ಶಾಲೆಗಳಲ್ಲಿ ಯೋಗ: ಸುಪ್ರೀಂ ಅರ್ಜಿ ತಿರಸ್ಕೃತ
Team Udayavani, Aug 9, 2017, 8:05 AM IST
ಹೊಸದಿಲ್ಲಿ: ರಾಷ್ಟ್ರೀಯ ಯೋಗ ನೀತಿ ಮತ್ತು ದೇಶದ ಎಲ್ಲಾ ಶಾಲೆಗಳಲ್ಲಿ ಯೋಗ ಕಡ್ಡಾಯಗೊಳಿಸಬೇಕೆಂದು ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.
ಮನವಿ ತಿರಸ್ಕರಿಸಿದ ನ್ಯಾ| ಎಂ.ಬಿ. ಲೋಕುರ್ ನೇತೃತ್ವದ ಪೀಠ, “ಇದು ಸರಕಾರ ನಿರ್ಧರಿಸಬೇಕಿರುವ ವಿಚಾರ. ಶಾಲೆಗಳಲ್ಲಿ ಏನು ಹೇಳಿಕೊಡಬೇಕು, ಹೇಳಿಕೊಡಬಾರದು ಎಂದು ತೀರ್ಮಾನಿಸುವುದಕ್ಕೆ ಕೋರ್ಟ್ಗೆ ಅಧಿಕಾರವಿಲ್ಲ. ಈ ಕುರಿತು ನಿರ್ದೇಶನ ನೀಡಲು ನಾವು ಯಾರೂ ಅಲ್ಲ’ ಎಂದು ಹೇಳಿದೆ. ಶಾಲೆಗಳಲ್ಲಿ ಯೋಗಾಭ್ಯಾಸ ಮಾಡಿಸುವಂತೆ ಮತ್ತು ಯೋಗಕ್ಕೆ ಸಂಬಂಧಿಸಿ ಗುಣಮಟ್ಟದ ಕಲಿಕಾ ಪುಸ್ತಕಗಳನ್ನು ರಚಿಸುವಂತೆ ದೆಹಲಿ ಮೂಲದ ವಕೀಲ, ಬಿಜೆಪಿ ವಕ್ತಾರ ಅಶ್ವಿನ್ ಕುಮಾರ್ ಮತ್ತು ಜೆ.ಸಿ. ಸೇಥ್ ಸುಪ್ರೀಂಗೆ ಅರ್ಜಿ ಸಲ್ಲಿಸಿದ್ದರು. ಅಲ್ಲದೆ ಎಲ್ಲಾ ಮೂಲಭೂತ ಹಕ್ಕುಗಳಂತೆಯೇ ಯೋಗ ಕಲಿಕೆ ಮತ್ತು ಉತ್ತಮ ಆರೋಗ್ಯ ಹೊಂದುವುದೂ ಮೂಲಭೂತ ಹಕ್ಕು. ಅದಕ್ಕಾಗಿ 1-8ನೇ ತರಗತಿಗೆ ಯೋಗ ಕಲಿಕೆ ಕಡ್ಡಾಯಗೊಳಿಸಬೇಕು ಎಂದು ಕೋರಿದ್ದರು. “ಶಾಲೆಯಲ್ಲಿ ಏನು ಕಲಿಸಬೇಕು ಎಂಬುದು ಮೂಲಭೂತ ಹಕ್ಕು ಆಗಲ್ಲ’ ಎಂದಿದೆ ಕೋರ್ಟ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ
ಉಡುಪಿಯಲ್ಲಿ ಕೋಮು ಪ್ರಚೋದನೆಯ ಭಾಷಣ; ಕಾಜಲ್ ಹಿಂದುಸ್ತಾನಿ ವಿರುದ್ಧದ FIRಗೆ ಮಧ್ಯಂತರ ತಡೆ
Vote; ಬೇರೆಲ್ಲ ಬದಿಗಿಡಿ ಇಂದು ತಪ್ಪದೆ ಮತ ಚಲಾಯಿಸಿ! :ನೀವು ಗಮನಿಸಬೇಕಾದದ್ದು..
Reservation: ಏನಿದು ಒಬಿಸಿ-ಮುಸ್ಲಿಂ ಮೀಸಲಾತಿ ವಿವಾದ?
Election illegal: ನಿನ್ನೆ 2.31 ಕೋ. ರೂ. ಮೌಲ್ಯದ ಚುನಾವಣ ಅಕ್ರಮ ಪತ್ತೆ