದೆಯ ಹತ್ಯೆಗೈದವರನ್ನು ಗಲ್ಲಿಗೇರಿಸುವವರೆಗೆ ಚಪ್ಪಲಿ ತೊಡುವುದಿಲ್ಲ’
ರಾಜಸ್ಥಾನದ ಕನ್ಹಯ್ಯಲಾಲ್ ಪುತ್ರನ ಶಪಥ
Team Udayavani, Sep 16, 2022, 8:30 PM IST

ಉದಯ್‌ಪುರ: “ನನ್ನ ತಂದೆಯನ್ನು ಹತ್ಯೆ ಮಾಡಿದ ಆರೋಪಿಗಳನ್ನು ಗಲ್ಲಿಗೇರಿಸುವವರೆಗೆ ನಾನು ಕಾಲಿಗೆ ಚಪ್ಪಲಿ, ಶೂ ತೊಡುವುದಿಲ್ಲ,’ ಎಂದು ರಾಜಸ್ಥಾನದ ಉದಯಪುರದಲ್ಲಿ ಜೂನ್‌ನಲ್ಲಿ ಹತ್ಯೆಯಾದ ಟೈಲರ್ ಕನ್ಹಯ್ಯಲಾಲ್ ಅವರ ಮಗ ಪ್ರತಿಜ್ಞೆ ಮಾಡಿದ್ದಾನೆ.
“ನನ್ನ ತಂದೆ ಹತ್ಯೆಯಾದ ದಿನದಿಂದಲೂ ನಾನು ಬರಿಗಾಲಿನಲ್ಲಿ ತಿರುಗಾಡುತ್ತಿದ್ದೇನೆ. ಅಪರಾಧಿಗಳನ್ನು ನೇಣಿಗೆ ಹಾಕುವವರೆಗೂ ಈ ಶಪಥ ಮುಂದುವರಿಯಲಿದೆ. ಈಗಲೂ ಸಹ ಆ ಘಟನೆಯಿಂದ ಹೊರಬರಲು ನನಗೆ ಸಾಧ್ಯವಾಗುತ್ತಿಲ್ಲ,’ ಎಂದು ಕನ್ಹಯ್ಯಲಾಲ್ ಪುತ್ರ ಯಶ್ ದುಃಖ ತೋಡಿಕೊಂಡಿದ್ದಾನೆ.
ಬಿಜೆಪಿ ವಕ್ತಾರೆ ನೂಪುರ್ ಶರ್ಮ ಅವರ ಹೇಳಿಕೆಯನ್ನು ಬೆಂಬಲಿಸಿ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿದ್ದಕ್ಕೆ 2022ರ ಜೂ.28ರಂದು ರಿಯಾಜ್ ಮತ್ತು ಗೌಸ್ ಮೊಹಮ್ಮದ್ ಎಂಬಿಬ್ಬರು ದುಷ್ಕರ್ಮಿಗಳು ಟೈಲರ್ ಕನ್ಹಯ್ಯಲಾಲ್ ಅವರ ಮಳಿಗೆಗೆ ನುಗ್ಗಿ ಶಿರಚ್ಛೇದ ಮಾಡಿ, ಹತ್ಯೆಗೈದಿದ್ದರು.
ಎನ್‌ಐಎ ಈ ಪ್ರಕರಣದ ತನಿಖೆ ನಡೆಸಿದ್ದು, ಪ್ರಕರಣ ಸಂಬಂಧ ಎಂಟು ಮಂದಿಯನ್ನು ಬಂಧಿಸಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತೆರಿಗೆ ವಂಚನೆ ಪ್ರಕರಣ: 69.65 ಕೋ.ರೂ. ಆಸ್ತಿ ಜಪ್ತಿ

ಗೋ ಫಸ್ಟ್ ವಿಮಾನಕ್ಕೆ 10 ಲಕ್ಷ ರೂ. ದಂಡ ವಿಧಿಸಿದ ಡಿಜಿಸಿಎ

ನನ್ನನ್ನು ಒತ್ತೆಯಲ್ಲಿ ಇರಿಸಲಾಗಿದೆ: ಫ್ರೆಂಚ್ ನಟಿ ಮೇರಿಯನ್ನೆ ಆರೋಪ

ಸಂಸ್ಕೃತವೇಕೆ ದೇಶದ ಅಧಿಕೃತ ಭಾಷೆಯಾಗಬಾರದು?: ಮಾಜಿ ಮುಖ್ಯ ನ್ಯಾಯಮೂರ್ತಿ ಎಸ್ಎ ಬೋಬ್ಡೆ

ಟಿಪ್ಪು ಸುಲ್ತಾನ್ ಉದ್ಯಾನದ ಹೆಸರು ಬದಲಾವಣೆಗೆ ಮಹಾರಾಷ್ಟ್ರ ಸರ್ಕಾರ ನಿರ್ಧಾರ
MUST WATCH

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan
