ಬೊರಿವಲಿ ಶ್ರೀ ಶನಿಮಹಾತ್ಮ ಪೂಜಾ ಮಿತ್ರ ಮಂಡಳಿ ಜೂ. 3: ಶನಿಜಯಂತಿ
Team Udayavani, Jun 1, 2019, 1:35 PM IST
ಮುಂಬಯಿ: ಬೊರಿವಲಿ ಪೂರ್ವದ ಚಾಗುಲೆ ನಗರ ಸಾವರ್‌ಪಾಡಾದ ಶ್ರೀ ಶನಿಮಹಾತ್ಮ ಪೂಜಾ ಮಿತ್ರ ಮಂಡಳಿ ಸಂಚಾಲಕತ್ವದ ಶ್ರೀ ಶನಿಮಂದಿರದಲ್ಲಿ ಜೂ. 3 ರಂದು ಶ್ರೀ ಶನೀಶ್ವರ ಜಯಂತಿ ಆಚರಣೆಯು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ಜರಗಲಿದೆ.
ಧಾರ್ಮಿಕ ಕಾರ್ಯಕ್ರಮವಾಗಿ ಬೆಳಗ್ಗೆ ಯಿಂದ ಪಂಚಾಮೃತ ಅಭಿಷೇಕ, ಸಂಜೆ 6.30 ರಿಂದ ಮಂಡಳಿಯ ಸದಸ್ಯರಿಂದ ಭಜನಾ ಕಾರ್ಯಕ್ರಮ, ಆನಂತರ ರಂಗಪೂಜೆ, ಸರ್ವ ಸೇವಾ ಪೂಜಾ ವಿಧಿ ವಿಧಾನ, ಮಹಾಮಂಗಳಾರತಿ ಜರಗಲಿದೆ. ಇದೇ ಸಂದರ್ಭದಲ್ಲಿ ಭಕ್ತರೊಬ್ಬರಿಂದ ಬೆಳಗ್ಗೆಯಿಂದ ರಾತ್ರಿಯವರೆಗೆ ಲಡ್ಡು ಪ್ರಸಾದ ಸೇವೆ ನೀಡಲಾಗುವುದು. ಶನಿದೇವರಿಗೆ ವಿಶೇಷ ಅಲಂಕಾರ ಸೇವೆಯನ್ನು ಆಯೋಜಿಸಲಾಗಿದೆ ಎಂದು ಶನಿಮಹಾತ್ಮ ಪೂಜಾ ಮಿತ್ರ ಮಂಡಳಿಯ ಅಧ್ಯಕ್ಷರು, ಕಾರ್ಯಕಾರಿ ಸಮಿತಿಯ ಸದಸ್ಯರು, ವಿಶ್ವಸ್ತ ಸದಸ್ಯರು, ಸರ್ವ ಸದಸ್ಯರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.