ಬಿಲ್ಲವರ ಅ.ಕಾಂದಿವಲಿ ಸ್ಥಳೀಯ ಸಮಿತಿಯ ಪದಗ್ರಹಣ ಕಾರ್ಯಕ್ರಮ

Team Udayavani, Aug 3, 2018, 3:53 PM IST

0208mum03a.jpg

ಮುಂಬಯಿ: ಸುಮಾರು 86 ವರ್ಷಗಳ ಇತಿಹಾಸ ಹೊಂದಿರುವ ಬಿಲ್ಲವರ ಅಸೋಸಿಯೇಶನ್‌ ಸಮಾಜ ಬಾಂಧವರ ಅತೀ ದೊಡ್ಡ ಸೇವಾ ಸಂಸ್ಥೆಯಾಗಿದೆ. ಜಯ ಸಿ. ಸುವರ್ಣರ ಮಾರ್ಗದರ್ಶನದಲ್ಲಿ ಜನೋಪಯೋಗಿ ಕಾರ್ಯಗಳಿಂದ ಎತ್ತರಕ್ಕೆ ಏರಿದ ಸಂಸ್ಥೆಯಾಗಿದ್ದು, ಅಜ್ಞಾನವೆಂಬ ಕತ್ತಲೆಯ ಲೋಕಕ್ಕೆ ಜ್ಞಾನದ ದೀಪವನ್ನು  ಬೆಳಗಿದ ಶ್ರೀ ನಾರಾಯಣ ಗುರುಗಳು ಶಿಕ್ಷಣ ಮತ್ತು ಸಂಘಟನೆ ಜಾಗೃತಿಯನ್ನು ಮೂಡಿಸಿದವರು. ನಾವೆಲ್ಲ ಸಾಮಾನ್ಯ ಕಾರ್ಯಕರ್ತರ ಚಿಂತನೆಯ ಮೂಲಕ ಸಮಾಜಮುಖೀಗಳಾಗಬೇಕು ಎಂದು ಬಿಲ್ಲವರ ಅಸೋಸಿಯೇಶನ್‌ ನೂತನ ಅಧ್ಯಕ್ಷ ಚಂದ್ರಶೇಖರ್‌ ಪೂಜಾರಿ ನುಡಿದರು.

ಜು. 28 ರಂದು ಕಾಂದಿವಲಿ ಮಹಾವೀರ ನಗರದ ಪಾಂಚೋಲಿ ಶಾಲಾ ಸಭಾಂಗಣದಲ್ಲಿ ನಡೆದ ಬಿಲ್ಲವರ ಅಸೋಸಿಯೇಶನ್‌ನ ಕಾಂದಿವಲಿ ಸ್ಥಳೀಯ ಸಮಿತಿಯ ನೂತನ ಕಾರ್ಯಕಾರಿ ಸಮಿತಿಯ ಪದಗ್ರಹಣ ಕಾರ್ಯಕ್ರಮದಲ್ಲಿ  ಮಾತನಾಡಿದ ಅವರು, ಕಾಂದಿವಲಿ ಸ್ಥಳೀಯ ಸಮಿತಿಯ ಕಾರ್ಯವೈಖರಿ ವಿವೇಷವಾಗಿದ್ದು, ಇಲ್ಲಿ ಕಾರ್ಯಕಾರಿ ಸಮಿತಿಗೆ ಸದಾ ಬೆನ್ನೆಲುಬಾಗಿ ಶ್ರಮಿಸುವ ಭಾರತ್‌ ಬ್ಯಾಂಕಿನ ನಿರ್ದೇಶಕ ಗಂಗಾಧರ ಜೆ. ಪೂಜಾರಿ ಅವರ ಸೇವೆ ಅನನ್ಯವಾಗಿದೆ. ಸಮಿತಿಯು ಉನ್ನತ ಯೋಜನೆಯತ್ತ  ಚಿಂತನೆ ನಡೆಸುತ್ತಿರುವುದು ಅಭಿನಂದನೀಯ. ಮುಂದೆಯೂ ಸದಸ್ಯರ ಕೌಶಲ ಈ ಸಮಿತಿಗೆ ದೊರೆಯಲಿ ಎಂದು ಹಾರೈಸಿದರು.

ದೂರದೃಷ್ಟಿಯ ಫಲಶ್ರುತಿ
ಅಸೋಸಿಯೇಶನ್‌ ಉಪಾಧ್ಯಕ್ಷ ಹರೀಶ್‌ ಜಿ. ಅಮೀನ್‌ ಅವರು ಮಾತನಾಡಿ, 24 ಸ್ಥಳೀಯ ಕಚೇರಿಗಳನ್ನು ಹೊಂದಿದ ಬಿಲ್ಲವರ ಅಸೋಸಿಯೇಶನ್‌ ಜಯ ಸಿ. ಸುವರ್ಣರ ದೂರದೃಷ್ಟಿ ಚಿಂತನೆಯ ಫಲಶ್ರುತಿಯಾಗಿದೆ. 1995ರ ಅನಂತರ ಸಂಸ್ಥೆ ಹಾಗೂ ಭಾರತ್‌ ಬ್ಯಾಂಕಿನ ವೇಗದ ಬೆಳವಣಿಗೆಗೆ ಅವರ ಶ್ರಮದ ಕೊಡುಗೆ ಹಲವಾರು ಬದ್ಧತೆಯ ದೃಷ್ಟಿಕೋನದ ವ್ಯಕ್ತಿಗಳು ಸಮಿತಿಯಲ್ಲಿರುವುದರಿಂದ ಯಾವಾಗಲೂ ಯೋಜನಾಬದ್ಧ ಕಾರ್ಯಕ್ರಮಗಳು ಜರಗುತ್ತಿರಲಿ ಎಂದು ಅಭಿನಂದಿಸಿದರು.

ಸಬಿತಾ ಪೂಜಾರಿ ಬಳಗದವರು ಪ್ರಾರ್ಥನೆ ಗೈದರು. ಕೇಂದ್ರ ಸಮಿತಿಯ ಪದಾಧಿಕಾರಿಗಳನ್ನು ಸ್ಥಳೀಯ ಸಮಿತಿಯ ಪದಾಧಿಕಾರಿಗಳು ಗೌರವಿಸಿದರು. ಗೌರವ ಕಾರ್ಯದರ್ಶಿ ಉಮೇಶ್‌ ಸುರತ್ಕಲ್‌ ಅವರು ಕಳೆದ ಮೂರು ವರ್ಷಗಳ ಯೋಜನೆಗಳು, ಖರ್ಚು-ವೆಚ್ಚಗಳ ವರದಿಯನ್ನು ಮಂಡಿಸಿದರು. ನೂತನ ಸಮಿತಿಯ ಎಲ್ಲಾ ಸದಸ್ಯರಿಗೆ ಕೇಂದ್ರ ಕಚೇರಿಯ ಗೌರವ ಕಾರ್ಯದರ್ಶಿ ಧನಂಜಯ ಕೋಟ್ಯಾನ್‌ ಅವರು ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.

ಕೇಂದ್ರ ಸಮಿತಿಯ ಗೌರವ ಕೋಶಾಧಿಕಾರಿ ರಾಜೇಶ್‌ ಬಂಗೇರ, ಉಪಾಧ್ಯಕ್ಷರಾದ ಶ್ರೀನಿವಾಸ ಕರ್ಕೇರ, ದಯಾನಂದ ಆರ್‌. ಪೂಜಾರಿ, ಭಾರತ್‌ ಬ್ಯಾಂಕಿನ ನಿರ್ದೇಶಕರಾದ ಭಾಸ್ಕರ ಸಾಲ್ಯಾನ್‌, ಸೋಮನಾಥ ಬಿ. ಅಮೀನ್‌, ಮಾಜಿ ಉಪಾಧ್ಯಕ್ಷ ಪುರುಷೋತ್ತಮ ಕೋಟ್ಯಾನ್‌, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಜಯಂತಿ ವಿ. ಉಳ್ಳಾಲ್‌, ಯುವ ವಿಭಾಗದ ಕಾರ್ಯಾಧ್ಯಕ್ಷ ನಾಗೇಶ್‌ ಕೋಟ್ಯಾನ್‌, ಇತರ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಸ್ಥಳೀಯ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಸಮ್ಮಾನ
ಸ್ಥಳೀಯ ಸಮಿತಿಯ ನೂತನ ಕಚೇರಿ ಸ್ಥಾಪನೆಯಲ್ಲಿ ಮಹತ್ತರ ಕೊಡುಗೆ ನೀಡಿದ ಭಾರತ್‌ ಬ್ಯಾಂಕಿನ ನಿರ್ದೇಶಕ ಗಂಗಾಧರ ಜೆ. ಪೂಜಾರಿ ಅವರನ್ನು ಅಧ್ಯಕ್ಷ ಚಂದ್ರಶೇಖರ ಪೂಜಾರಿ ಇವರು ಸಮ್ಮಾನಿಸಿದರು. 

ಗೌರವ ಪ್ರಧಾನ ಕಾರ್ಯದರ್ಶಿ ಧನಂಜಯ ಕೋಟ್ಯಾನ್‌ ಕಾರ್ಯಕ್ರಮ ನಿರ್ವಹಿಸಿದರು. ಸಮಿತಿಯ ಕಾರ್ಯಾಧ್ಯಕ್ಷ ಯೋಗೇಶ್‌ ಕೆ. ಹೆಜ್ಮಾಡಿ ಸ್ವಾಗತಿಸಿ ವಂದಿಸಿದರು.
ನೂತನ ಕಾರ್ಯಕಾರಿ ಸಮಿತಿಯ ಗೌರವ ಕಾರ್ಯಾಧ್ಯಕ್ಷರಾಗಿ ಭಾಸ್ಕರ ಎಂ. ಪೂಜಾರಿ, ಕಾರ್ಯಾಧ್ಯಕ್ಷರಾಗಿ ಯೋಗೇಶ್‌ ಕೆ. ಹೆಜ್ಮಾಡಿ, ಉಪ ಕಾರ್ಯಾಧ್ಯಕ್ಷರುಗಳಾಗಿ ಎನ್‌. ಜಿ. ಪೂಜಾರಿ, ಜಗನ್ನಾಥ ಕುಕ್ಯಾನ್‌, ಗೌರವ ಕಾರ್ಯದರ್ಶಿಯಾಗಿ ಉಮೇಶ್‌ ಸುರತ್ಕಲ್‌, ಜತೆ ಕೋಶಾಧಿಕಾರಿಯಾಗಿ ಸಬಿತಾ ಜಿ. ಪೂಜಾರಿ, ಗೌರವ ಕೋಶಾಧಿಕಾರಿಯಾಗಿ ರಮೇಶ್‌ ಪಿ. ಬಂಗೇರ, ಜತೆ ಕೋಶಾಧಿಕಾರಿಯಾಗಿ ದೀಪಕ್‌ ಸುವರ್ಣ, ಕಾರ್ಯಕಾರಿ ಸಮಿತಿಯ ಸದಸ್ಯರುಗಳಾಗಿ ಜಿ. ಟಿ. ಪೂಜಾರಿ, ಜಿ. ವಿ. ಅಂಚನ್‌, ಮಂಜಯ್ಯ ಸಿ. ಅಮೀನ್‌, ಭಾಸ್ಕರ ಟಿ. ಬಂಗೇರ, ವಾರಿಜಾ ಎಸ್‌. ಕರ್ಕೇರ, ಲತಾ ವಿ. ಬಂಗೇರ, ಜಗನ್ನಾಥ ಎಂ. ಕೋಟ್ಯಾನ್‌, ವಿದ್ಯಾ ಆರ್‌. ಅಮೀನ್‌ ಆಯ್ಕೆಯಾದರು.

ವಿಶೇಷ ಆಮಂತ್ರಿತರಾಗಿ ವಿಜಯ ಡಿ. ಪೂಜಾರಿ, ಪುಟ್ಟಸ್ವಾಮಿ ಟಿ., ಪ್ರವೀಣ್‌ ರಾಥೋಡ್‌, ಸುಂದರಿ ಸುವರ್ಣ, ಸುನೀತಾ ಆರ್‌. ಅಮೀನ್‌, ಶೈಲೇಶ್‌ ಪೂಜಾರಿ, ಚಂದ್ರಾವತಿ ಪಿ. ಕೋಟ್ಯಾನ್‌, ರಂಜನ್‌ ಕೋಟ್ಯಾನ್‌, ಸುಜಾತಾ ಬಿ. ಪೂಜಾರಿ, ಪ್ರಮೋದಾ ಕೆ. ಪೂಜಾರಿ, ಆನಂದ್‌ ಎಚ್‌. ಪೂಜಾರಿ, ಶುಭಾ ಎಸ್‌. ಸುವರ್ಣ, ಯಮುನಾ ಬಿ. ಸಾಲ್ಯಾನ್‌,  ಶಶಿಕಲಾ ಎಂ. ಸನಿಲ್‌, ಸುಂದರ ಕೆ. ಪೂಜಾರಿ, ಹೇಮಲತಾ ಪೂಜಾರಿ, ವಾಸು ಕೆ. ಪೂಜಾರಿ, ನಾರಾಯಣ ಸುವರ್ಣ, ದಯಾನಂದ ಪೂಜಾರಿ, ಪ್ರತ್ವಿಕ್‌ ಪೂಜಾರಿ, ಯುವ ವಿಭಾಗದ ಸಮಿತಿಯಲ್ಲಿ ಗಾಯತ್ರಿ ಸುವರ್ಣ, ವಿಲಾಸ್‌ ಪೂಜಾರಿ, ಆಕಾಶ್‌ ಸುವರ್ಣ, ಅನಿಷಾ ಸಾಲ್ಯಾನ್‌, ಲಕ್ಷ್ಮೀ ಪೂಜಾರಿ, ಮಮತಾ ಪೂಜಾರಿ ಅವರು ಆಯ್ಕೆಯಾದರು.

ಕಪ್ಪುಚುಕ್ಕೆ ಬಾರದಂತೆ ಕಾರ್ಯನಿರ್ವಹಿಸಿ 
ಉಪಾಧ್ಯಕ್ಷ ಶಂಕರ ಡಿ. ಪೂಜಾರಿ ಇವರು ನೂತನ ಸಮಿತಿಯ ಸದಸ್ಯರನ್ನು ಅಭಿನಂದಿಸಿ ಮಾತನಾಡಿ, ಸದಸ್ಯರೆಲ್ಲ ಒಬ್ಬರಿಗೊಬ್ಬರು ಅರ್ಥೈಸಿಕೊಂಡು ಸನ್ಮಾರ್ಗದಲ್ಲಿ  ಸೇವೆಯನ್ನು  ನೀಡಬೇಕು. ಆಂತರಿಕವಾಗಿ ಯಾವುದೇ ಕಪ್ಪುಚುಕ್ಕೆ ಬಾರದಂತೆ ಕಾರ್ಯನಿರ್ವಹಿಸಿ ಎಂದು ನುಡಿದರು.

 ಚಿತ್ರ-ವರದಿ:ರಮೇಶ್‌ ಉದ್ಯಾವರ

ಟಾಪ್ ನ್ಯೂಸ್

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara: ಶಿಶಿರದ ಸಂಗೀತ ಯಾನ: “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.