ಕತಾರ್‌ ಬಂಟ್ಸ್‌  ಸಂಘದಿಂದ ಸಮ್ಮಾನ,ಪ್ರಶಸ್ತಿ ಪ್ರದಾನ

Team Udayavani, May 19, 2018, 4:56 PM IST

1805mum01.jpg

ಮುಂಬಯಿ:  ಕತಾರ್‌ನ ಬಂಟ್ಸ್‌ ಸಂಘದ  ಪಂಚಮ ವಾರ್ಷಿ ಕೋತ್ಸವ ಸಂಭ್ರಮವು  ಜರಗಿದ್ದು ಈ ಸಂದರ್ಭದಲ್ಲಿ ಕತಾರ್‌ನ ಪ್ರತಿಪಿuತ ಎಟಿಎಸ್‌ ಸಮೂಹದ ಆಡಳಿತ ನಿರ್ದೇಶಕ ಮೂಡಂಬೈಲು ರವಿ ಶೆಟ್ಟಿ ಹಾಗೂ ಜ್ಯೋತಿ  ರವಿ ಶೆಟ್ಟಿ ದಂಪತಿಯನ್ನು  ಸಮ್ಮಾನಿಸಲಾಯಿತು. 

ಕತಾರ್‌ ಕರ್ನಾಟಕ ಮುಸ್ಲಿಂ ಕಲ್ಚರಲ್‌ ಅಸೋಸಿಯೇಶನ್‌ ಅಧ್ಯಕ್ಷ ಅಬ್ದುಲ್ಲಾ ಮೋನು ಅವರಿಗೆ  ಬಂಟ್ಸ್‌ ಕತಾರ್‌ನ ಪ್ರಕಾಶ್‌ ಚಂದ್ರ ಅಜಿಲ ಸ್ಮರಣಾರ್ಥ ಸೇವಾ ಸಂಪದ ಪ್ರಶಸ್ತಿ 2018 ನೀಡಿ  ಗೌರವಿಸಲಾಯಿತು.

ಹವ್ಯಾಸಿ ಯಕ್ಷಗಾನ ಕಲಾವಿದ ರಾಗಿ ಕತಾರ್‌ನಲ್ಲಿ ಯಕ್ಷಗಾನದ ಕಂಪನ್ನು ಪಸರಿಸಿದ ಉದ್ಯಮಿ, ಕಲಾ ಮತ್ತು ಕ್ರೀಡಾ ಪೋಷಕ, ಸಾಮಾಜಿಕ ಸೇವಾ ಚಟುವಟಿಕೆಗಳ ಮುಂಚೂಣಿಯ ಯುವ ಧುರೀಣ ರವಿ ಶೆಟ್ಟಿ ಅವರು ಕರ್ನಾಟಕ ಸಂಘ, ತುಳುಕೂಟ, ಬಂಟ್ಸ್‌ ಕತಾರ್‌ ಮೊದಲಾದ ಸಂಘಟನೆಗಳ ಮುಂಚೂಣಿ ನಾಯಕರಾಗಿ ಸಲ್ಲಿಸುತ್ತಿರುವ  ಸೇವೆ ಶ್ಲಾಘನೀಯ ಎಂದು ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಪಾಲ್ಗೊಂಡ ಪುಣೆ ಸಿಂಬಾಸೀಸ್‌ ಸ್ಕೂಲ್‌ ಆಫ್‌ ಲಾ ಕಾಲೇಜಿನ ನಿರ್ದೇಶಕಿ   ಡಾ| ಶಶಿಕಲಾ ಶೆಟ್ಟಿ ನುಡಿದರು.

ಅತಿಥಿ ಸತ್ಕಾರ, ಕಲಾವಿದರಿಗೆ ಪ್ರೋತ್ಸಾಹ, ನಿರಂತರ ಚಟುವಟಿಕೆಗಳ ಮಧ್ಯೆ ಯಶಸ್ವೀ ಉದ್ಯಮಿಯಾಗಿ  ನೂರಾರು ತುಳುವರಿಗೆ ಉದ್ಯೋಗ ದಾತರಾಗಿರುವ ರವಿ ಶೆಟ್ಟಿ  ದಂಪತಿಯ ಸಾಧನೆಯನ್ನು  ಭಾಗವತ ಪಟ್ಲಗುತ್ತು ಸತೀಶ್‌ ಶೆಟ್ಟಿ ಸ್ಮರಿಸಿ ಹಾರೈಸಿದರು. ದೋಹ  ಕತಾರ್‌ನ ಇಂಡಿಯನ್‌ ಕಲ್ಚರಲ್‌ ಸೆಂಟರ್‌ನ ಅಧ್ಯಕ್ಷೆ  ಮಿಲನ್‌ ಅರುಣ್‌, ಹವ್ಯಾಸಿ ಯಕ್ಷಗಾನ ಕಲಾವಿದ ಕದ್ರಿ ನವನೀತ ಶಟ್ಟಿ, ಯಂ. ಪಲಾಂಜಿ ಸಂಸ್ಥೆಯ ಪ್ರಧಾನ ಪ್ರಬಂಧಕ ಜೆಪ್ಪು ಚಿದಾನಂದ ನಾಯ್ಕ, ಕತಾರ್‌ ಡಿಸೈನ್‌ ಕನ್ಸ್‌ಸೋರ್ಟಿಯಂ ಸಂಸ್ಥೆಯ ಬಿ. ಆರ್‌. ಸತೀಶ್‌ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.

ಬಂಟ್ಸ್‌ ಕತಾರ್‌ನ ಅಧ್ಯಕ್ಷ ನವನೀತ ಶೆಟ್ಟಿ ಸ್ವಾಗತಿಸಿದರು. ರಾಮ್‌ ಮೋಹನ್‌ ರೈ ಅಭಿನಂದನಾ ಭಾಷಣ ಮಾಡಿದರು. ಅಮತಿ ಅಕ್ಷಿಣಿ  ಶೆಟ್ಟಿ ಮತ್ತು ನವೀನ್‌ ಶೆಟ್ಟಿ ಇರುವೈಲು  ನಿರೂಪಿಸಿದರು. ಸಮುದಾಯದ ಸದಸ್ಯರಿಂದ ಭಾರತೀಯ ಹಬ್ಬಗಳ ವೈಶಿಷ್ಟÂವನ್ನು ವಿವಿಧ ನೃತ್ಯಗಳಿಂದ ಅನಾವರಣಗೊಳಿಸಲಾಯಿತು. ಪಟ್ಲ ಸತೀಶ್‌ ಶೆಟ್ಟಿ ನಿರ್ದೇಶನದಲ್ಲಿ ಖ್ಯಾತ ಕಲಾವಿದರಿಂದ “ಚಂದ್ರಹಾಸ  ಚರಿತ್ರೆ’ ಯಕ್ಷಗಾನ ಪ್ರದಶನಗೊಂಡಿತು. ಉಪಾಧ್ಯಕ್ಷ  ರಾಮಚಂದ್ರ ಶೆಟ್ಟಿ  ಪೇಜಾವರ  ಪ್ರಧಾನ ಕಾರ್ಯದರ್ಶಿ ರೋಶನ್‌ ಶೆಟ್ಟಿ, ಕೋಶಾಧಿಕಾರಿ ಧನಂಜಯ ಶೆಟ್ಟಿ ಉಪಸ್ಥಿತರಿದ್ದರು.  ಸಾಂಸ್ಕೃತಿಕ ಕಾರ್ಯದರ್ಶಿ  ಚೈತಾಲಿ ಉದಯ ಶೆಟ್ಟಿ ವಂದಿಸಿದರು. 

ಚಿತ್ರ- ವರದಿ: ರೊನಿಡಾ ಮುಂಬಯಿ

ಟಾಪ್ ನ್ಯೂಸ್

Sumalatha Ambareesh ಮಂಡ್ಯದಲ್ಲಿ ಚುನಾವಣೆ ಪ್ರಚಾರಕ್ಕೆ ನನ್ನನ್ನು ಕರೆದಿಲ್ಲ

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara: ಶಿಶಿರದ ಸಂಗೀತ ಯಾನ: “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Sumalatha Ambareesh ಮಂಡ್ಯದಲ್ಲಿ ಚುನಾವಣೆ ಪ್ರಚಾರಕ್ಕೆ ನನ್ನನ್ನು ಕರೆದಿಲ್ಲ

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.