ರಾಜಸ್ಥಾನ : ಬಾವಿಯಲ್ಲಿ ತಾಯಿ ಮತ್ತು ಅವಳಿ ಮಕ್ಕಳ ಶವ ಪತ್ತೆ
Team Udayavani, Aug 8, 2018, 4:43 PM IST
ಜೈಪುರ : ಸಣ್ಣ ಪ್ರಾಯದ ವಿವಾಹಿತ ಮಹಿಳೆ ಮತ್ತು ಆಕೆಯ ಇಬ್ಬರು ಅವಳಿ ಮಕ್ಕಳ ಶವ ಬಾವಿಯೊಂದರಲ್ಲಿ ಪತ್ತೆಯಾಗಿರುವ ಘಟನೆ ರಾಜಸ್ಥಾನದ ಉದಯಪುರ ಜಿಲ್ಲೆಯಿಂದ ವರದಿಯಾಗಿದೆ.
ಮೃತರನ್ನು ಕೈಲಾಶಿ ಗಾಯರಿ (23), ಆಕೆಯ ಪುತ್ರ ಲವ ಮತ್ತು ಕುಶ (2) ಎಂದು ಗುರುತಿಸಲಾಗಿದೆ. ಇವರು ಇಲ್ಲಿನ ಮಂಡಪ ಗ್ರಾಮದ ನಿವಾಸಿಗಳು. ನಿನ್ನೆಯಿಂದ ಇವರು ನಾಪತ್ತೆಯಾಗಿದ್ದರು ಎಂದು ಎಸ್ಎಚ್ಓ ಫೂಲ್ಚಂದ್ ತಿಳಿಸಿದ್ದಾರೆ.
ಮೃತ ಮಹಿಳೆಯ ಗಂಡನು ಕೂಲಿ ಕಾರ್ಮಿಕ ಎಂದು ತಿಳಿದು ಬಂದಿದೆ. ಗ್ರಾಮಸ್ಥರ ನೆರವಿನಿಂದ ಮೃತ ದೇಹಗಳನ್ನು ಬಾವಿಯಿಂದ ಮೇಲೆತ್ತಲಾಯಿತೆಂದು ಎಸ್ಎಚ್ಓ ತಿಳಿಸಿದರು.