ಬಂಟರ ಸಂಘದ ಮಾನವೀಯ ಸೇವೆಯಲ್ಲಿ ಕೈಜೋಡಿಸಿ: ದಿವಾಕರ ಶೆಟ್ಟಿ ಇಂದ್ರಾಳಿ


Team Udayavani, Oct 26, 2021, 11:56 AM IST

ಬಂಟರ ಸಂಘದ ಮಾನವೀಯ ಸೇವೆಯಲ್ಲಿ ಕೈಜೋಡಿಸಿ: ದಿವಾಕರ ಶೆಟ್ಟಿ ಇಂದ್ರಾಳಿ

ಡೊಂಬಿವಲಿ: ಲಕ್ಷಾಂತರ ಮಂದಿ ತುಳು – ಕನ್ನಡಿಗರು ನೆಲೆಸಿ ರುವ ಡೊಂಬಿವಲಿ ನಗರ ನಮಗೆ ಅನ್ಯೋನ್ಯದಿಂದ ಬಾಳಲು ಕಲಿಸಿದ ನಗರವಾಗಿದೆ. ಇಲ್ಲಿ  ಜಾತಿ, ಮತ, ಧರ್ಮದ ಭೇದವಿಲ್ಲ. ದಾನಗಳಲ್ಲಿ  ಶ್ರೇಷ್ಠ ದಾನ ಅನ್ನದಾನ, ವಿದ್ಯಾದಾನ ಹಾಗೂ ರಕ್ತದಾನವಾಗಿದೆ. ಅನ್ನದಾನದಿಂದ ಹೊಟ್ಟೆ ತುಂಬಿದರೆ, ವಿದ್ಯಾದಾನದಿಂದ ಒಂದು ಕುಟುಂಬವನ್ನು ಸಲಹಿದ ಆಶೀರ್ವಾದ ಸಿಗುತ್ತದೆ. ಆದರೆ ರಕ್ತದಾನದಿಂದ ಓರ್ವ ವ್ಯಕ್ತಿಯ ಪ್ರಾಣ ಉಳಿಸಿದ ಕೀರ್ತಿ ಲಭಿಸುತ್ತದೆ. ಡಾ| ಸತ್ಯಪ್ರಕಾಶ್‌ ಶೆಟ್ಟಿಯವರು ಬಂಟರ ಸಂಘದ ಹೆಲ್ತ್‌ ಕೇರ್‌ ಸಮಿತಿಯ ಕಾರ್ಯಾಧ್ಯಕ್ಷರಾದ ಬಳಿಕ ಬಂಟರ ಸಂಘದಲ್ಲಿ ಅರೋಗ್ಯ ಕ್ರಾಂತಿ ನಡೆಯುತ್ತಿದೆ. ಕೊರೊನಾ ಮಹಾಮಾರಿಯ ಬಹು ಕಷ್ಟದ ಸಂದರ್ಭ ದಲ್ಲೂ  ಸುಮಾರು 750 ಯುನಿಟ್‌ ರಕ್ತ ಸಂಗ್ರಹಿಸಿ ದಾಖಲೆಯನ್ನು ನಿರ್ಮಿಸಿದ್ದಾರೆ. ಬಂಟರ ಸಂಘ ಈ ಮಾನವೀಯ ಸೇವೆಯಲ್ಲಿ  ಎಲ್ಲರು ಕೈಜೋಡಿಸಬೇಕು ಎಂದು ಬಂಟರ ಸಂಘ ಮುಂಬಯಿ ಇದರ ಜತೆ ಕಾರ್ಯದರ್ಶಿ ದಿವಾಕರ ಶೆಟ್ಟಿ  ಇಂದ್ರಾಳಿ ತಿಳಿಸಿದರು.

ಅ. 24ರಂದು ಬೆಳಗ್ಗೆ ಡೊಂಬಿವಲಿ ಪೂರ್ವದ ಅಜ್ದೆಪಾಡಾದ ಶ್ರೀ ಅಯ್ಯಪ್ಪ ಮಂದಿರದ ಸುಧಾಮ ಸಭಾಗೃಹದಲ್ಲಿ  ಬಂಟರ ಸಂಘ ಡೊಂಬಿವಲಿ ಪ್ರಾದೇಶಿಕ ಸಮಿತಿಯ ವತಿಯಿಂದ ಜರಗಿದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೊರೊನಾ ಸಂದರ್ಭ ಮುಲುಂಡ್‌, ಥಾಣೆ ಪರಿಸರದಲ್ಲಿ  ಹಲವಾರು ರೋಗಿಗಳಿಗೆ ನಿಶುಲ್ಕವಾಗಿ ಸೇವೆ ಮಾಡಿದ ಡಾ| ಸತ್ಯಪ್ರಕಾಶ್‌ ಶೆಟ್ಟಿ ಅವರ ಸೇವೆ ಇತರರಿಗೆ ಮಾದರಿಯಾಗಿದೆ. ಅದೇ ರೀತಿ ಡೊಂಬಿವಲಿಯಲ್ಲಿ  ಡಾ| ವಿಜಯ ಎಂ. ಶೆಟ್ಟಿ ಅವರು ಸಮಾಜ ಸೇವೆ ಮಾಡುವ ಕ್ರಾಂತಿಯ ಕಿಡಿ ಹಚ್ಚಿದ್ದಾರೆ. ಡೊಂಬಿವಲಿ ಪ್ರಾದೇಶಿಕ ಸಮಿತಿಯಲ್ಲಿ ಮಹಿಳಾ ವಿಭಾಗ, ಯುವ ವಿಭಾಗದ ಸಂಪೂರ್ಣ ಸಹಕಾರದೊಂದಿಗೆ ಉತ್ತಮ ಕಾರ್ಯಕ್ರಮಗಳು ಜರಗುತ್ತಿದ್ದು, ಪ್ರಾದೇಶಿಕ ಸಮಿತಿಯ ಸಮಾಜ ಸೇವೆಯು ಇದೇ ರೀತಿಯಲ್ಲಿ  ಮುಂದುವರಿಯಲಿ. ಇಂದು ರಕ್ತದಾನ ಕಾರ್ಯಕ್ರಮದಲ್ಲಿ  ಸಹಭಾಗಿಯಾದ ಸರ್ವ ಸಂಘ ಸಂಸ್ಥೆಗಳಿಗೆ ಬಂಟರ ಸಂಘ ಮುಂಬಯಿ ಆಭಾರಿಯಾಗಿದೆ ಎಂದರು.

ಪ್ರಾದೇಶಿಕ ಸಮಿತಿಯ ಹೆಲ್ತ್ ಕೇರ್‌ ಸಮಿತಿಯ ಕಾರ್ಯಾಧ್ಯಕ್ಷ ಡಾ| ವಿಜಯ ಎಂ. ಶೆಟ್ಟಿ  ಮಾತನಾಡಿ, ರಕ್ತದಾನ ಮಾಡಲು ಯಾರೂ ಹೆದರುವ ಆವಶ್ಯಕತೆ ಇಲ್ಲ. ನೀವು ರಕ್ತದಾನ ಮಾಡಿದ ಬಳಿಕ ರಕ್ತ ಮತ್ತೆ ಉತ್ಪತ್ತಿಯಾಗುತ್ತದೆ. ಆದ್ದರಿಂದ ನೀವೆಲ್ಲರೂ ಯಾವುದೇ ಸಂದೇಹವಿಲ್ಲದೆ ರಕ್ತದಾನ ಮಾಡಬಹುದು. ಪ್ರತಿಯೊಬ್ಬರು ಆರು ತಿಂಗಳಿಗೊಮ್ಮೆ ರಕ್ತದಾನ ಮಾಡಿದರೆ ಮೂರು-ನಾಲ್ಕು ಜನರ ಜೀವ ಉಳಿಯುತ್ತದೆ ಎಂದರು.

ಥಿಂಕ್‌ ಫೌಂಡೇಶನ್‌ನ ಪ್ರಮುಖ ಡಾ| ವಿನಯ್‌ ಶೆಟ್ಟಿ  ಮಾತನಾಡಿ, ಬಂಟರ ಸಂಘದ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ಅವರ ಮುಂದಾಳತ್ವದಲ್ಲಿ  ಡಾ| ಸತ್ಯಪ್ರಕಾಶ್‌ ಶೆಟ್ಟಿ  ಅವರ ಪ್ರೇರಣೆಯಂತೆ ಪ್ರತಿನಿತ್ಯ ರಕ್ತದಾನ ಶಿಬಿರವನ್ನು ಅಯೋಜಿಸುತ್ತಿದ್ದೇವೆ. ರಕ್ತದಾನದ ಬಳಿಕ ರಕ್ತ ಮತ್ತೆ ಉತ್ಪತ್ತಿಯಾಗಿ ಸಹಜ ಸ್ಥಿತಿಗೆ ಬರಲು ಎರಡರಿಂದ ಮೂರು ವಾರಗಳು ಸಾಕು ಎಂದರು.

ಡಾ| ಸತ್ಯಪ್ರಕಾಶ್‌ ಶೆಟ್ಟಿ, ಡಾ| ವಿನಯ ಶೆಟ್ಟಿ ಅವರನ್ನು ದಿವಾಕರ ಶೆಟ್ಟಿ ಇಂದ್ರಾಳಿ, ಅಜೆªಪಾಡಾ ಶ್ರೀ ಅಯ್ಯಪ್ಪ ಮಂದಿರದ ಉಪಾಧ್ಯಕ್ಷ ಪ್ರಭಾಕರ ಶೆಟ್ಟಿ ಸತ್ಕರಿಸಿದರು. ಪ್ರಾದೇಶಿಕ ಸಮಿತಿಯ ಯುವ ವಿಭಾಗದ ಕಾರ್ಯಾಧ್ಯಕ್ಷ ಸಚಿನ್‌ ಶೆಟ್ಟಿ ಅವರನ್ನು ವಿಶೇಷವಾಗಿ ಸತ್ಕರಿಸಲಾಯಿತು. ಸಹಕಾರ ನೀಡಿದ ಸಂಘ, ಸಂಸ್ಥೆಯ ಪದಾಧಿಕಾರಿ ಗಳನ್ನು ಪುಷ್ಪಗುತ್ಛವನ್ನಿತ್ತು ಗೌರವಿಸಲಾ ಯಿತು. ವೇದಿಕೆಯಲ್ಲಿ  ದಿವಾಕರ ಶೆಟ್ಟಿ ಇಂದ್ರಾಳಿ, ಡಾ| ಸತ್ಯಪ್ರಕಾಶ್‌ ಶೆಟ್ಟಿ, ಸುಕುಮಾರ್‌ ಎನ್‌. ಶೆಟ್ಟಿ, ಕಲ್ಲಡ್ಕ ಕರುಣಾಕರ ಶೆಟ್ಟಿ, ಡಾ| ವಿನಯ್‌ ಶೆಟ್ಟಿ, ಅರುಣ್‌ ಶೆಟ್ಟಿ, ಜಯಕರ ಶೆಟ್ಟಿ, ಜಯಂತ್‌ ಶೆಟ್ಟಿ, ಸಚಿನ್‌ ಶೆಟ್ಟಿ, ಮಂಜುಳಾ ಶೆಟ್ಟಿ  ಉಪಸ್ಥಿತರಿದ್ದರು.

ಡೊಂಬಿವಲಿ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಸುಕುಮಾರ್‌ ಶೆಟ್ಟಿ ಅತಿಥಿ- ಗಣ್ಯರನ್ನು ಸ್ವಾಗತಿಸಿದರು. ಕಾರ್ಯ ದರ್ಶಿ ಹೇಮಂತ್‌ ಶೆಟ್ಟಿ  ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಬಂಟರ ಸಂಘದ ವತಿಯಿಂದ 5ನೇ ರಕ್ತದಾನ ಶಿಬಿರದ ಆಯೋಜನೆ ಇದಾಗಿದೆ. ಈ ವರೆಗೆ 750 ಯುನಿಟ್‌ ರಕ್ತವನ್ನು ಸಂಗ್ರಹಿಸಿದ್ದೇವೆ. ಈ ಸೇವೆ ಜಾತಿ, ಧರ್ಮಗಳನ್ನು ಮೀರಿ ಉಪಯೋಗಕ್ಕೆ ಬರುತ್ತದೆ. ಇಂದಿನ ಶಿಬಿರದಲ್ಲಿ 18ರಿಂದ 65ರ ಹರೆಯದವರೆಗಿನವವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದಾರೆ. ಒಂದು ಯುನಿಟ್‌ ರಕ್ತ ಮೂರು ಜನರ ಪ್ರಾಣ ಉಳಿಸುತ್ತದೆ. ಗುಜರಾತಿ, ಮಾರ್ವಾಡಿಗಳು ರಕ್ತದಾನ ನೀಡುವುದರಲ್ಲಿ ಪ್ರಥಮ ಸ್ಥಾನದಲ್ಲಿದ್ದಾರೆ. ತುಳು-ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ  ಮುಂದೆ ಬಂದು ರಕ್ತದಾನ ಮಾಡಬೇಕು.-ಡಾ| ಸತ್ಯಪ್ರಕಾಶ್‌ ಶೆಟ್ಟಿ, ಕಾರ್ಯಾಧ್ಯಕ್ಷರು,  ಹೆಲ್ತ್‌ಕೇರ್‌ ಸೆಂಟರ್‌ ಬಂಟರ ಸಂಘ ಮುಂಬಯಿ

ಡೊಂಬಿವಲಿ ಮಹಾನಗರ ಜಾತಿ, ಧರ್ಮಗಳನ್ನು ಮೀರಿದ ನಗರವಾಗಿದೆ. ಇಲ್ಲಿ ಅಜೆªಪಾಡಾ ಅಯ್ಯಪ್ಪ ಮಂದಿರ, ಪಶ್ಚಿಮ ವಿಭಾಗ ನವರಾತ್ರೋತ್ಸವ ಮಂಡಳಿ, ಜಗದಂಬಾ ಮಂದಿರ ಜಾತಿ, ಧರ್ಮಗಳನ್ನು ಮೀರಿ ಬೆಳೆದಿದೆ. ನಮ್ಮ ಇಂದಿನ ರಕ್ತದಾನ ಶಿಬಿರಕ್ಕೆ ಎಲ್ಲರೂ ಸಹಕಾರ ನೀಡಿ¨ªಾರೆ. ವಿಶೇಷವಾಗಿ ಮಹಿಳಾ ವಿಭಾಗ, ಯುವ ವಿಭಾಗದ ಸಹಕಾರ ಬಹಳಷ್ಟಿದೆ. ಮುಂದಿನ ದಿನಗಳಲ್ಲಿ  ಡೊಂಬಿವಲಿಯ ಸರ್ವ ತುಳು-ಕನ್ನಡಿಗರ ಹಿತದೃಷ್ಟಿಯಿಂದ ಬೃಹತ್‌ ಆರೋಗ್ಯ ಶಿಬಿರವನ್ನು ಮಾಡುವ ಯೋಜನೆಯಿದೆ. ತಮ್ಮೆಲ್ಲರ ಸಹಕಾರ ಸದಾ ಇರಲಿ.-ಸುಕುಮಾರ್‌ ಎನ್‌. ಶೆಟ್ಟಿ , ಕಾರ್ಯಾಧ್ಯಕ್ಷರು,  ಬಂಟರ ಸಂಘ ಡೊಂಬಿವಲಿ ಪ್ರಾದೇಶಿಕ ಸಮಿತಿ

ಟಾಪ್ ನ್ಯೂಸ್

kambala5

ಹೊಸಮಠ ಕಂಬಳದಲ್ಲಿ ಹಲಗೆ ಸಹಿತ ಕೆರೆಗೆ ಜಿಗಿದ ಕೋಣಗಳು ; ತಪ್ಪಿದ ಅನಾಹುತ

cm-bomm

ಪಶ್ಚಿಮ ಘಟ್ಟ ಪರಿಸರ ಸೂಕ್ಷ್ಮ ವಲಯ: ರಾಜ್ಯ ಸರ್ಕಾರದ ವಿರೋಧ

yoga

ಎ ಮಂಜುಗೆ ಸೆಡ್ಡು : ಬಿಜೆಪಿಗೆ ಮರಳಿದ ಯೋಗ ರಮೇಶ್

1-ffdd

ಅವ್ಯವಸ್ಥೆಯ ಕುರಿತು ದೂರು : ದೆಹಲಿ ವಿಮಾನ ನಿಲ್ದಾಣದಲ್ಲಿ 20 ಪರೀಕ್ಷಾ ಕೌಂಟರ್‌

ಕೋಟಿ ರೂ.ಬಿಡುಗಡೆಯಾದರೂ ಬಿಳಿಗಿರಿರಂಗನ ದೇಗುಲದಲ್ಲಿ ಕಳಪೆ ನೆಲಹಾಸು

ಕೋಟಿ ರೂ.ಬಿಡುಗಡೆಯಾದರೂ ಬಿಳಿಗಿರಿರಂಗನ ದೇಗುಲದಲ್ಲಿ ಕಳಪೆ ನೆಲಹಾಸು

1-ffdfdf

ಖ್ಯಾತ ಪತ್ರಕರ್ತ, ಪದ್ಮಶ್ರೀ ವಿನೋದ್ ದುವಾ ವಿಧಿವಶ

ಮತ್ತೆ ಮಳೆ ಅರ್ಭಟ, ನೆಲಕಚ್ಚಿದ ಬೆಳೆ : ರಾಗಿ ತೆನೆ ಕೊಯ್ಲು ಮಾಡಲಾಗದೇ ರೈತರ ಪರದಾಟ

ಮತ್ತೆ ಮಳೆ ಅರ್ಭಟ, ನೆಲಕಚ್ಚಿದ ಬೆಳೆ : ರಾಗಿ ತೆನೆ ಕೊಯ್ಲು ಮಾಡಲಾಗದೇ ರೈತರ ಪರದಾಟಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಾಮಗಾರಿ ಪೂರ್ಣಗೊಳಿಸಲು ಸೂಚನೆ

ಕಾಮಗಾರಿ ಪೂರ್ಣಗೊಳಿಸಲು ಸೂಚನೆ

ಇಂಗ್ಲಿಷ್‌ ವ್ಯಾಮೋಹ ಭಾಷೆಯ ಅಳಿವಿಗೆ ಪ್ರಮುಖ ಕಾರಣ: ನ್ಯಾಯವಾದಿ ಪ್ರಕಾಶ್‌ ಎಲ್‌. ಶೆಟ್ಟಿ

ಇಂಗ್ಲಿಷ್‌ ವ್ಯಾಮೋಹ ಭಾಷೆಯ ಅಳಿವಿಗೆ ಪ್ರಮುಖ ಕಾರಣ: ನ್ಯಾಯವಾದಿ ಪ್ರಕಾಶ್‌ ಎಲ್‌. ಶೆಟ್ಟಿ

ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಕಾರ್ಯಗಳಿಗೆ ಎಲ್ಲರ ಸಹಕಾರ ಅಗತ್ಯ: ರತ್ನಾಕರ ಜಿ. ಪೂಜಾರಿ

ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಕಾರ್ಯಗಳಿಗೆ ಎಲ್ಲರ ಸಹಕಾರ ಅಗತ್ಯ: ರತ್ನಾಕರ ಜಿ. ಪೂಜಾರಿ

ಕಲಾಜಗತ್ತು ಕೂಡು ಕುಟುಂಬದ ರಂಗಭೂಮಿ: ಡಾ| ತೋನ್ಸೆ ವಿಜಯ ಕುಮಾರ್‌ ಶೆಟ್ಟಿ

ಕಲಾಜಗತ್ತು ಕೂಡು ಕುಟುಂಬದ ರಂಗಭೂಮಿ: ಡಾ| ತೋನ್ಸೆ ವಿಜಯ ಕುಮಾರ್‌ ಶೆಟ್ಟಿ

ತುಳುನಾಡಿನ ಸಂಸ್ಕೃತಿ ಮೇಳೈಸುವ ಗುರಿ: ಕಾವೂರುಗುತ್ತು ಹೇಮಂತ್‌ ಶೆಟ್ಟಿ

ತುಳುನಾಡಿನ ಸಂಸ್ಕೃತಿ ಮೇಳೈಸುವ ಗುರಿ: ಕಾವೂರುಗುತ್ತು ಹೇಮಂತ್‌ ಶೆಟ್ಟಿ

MUST WATCH

udayavani youtube

ಹೊಸಮಠ ಕಂಬಳದಲ್ಲಿ ಹಲಗೆ ಸಹಿತ ಕೆರೆಗೆ ಜಿಗಿದ ಕೋಣಗಳು ; ತಪ್ಪಿದ ಅನಾಹುತ

udayavani youtube

ನಮ್ಮ ನೌಕಾಪಡೆ ಎಲ್ಲದಕ್ಕೂ ಸನ್ನದ್ಧ !

udayavani youtube

ಸರ್ಕಾರ ಹೇಗೆಲ್ಲಾ ರೈತರ ಬೆಂಬಲಕ್ಕೆ ನಿಂತಿದೆ ?

udayavani youtube

ಬಂಟ್ವಾಳ : ಬೇಟೆಗಾಗಿ ಬಂದು ಹೆದರಿ ಓಡಿದ ಚಿರತೆ : ದೃಶ್ಯ ಸಿಸಿಟಿವಿಯಲ್ಲಿ ಸೆರೆ

udayavani youtube

ಚಿಕ್ಕಮಗಳೂರು : ಕಾಫಿ ತೋಟದೊಳಗೆ ನುಗ್ಗಿದ ಮಾಜಿ ಸಿಎಂ ಸಿದ್ದರಾಮಯ್ಯ ಬೆಂಗಾವಲು ವಾಹನ

ಹೊಸ ಸೇರ್ಪಡೆ

ಪುತ್ತೂರು ದೇಗುಲ: ಲಕ್ಷದೀಪೋತ್ಸವ

ಪುತ್ತೂರು ದೇಗುಲ: ಲಕ್ಷದೀಪೋತ್ಸವ

acb

ಚಾಮರಾಜನಗರ : ತೆರಿಗೆ ಇಲಾಖೆಯ ಇಬ್ಬರು ಇನ್‌ಸ್ಪೆಕ್ಟರ್‌ಗಳು ಎಸಿಬಿ ಬಲೆಗೆ

kambala5

ಹೊಸಮಠ ಕಂಬಳದಲ್ಲಿ ಹಲಗೆ ಸಹಿತ ಕೆರೆಗೆ ಜಿಗಿದ ಕೋಣಗಳು ; ತಪ್ಪಿದ ಅನಾಹುತ

cm-bomm

ಪಶ್ಚಿಮ ಘಟ್ಟ ಪರಿಸರ ಸೂಕ್ಷ್ಮ ವಲಯ: ರಾಜ್ಯ ಸರ್ಕಾರದ ವಿರೋಧ

yoga

ಎ ಮಂಜುಗೆ ಸೆಡ್ಡು : ಬಿಜೆಪಿಗೆ ಮರಳಿದ ಯೋಗ ರಮೇಶ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.